ಡ್ರಗ್ಸ್, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಉಡುಪಿ ಎಸ್ ಪಿ ವಿಷ್ಣುವರ್ಧನ್ ಅವರಿಂದ ದಿಢೀರ್ ಕಾರ್ಯಾಚರಣೆ

Spread the love

ಡ್ರಗ್ಸ್, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಉಡುಪಿ ಎಸ್ ಪಿ ವಿಷ್ಣುವರ್ಧನ್ ಅವರಿಂದ ದಿಢೀರ್ ಕಾರ್ಯಾಚರಣೆ

ಉಡುಪಿ: ಗಾಂಜಾ ಮಾರಾಟ ಮಾಡುವವರು ಮತ್ತು ಗಾಂಜಾ ಸೇವಿಸುವವರ ಮೇಲೆ ಉಡುಪಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಚೆಕ್ ಪೋಸ್ಟ್, ನಗರ ಪ್ರದೇಶ, ತಾಲೂಕು ಜಿಲ್ಲಾ ಗಡಿಯಲ್ಲಿ ಹೆಚ್ಚು ಹೆಚ್ಚು ತಪಾಸಣೆ ಮಾಡುತ್ತಿದ್ದಾರೆ. ವಾಹನಗಳ ತಪಾಸಣೆ ಮಾಡುವ ಜೊತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕೂಡ ಕೇಸುಗಳನ್ನು ದಾಖಲಿಸುತ್ತಿದ್ದಾರೆ.

ಅದರಂತೆ ಸೋಮವಾರ ಸಂಜೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಅವರು ನಗರದ ಕಲ್ಸಂಕ ಜಂಕ್ಷನ್ ನಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ ವಾಹನಗಳ ತಪಾಸಣೆ ನಡೆಸಿದರು.

ಈ ವೇಳೆ ಉಡುಪಿ – ಮಣಿಪಾಲ ರಾಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ಈ ವೇಳೆ ಗಾಂಜಾ ಅಥವಾ ಮಾದಕ ದ್ರವ್ಯಗಳಂತಹ ಯಾವುದೇ ಸಾಗಾಟ ತಪಾಸಣೆ ವೇಳೆಯಲ್ಲಿ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಸಂಚಾರ ನಿಯಮ ಉಲ್ಲಂಘಿಸಿ ಕರ್ಕಶ ಹಾರ್ನ್ ಬಳಕ, ಕಣ್ಣುಕೋರೈಸುವ ನೀಲಿ ಲೈಟುಗಳು , ಹೆಡ್ಲೈಟ್ ನ ಪಕ್ಕದಲ್ಲಿ ಇತೃ ಸವಾರರಿಗೆ ಇರಿಟೇಷನ್ ಮಾಡುವ ನೀಲಿಬಣ್ಣದ ಎಲ್ಇಡಿ ಲೈಟ್ ಗಳನ್ನು ಅಳವಡಿಸಿರುವ ಸವಾರರಿಗೆ ಪೊಲೀಸರು ದಂಡ ವಿಧಿಸಿದರು. ಕಾರ್ಯಾಚರಣೆ ವೇಳೆ ಒಟ್ಟು 115 ಪ್ರಕರಣಗಳನ್ನು ದಾಖಲಿಸಿದ್ದು ರೂ 65 ಸಾವಿರ ದಂಡವನ್ನು ವಸೂಲಿ ಮಾಡಲಾಗಿದೆ.

ಇದೇ ವೇಳೆ ಮಾತನಾಡಿದ ಎಸ್ಪಿ ವಿಷ್ಣುವರ್ಧನ್ ಅವರು ಮೋಟಾರು ಕಾಯ್ದೆಗಳನ್ನು ಉಲ್ಲಂಘಿಸಿದ ಕೇಸುಗಳು ದಾಖಲಾಗಿದ್ದು ದಂಡವನ್ನು ಉಡುಪಿ ನಗರ ಪೊಲೀಸರು ವಶಪಡಿಸಿದ್ದಾರೆ. ಇನ್ನೆರಡು ದಿನದಲ್ಲಿ ಡ್ರಗ್ ಪೆಡ್ಲರ್ ಪರೇಡ್ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾದಕ ದ್ರೌವ್ಯ ಮಾರಾಟ, ಟ್ರಾಫಿಕ್ ರೂಲ್ಸ್ ಬ್ರೇಕ್ ವಿರುದ್ಧ ಜಾಗೃತಿ ಮೂಡಿಸಿ ದಂಡ ಹಾಕುವುದಾಗಿ ಅವರು ತಿಳಿಸಿದರು.

ಈ ವೇಳೆ ಡಿವೈಎಸ್ಪಿ ಜೈ ಶಂಕರ್, ಉಡುಪಿ ಸಂಚಾರ ಪೊಲೀಸ್ ಠಾಣೆಯ ಎಸ್ ಐ ಅಬ್ದುಲ್ ಖಾದರ್, ಉಡುಪಿ ನಗರ ಠಾಣಾಧಿಕಾರಿ ಸಕ್ತೀವೇಲು ಹಾಗೂ ಇತರರು ಉಪಸ್ಥಿತರಿದ್ದರು.


Spread the love