ತಲಪಾಡಿಯಲ್ಲಿ ಮಂಗಳಮುಖಿಯರ ಮೇಲೆ ಹಲ್ಲೆ; ಅರೋಪಿಗಳ ಬಂಧನಕ್ಕೆ ಅಹಿಂದ ಒತ್ತಾಯ

Spread the love

ತಲಪಾಡಿಯಲ್ಲಿ ಮಂಗಳಮುಖಿಯರ ಮೇಲೆ ಹಲ್ಲೆ; ಅರೋಪಿಗಳ ಬಂಧನಕ್ಕೆ ಅಹಿಂದ ಒತ್ತಾಯ

ಮಂಗಳೂರು: ಮಂಗಳಮುಖಿಯರ ಮೇಲೆ ಫೆಬ್ರವರಿ 6 ರಂದು ಹಲ್ಲೆ ನಡೆಸಿದ ಎಲ್ ಜಿ ಬಿ ಟಿ ಪಂಗಡದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಅಹಿಂದ ರಾಜ್ಯಾಧ್ಯಕ್ಷರಾದ ಶೋಭಾ ನೇತ್ರತ್ವದಲ್ಲಿ ಶನಿವಾರ ಆಗ್ರಹಿಸಲಾಯಿತು.

ಈ ವೇಳೆ ಮಾತನಾಡಿದ ಶುಭಾ ಅವರು ಕರ್ನಾಟಕ ಅಹಿಂದಾ ವೇದಿಕೆ ಅಸಹಾಯಕರಿಗೆ ಸಹಾಯ ಮಾಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದು, ಇಂದು ನಾವು ಬೆಂಗಳೂರಿನಿಂದ ಬಂದು ಸ್ಥಳೀಯ ಎಲ್ ಜಿ ಬಿ ಟಿ ಪಂಗಡದವರಿಂದ ಮಂಗಳಮುಖಿಯರು ಹಲ್ಲೆಗೊಳಗಾಗಿದ್ದು ಅವರ ಸಹಾಯಕ್ಕೆ ಬಂದಿರುತ್ತೇವೆ. ಮಂಗಳಮುಖಿಯರು ಕೂಡ ನಮ್ಮಂತೆಯೇ ಮಾನವರು ಎನ್ನುವುದನ್ನು ನಾವು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾಗಿದೆ. ಅಸಾಹಾಯಕ ಮಂಗಳಮುಖಿಯರ ಮೇಲೆ ಹಲ್ಲೆ ನಡೆಸುವುದು ನಿಜಕ್ಕೂ ಖಂಡನೀಯ. ಉಳ್ಳಾಲ ಪೊಲೀಸರು ಕೂಡಲೇ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳೂವುದರೊಂದಿಗೆ ಅಸಾಹಾಯಕರಿಗೆ ನ್ಯಾಯ ದೊರಕಿಸಬೇಕಾಗಿದೆ. ಯಾರಿಗೂ ಮತ್ತೊಬ್ಬರಿಗೆ ಹಲ್ಲೆ ನಡೆಸುವ ಹಕ್ಕಿಲ್ಲ ಆದ್ದರಿಂದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಅಹಿಂದ ವೇದಿಕೆಯ ರಾಜ್ಯ ಉಪಾಧ್ಯಕ್ಷ ನರಸಿಂಹಪ್ಪ ಮಾತನಾಡಿ ಮಂಗಳಮುಖಿಯರ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ಹಲ್ಲೆ ನಡೆಸಿದ ಆರೋಪಿಗಳನ್ನು ಆಡಳಿತ ವರ್ಗ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಇದರ ಉಪಾಧ್ಯಕ್ಷೆ ರಮ್ಯಾ ಗೌಡ ಮಾತನಾಡಿ ಫೆಬ್ರವರಿ 6ರಂದು ಸುಮಾರು 10 ಮಂದಿಯ ತಂಡ ಮಂಗಳಮುಖಿಯರಾದ ನಿಶಾ ಅವರ ಮನೆಯ ಮೇಲೆ ದಾಳಿ ಮಾಡಿದ್ದಲ್ಲದೆ ಅವರ ಜೊತೆಯಲ್ಲಿದ್ದ ಅನುಶ್ರೀ, ಶಮಾ ಮತ್ತು ಮಧುರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಜೊತೆ ಅಸಹ್ಯವಾಗಿ ವರ್ತಿಸಿ ಬೆದರಿಕೆ ಒಡ್ಡಿದ್ದು ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪುನಃ ಫೆಬ್ರವರಿ 7 ರಂದು ಬೆಳಿಗ್ಗೆ ಅರುಂಧತಿ, ಮೌನಿ ಹಾಗೂ ಇತರರು ನೀಶಾರ ಮನೆಗೆ ಬಂದು ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ. ನಮ್ಮ ಜೀವಗಳಿಗೆ ಭದ್ರತೆ ಇಲ್ಲ ಇಂತಹ ಸಂದರ್ಭದಲ್ಲಿ ಅಹಿಂದ ವೇದಿಕೆ ನಮ್ಮ ಬೆಂಬಲಕ್ಕೆ ಬಂದಿದ್ದು ನಮಗೆ ನ್ಯಾಯ ದೊರಕುವುದು ಎಂಬ ನಂಬಿಕೆ ಹೊಂದಿದ್ದೇವೆ ಎಂದರು.

ಆರೋಪಿಗಳಾದ ಅರುಂಧತಿ, ಮೌನಿ, ಖುಶಿ ಮತ್ತು ಕಾರ್ತೀಕಾ ಅವರ ವಿರುದ್ದ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love