ತಿಂಗಳೊಳಗೆ ರಾ. ಹೆದ್ದಾರಿಯಲ್ಲಿನ ರಸ್ತೆ ಹೊಂಡ ಗುಂಡಿಗಳಿಗೆ ಮುಕ್ತಿ ನೀಡಿ–ಹೋರಾಟಗಾರರಿಂದ ಗಡುವು
ಕೋಟ: ಕುಂದಾಪುರದಿಂದ ಹೆಜಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಅಸರ್ಮಕ ನಿರ್ವಹಣೆ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಗುರುವಾರ ಸಾಲಿಗ್ರಾಮ ಚಿತ್ರಪಾಡಿ ಮಾರಿಗುಡಿ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಪ್ರತಿಭಟಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಕಳೆದ ಸಾಕಷ್ಟು ವರ್ಷಗಳಿಂದ ಸ್ಥಳೀಯರಿಗೆ ಟೋಲ್ ವಿನಾಯಿತಿ ಸೇರಿದಂತೆ ಹೆದ್ದಾರಿ ಅಸರ್ಪಕ ಕಾಮಗಾರಿಯ ವಿರುದ್ಧ ಪ್ರತಿಭಟಿಸುತ್ತಾ ಬಂದಿದ್ದೇವೆ. ಆದರೆ ಈ ಹಿಂದೆ ಇದ್ದ ನವಯುಗ ಕಂಪನಿ ಸ್ಪಂದಿಸಿ, ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಕೂಡಾ ಮಾಡಿದೆ. ಆದರೆ ಇತ್ತೀಚೆಗೆ ಹೆದ್ದಾರಿ ನಿರ್ವಹಣೆ ಗುತ್ತಿಗೆ ಪಡೆದ ಕೆ. ಕೆ ಆರ್ ಕಂಪನಿ ರಸ್ತೆ ನಿರ್ವಣೆಯಲ್ಲಿ ಎಡವಿದೆ. ಅಲ್ಲದೆ ಉಡಾಫೆ ಉತ್ತರ ನೀಡುತ್ತಿದೆ.
ಹೆದ್ದಾರಿ ಸಮರ್ಪಕ ಇಲ್ಲದೆ, ಸಾಕಷ್ಟು ಸಾವುನೋವು ಸಂಭವಿಸುತ್ತಿದೆ. ಸಮರ್ಪಕ ದಾರಿ ದೀಪಗಳು, ಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ. ಸಾಕಷ್ಟು ಸಮಸ್ಯೆಗಳಿದ್ದರೂ ನಿರ್ಲಕ್ಷ ಧೋರಣೆಯನ್ನು ಹೆದ್ದಾರಿ ಗುತ್ತಿಗೆದಾರ ಅನುಸರಿಸುತ್ತಿದ್ದಾರೆ. ಇದೇ ಧೋರಣೆ ಅನುಸರಿಸಿದರೆ ಟೋಲ್ಗೆ ಸಂಚಕಾರ ತಂದೊಡ್ಡಲಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಹೆದ್ದಾರಿ ನಿರ್ವಹಣೆಗೈಯುವ ಕೆ.ಕೆ ಆರ್ ಕಂಪನಿ ಹಾಗೂ ಪ್ರಾಧಿಕಾರದ ಅಧಿಕಾರಿಗಳ ಅಣಕು ಶವಗಳನ್ನು ಇರಿಸಿ ಶವದಹನ ನಡೆಸಲಾಯಿತು.
ರಸ್ತೆ ಹೊಂಡಗುಂಡಿಗಳಿಗೆ ಮುಕ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಸರಿಪಡಿಸಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟ ಟೋಲ್ ನೀಡದೆ ಸಂಚರಿಸುವ ಪ್ರತಿಭಟನೆಯಾಗಲಿದೆ ಎಂದು ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಎಚ್ಚರಿಸಿದರು.
ಪ್ರತಿಭಟನಾ ಸಭೆಯಲ್ಲಿ ವಿಶಿಷ್ಟತೆಯ ಭಾಗವಾಗಿ ಮರಣ ಡೋಲು ಬಾರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ತಮ್ಮ ಬೇಡಿಕೆಯ ಪತ್ರವನ್ನು ಬ್ರಹ್ಮಾವರದ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆಯವರಿಗೆ ಹಸ್ತಾಂತರಿಸಿದರು.
ಕೆ.ಕೆ ಆರ್ ಕಂಪನಿಯ ಉಸ್ತುವಾರಿ ತಿಮ್ಮಯ್ಯ , ಬ್ರಹ್ಮಾವರ ಸರ್ಕಲ್ ದಿವಾಕರ್, ಠಾಣಾಧಿಕಾರಿ ತೇಜಸ್ವಿ, ಕೋಟ ಠಾಣಾಧಿಕಾರಿ ರಾಘವೇಂದ್ರ ಮತ್ತಿತರರ ಅಧಿಕಾರಿಗಳು ಉಪಸ್ಥಿತರದ್ದರು.
ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ ಪ್ರಮುಖರಾದ ಐರೋಡಿ ವಿಠ್ಠಲ ಪೂಜಾರಿ, ಪ್ರಶಾಂತ್ ಶೆಟ್ಟಿ, ಜಯಕರ್ನಾಟಕ ಸತೀಶ್ ಪೂಜಾರಿ, ರಾಜೇಶ್ ಕಾವೇರಿ, ಭೋಜ ಪೂಜಾರಿ, ಋಶಿರಾಜ್ ಸಾಸ್ತಾನ, ಚಂದ್ರಶೇಖರ್ ಮೆಂಡನ್, ನಾಗರಾಜ್ ಗಾಣಿಗ, ರಾಜೇಂದ್ರ ಸುವರ್ಣ, ಮಹಾಬಲ ಪೂಜಾರಿ, ರಾಜೇಶ್ ಸಾಸ್ತಾನ, ಅಚ್ಯುತ ಪೂಜಾರಿ, ಸುಲತಾ ಹೆಗ್ಡೆ, ಗಣೇಶ್ ಪೂಜಾರಿ, ಲೀಲಾವತಿ ಗಂಗಾಧರ್, ವಂ|ಸುನೀಲ್ ಡಿಸಿಲ್ವ,ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು