ತಿರುಪತಿ ಲಡ್ಡು ಪ್ರಾಣಿ ಕೊಬ್ಬು ಬಳಕೆಯ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹುನ್ನಾರ : ಯಶ್ಪಾಲ್ ಸುವರ್ಣ
ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸಹಿತ ನಿಷೇಧಿತ ಪದಾರ್ಥಗಳ ಬಳಕೆ ಮಾಡುವ ಮೂಲಕ ಸಮಸ್ತ ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಿಂದೂ ವಿರೋಧಿಗಳ ಹುನ್ನಾರ ಎಂದು ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಸರಕಾರದ ಅವಧಿಯಲ್ಲಿ ಏಕಾಏಕಿ ಕೆ.ಎಂ.ಎಫ್ ನಂದಿನಿ ತುಪ್ಪ ಖರೀದಿ ರದ್ದುಮಾಡಿ ಕಳಪೆ ಗುಣಮಟ್ಟದ ತುಪ್ಪ ಬಳಕೆಗೆ ಅನುಮತಿ ನೀಡಿ ಹಿಂದೂ ಧರ್ಮದ ಪಾವಿತ್ರ್ಯತೆಗೆ ಹಾನಿ ಮಾಡಿದೆ.
ತಿರುಪತಿ ಲಡ್ಡು ವಿವಾದದಿಂದಾಗಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ತಿರುಪತಿ ಸಹಿತ ಎಲ್ಲಾ ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರ ಈ ಅಕ್ರಮವನ್ನು ಗಂಬೀರವಾಗಿ ಪರಿಗಣಿಸಿ ಭಕ್ತರ ಶ್ರದ್ದಾ ಭಾವನೆಗೆ ಧಕ್ಕೆ ತಂದಿರುವ ಮತಾಂಧ ಶಕ್ತಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.