ತಿರುವು ಪಡೆದ ಹಾಸನ ವಾಮಾಚಾರ ಘಟನೆ; ಅಂತಹ ಯಾವುದೇ ವಿಚಾರ ನಡೆದಿಲ್ಲ; ಯುವತಿ ಸ್ಪಷ್ಟನೆ
ಹಾಸನ/ಮಂಗಳೂರು: ಹಾಸನದಲ್ಲಿ ಹಿಂದೂ ಯುವತಿಯೋರ್ವರಿಗೆ ವಾಮಾಚಾರಕ್ಕೆ ಯತ್ನಿಸಿದ ಕ್ರೈಸ್ತ ಸಂಘಟನೆಯ ಸದಸ್ಯರೋರ್ವರನ್ನು ವಾಮಂಜೂರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೋಲಿಸರಿಗೆ ಒಪ್ಪಿಸಿದ ಘಟನೆಗೆ ತಿರುವು ಪಡೆದಿದ್ದು, ಪ್ರಕರಣದಲ್ಲಿ ಯಾವುದೇ ರೀತಿಯ ವಾಮಾಚಾರ, ಮತಾಂತರ ನಡೆದಿಲ್ಲ ಎಂದು ಯುವತಿ ಪೋಲಿಸರಲ್ಲಿ ಸ್ಪಷ್ಟನೆ ನೀಡಿದ್ದಾಳೆ.
ಪ್ರಕರಣದಲ್ಲಿ ಅಪಹರಣವಾದ ಕವಿತಾ ಮತ್ತು ಮಕ್ಕಳನ್ನು ಹಾಸನದಲ್ಬ ಪತ್ತೆ ಮಾಡಿ ಠಾಣಿಗೆ ಬಂದು ಕವಿತಾರನ್ನು ವಿಚಾರಿಸಿದಾಗ ಆಕೆ ಅನಿಲ್ ಕೆ ಟಿ ರವರ ನೆಲ್ಯಾಡಿಯ ಬಾಡಿಗೆ ಮನೆಯಲ್ಲಿದ್ದು ಗಂಡ ಅವರಲ್ಲೀ ರೈಟರ್ ಆಗಿ ಕೆಲಸ ಮಾಡುತ್ತಿದ್ದು ˌ ಅವರೊಳಗೆ ಸರಿ ಬಾರದ ಕಾರಣ 6 ತಿಂಗಳಿಂದ ಆಕೆ ತಾಯಿ ಮನೆ ಉಡುಪಿಗೆ ಗಂಡ ಅವರ ತಂದೆ ಮನೆಗೆ ಹೋಗಿದ್ದು . ಆಕೆ ಜುಲೈ 11ರಂದು ವಿಟ್ಲದ ಕುದುಪದವು ಬಳಿ ಹಾಸ್ಟಲ್ ಗೆ ಮಕ್ಕಳನ್ನ ಬಿಡಲು ಹೋದಾಗ ಆಕೆ ಕೆಲಸ ಮಾಡುವ ಅನಿಲ್ ಎಂಬವರು ಬೊಲೆರೋ ಜೀಪಿನಲ್ಲಿ ಅಲ್ಲಿದ್ಧು ನನ್ನ ಬಳಿ ಬಂದು ನನ್ನ ಜೊತೆ ನೀನು ಬಾ.ನೀನು ಎಲ್ಲಿಗೆ ಹೋದರೂ ಒಂದು ದಿನವೂ ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ ನಿನ್ನ ಗಂಡನೊಂದಿಗೆ ಬದುಕಲು ಸಾದ್ಯವಿಲ್ಲ ಎಂದು ಹೇಳಿ ನನ್ನೊಂದಿಗೆ ಬಂದರೆ ನೀನು ಮತ್ತು ನೀನ್ ಮಕ್ಕಳು ಜೀವಂತ ಇರಬಹುದೆಂದು ಹೇಳಿ ಜೀವ ಬೆದರಿಕೆ ನೀಡಿ ಒತ್ತಾಯ ಪೂರ್ವಕ ನಮ್ಮನ್ನು ಕೂರಿಸಿ ಹಾಸನ .ತಮಿಳುನಾಡು ತೆರಳಿ ಹಾಸನದ ತಣ್ಣೀರು ಹಳ್ಳಎಂಬಲ್ಲಿ ರೂಂ ಮಾಡಿ ಬಳಿಕ ಅನಿಲ್ ಗಂಡನಿಗೆ ಕರೆ ಮಾಡಿ ನೀನು ಅವಳನ್ನು ಮಕ್ಕಳನ್ನು ಬಿಟ್ಟುಬಿಡು ಎಂದು ತಿಳಿಸಿದ್ಧು.ಯಾವುದೇ ದೌರ್ಜನ್ಶ ಮಾಡದೇ ಮದುವೆ ಆಗುವ ಉದ್ದೇಶದಿಂದ ಇರಿಸಿದ್ದೆಂದು ಹೇಳಿಕೆ ನೀಡಿದ್ದು ಈ ಬಗ್ಗೆ ಆರೋಪಿಯನ್ನು ವಿಚಾರಿಸಿದಾಗ ತಾನು ಅವರ ಸಂಸಾರದ ಖರ್ಚು ನೋಡುತ್ತಿದ್ದು ಸುಮಾರು ವರ್ಷಗಳಿಂದ ಒಡನಾಟ ಇದ್ದು ಈ ವಿಚಾರ ರಾಜೇಶನಿಗೆ ತಿಳಿದು 6 ತಿಂಗಳಿಂದ ಬೇರೇಯಾಗಿ ಇರುತ್ತಾರೆ .ಆರೋಪಿಯೊಂದಿಗೆ ಸುಮಾರು ವರ್ಷಗಳಿಂದ ಸಂಬಂದವಿದ್ದು ಮದುವೆಯಾಗುವ ಉದ್ದೇಶದಿಂದ ಕರೆದುಕೊಂಡು ಹೊದಂತೆ ಈ ವರೇಗಿನ ತನಿಖೆಯಲ್ಲಿ ಕಂಡು ಬಂದಿರುತ್ತದೆ.ತನಿಖೆ ಮುಂದುವರೆಯುವುದು ಎಂದು ಪೋಲಿಸರು ತಿಳಿಸಿದ್ದಾರೆ.