ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು ಮತ್ತು ಪುಸ್ತಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗಿದೆ. ವಿವರ ಈ ಕೆಳಗಿನಂತಿದೆ.
ತುಳು ಸಾಹಿತ್ಯ ಕ್ಷೇತ್ರ, ತುಳು ನಾಟಕ ಕ್ಷೇತ್ರ ಹಾಗೂ ತುಳು ಸಿನಿಮಾ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಜನ ಗಣ್ಯರನ್ನು ಅಕಾಡೆಮಿಯ 2016 ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಈ ಗೌರವ ಪ್ರಶಸ್ತಿಯು ರೂ.50,000-00 ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣೆಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.
ಗೌರವ ಪ್ರಶಸ್ತಿಗೆ ಮುದ್ದು ಮೂಡುಬೆಳ್ಳೆ (ತುಳು ಸಾಹಿತ್ಯ), ಕೆ ಆನಂದ ಶೆಟ್ಟಿ (ನಾಟಕ), ತಮ್ಮ ಲಕ್ಷ್ಮಣ (ಸಿನೆಮಾ) ಆಯ್ಕೆಯಾಗಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2016ರ ಸಾಲಿನ ಪುಸ್ತಕ ಬಹುಮಾನಕ್ಕೆ ಈ ಕೆಳಗಿನ ಲೇಖಕರ ಕೃತಿಗಳು ಆಯ್ಕೆಯಾಗಿರುತ್ತವೆ. ಈ ಪುಸ್ತಕ ಬಹುಮಾನವು ರೂ.25,000-00 ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣೆಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.
ಪುಸ್ತಕ ಬಹುಮಾನಕ್ಕೆ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಪಾಡ್ಡಾನಗಳಲ್ಲಿ ಮೂಡಿ ಬಂದ ವೀರ ವನಿತೆಯರು, ಯೋಗಿಶ್ ರಾವ್ ಚಿಗುರುಪಾದೆ ಅವರ ತುಳು ಕವನ ಸಂಕಲನ ಒಯಿಲ್ ಹಾಗೂ ಶಶಿರಾಜ್ ಕಾವೂರು ಅವರ ತುಳು ನಾಟಕ ಬರ್ಬರಿಕ ಆಯ್ಕೆಯಾಗಿದೆ
ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರು ಮತ್ತು ಪುಸ್ತಕ ಬಹುಮಾನ ವಿಜೇತರ ವ್ಯಕ್ತಿ ಪರಿಚಯ ವಿವರಗಳನ್ನು ಮತ್ತು ಭಾವಚಿತ್ರವನ್ನು ಈ ಪತ್ರದೊಂದಿಗೆ ಲಗ್ತೀಕರಿಸಲಾಗಿದೆ. ಪ್ರಶಸ್ತಿ ಪ್ರದಾನ ಮತ್ತು ಪುರಸ್ಕಾರ ಸಮಾರಂಭದ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು.