ತುಳುನಾಡ ರಕ್ಷಣಾ ವೇದಿಕೆ ಯುವಘಟಕದ ಪದಾಧಿಕಾರಿಗಳ ಆಯ್ಕೆ

Spread the love

ತುಳುನಾಡ ರಕ್ಷಣಾ ವೇದಿಕೆ ಯುವಘಟಕದ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ದ.ಕಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಯುವ ಘಟಕದ ಕಾರ್ಯಕರ್ತರ ಸಮಾವೇಶ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭ ನಗರದ ವೂಡ್‍ಲ್ಯಾಂಡ್ ಹೋಟೇಲಿನ ಸಭಾಂಗಣದಲ್ಲಿ ನಡೆಯಿತು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುರವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿಜೆಪ್ಪುರವರು“ ತುಳುನಾಡ ರಕ್ಷಣಾ ವೇದಿಕೆ ಮಾನವೀಯತೆಯ ಬೇರಿನೊಂದಿಗೆ ಹೆಮ್ಮರವಾಗಿ ಬೆಳೆಯುತ್ತಿದೆ ಈ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ಕೊಡುವಲ್ಲಿ ಕೆಲಸ ಮಾಡುತ್ತಿದೆ, ಯಾವುದೇ ಹಿಂಸಾತ್ಮಕ ಚಟುವಟಿಕೆಗಲಲ್ಲಿ ಭಾಗವಹಿಸದೆ, ಶಾಂತಿಯುತ ಹೋರಾಟಗಳನ್ನು ಮಾಡುತ್ತಾ ತುಳುನಾಡಿನ ಜನರಣಾಡಿ ಮಿಡಿತವಾಘಿ ಬೇಳೆಯುತ್ತಿದೆ, ನಮ್ಮ ಮುಂದೆ ಇನ್ನೂ ಹಲವಾರು ಸವಾಲುಗಳಿವೆ ಇದನ್ನೆಲ್ಲವನ್ನು ತುರವೇ ಸಮರ್ಥವಾಗಿ ಎದುರಿಸಲು ಸಿದ್ದವಾಗಿ ನಿಂತಿದೆ, ಹಾಗಾಗಿ ತುಳುನಾಡಿನ ಯುವಕರು ನಮ್ಮ ಸಂಘಟನೆಯೊಂದಿಗೆ ಕೈಜೋಡಿಸಲು ದಾಪುಗಾಲಿಡುತ್ತಿದ್ದಾರೆ, ಯುವಘಟಕದ ಮೂಲಕ ಅದು ಸಾಕಾರಗೊಳ್ಳಲಿ ಎಂದು ಆಶಿಸುತ್ತೇನೆ ಎಂದರು.

ಮಂಗಳೂರು ದಕ್ಷಿಣ ವಿಧಾನ ಸಭಾಕ್ಷೇತ್ರದ ಅಧ್ಯಕ್ಷರಾಗಿ ನಿಶಾದ್‍ಎಮ್ಮೆಕೆರೆ, ಯುವಘಟಕದ ಸಂಚಾಲಕರಾಗಿ ಪ್ರಸಾದ್‍ಕುಮಾರ್, ವಾಮದ ಪದವ ಘಟಕದ ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಆಯ್ಕೆಯಾದರು, ಯುವಘಟಕದ  ಸಿರಾಜ್ ಅಡ್ಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಘಟಕದ ಜಿಲ್ಲಾ ಅಧ್ಯಕ್ಷರಾದ ಹರೀಶ್ ಶೆಟ್ಟಿ ವಹಿಸಿದ್ದರು, ಯುವಘಟಕದ ರಾಜ್ಯಾಧ್ಯಕ್ಷರಾದ ಮೋಹನ್‍ದಾಸ್‍ರೈ ನೂತನವಾಗಿಆಯ್ಕೆಯಾದ ಪಧಾಧಿಕಾರಿಗಳಿಗೆ ಅಧಿಕಾರ ವಹಿಸಿಕೊಟ್ಟರು, ಮುಖ್ಯಅಥಿತಿಯಾಗಿ ತುರವೇ ಕೇಂದ್ರೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್‍ಕಡಬ ,ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ಮಹಿಳಾ ಘಟಕದ ರಾಜ್ಯಾದ್ಯಕ್ಷರಾದ ಜ್ಯೋತಿಕಾ ಜೈನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಕೆ. ಬಂಗೇರ, ಬಂಟ್ವಾಲ ವಿಧಾನ ಸಭಾಕ್ಷೇತ್ರದ ಅದ್ಯಕ್ಷರಾದ ರಮೇಶ್ ಶೆಟ್ಟಿ ಪುಂಜಾಲುಕಟ್ಟೆ, ವಾಮದ ಪದವುಘಟಕದ ಅಧ್ಯಕ್ಷರಾದ ದೇವಿಪ್ರಸಾದ್ ವಾಮದ ಪದವು, ಗಂಗಾದರ್‍ಅತ್ತಾರ್, ಮಂಗಳೂರು ವಿಧಾನ ಸಭಾಕ್ಷೇತ್ರದ ಉಪಾಧ್ಯಕ್ಷರಾದ ರಹೀಂಕುತ್ತಾರ್, ಮಂಗೂಳುರು ವಿಧಾನ ಸಭಾಕ್ಷೇತ್ರದ ಯುವಘಟಕದ ಅಧ್ಯಕ್ಷರಾಧಅರುಣ್‍ಡಿಸೋಜ, ಕಾಮಾಕ್ಷಿ ಪಾವೂರು, ಉಪಸ್ಥಿತರಿದ್ದರು


Spread the love