ತೆಂಕನಿಡಿಯೂರು ಪ್ರೌ.ಶಾಳೆ ಸುವರ್ಣ, ಪಪೂ ಕಾಲೇಜಿನ ದಶಮಾನೋತ್ಸವ ಸಂಪನ್ನ
ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆ ಸುವರ್ಣ ಮತ್ತು ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಸಮಾರೋಪ ಸಮಾರಂಭ ಭಾನುವಾರ ಜರುಗಿತು. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ|ನಿಬಿ ವಿಜಯ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸುವರ್ಣ ಮಹೋತ್ಸವ, ದಶಮಾನೋತ್ಸವ ಸಮಿತಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ ಬಡಾಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿಗಳಾದ ಅಮೃತ್ ಶೆಣೈ, ಶೇಖರ್ ಜಿ ಕೋಟ್ಯಾನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಎಸ್ ಡಿಸಸಿ ಬ್ಯಾಂಕಿನ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಇಮ್ತಿಯಾಜ್ ಗುಡ್ಮೆ, ಮಲ್ಪೆ ಉದ್ಯಮಿ ಆನಂದ ಪಿ ಸುವರ್ಣ, ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ, ಕಿದಿಯೂರು ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕ ಉದಯ್ ಕುಮಾರ್ ಶೆಟ್ಟಿ, ಗುತ್ತಿಗೆದಾರರಾದ ಸುರೇಶ್ ಶೆಟ್ಟಿ ಬಡಾನಿಡಿಯೂರು, ಎಂಜಿನಿಯರ್ ಭಾಸ್ಕರ್ ಜತ್ತನ್, ಉಡುಪಿ ಜಿಲ್ಲಾಸ್ಪತ್ರೆ ಸರ್ಜನ್ ಡಾ ಭಾಸ್ಕರ್ ಪಾಲನ್, ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ|ಬಾಲಕೃಷ್ಣ ಹೆಗ್ಡೆ, ತಾಪಂ ಸದಸ್ಯ ಧನಂಜಯ ಕುಮಾರ್, ಬೋಜ ಶೆಟ್ಟಿ, ಬೆಳ್ಕಲೆ ಉಪಸ್ಥಿತರಿದ್ದರು.
ಉದ್ಯಮಿ ದಯಾನಂದ ಶೆಟ್ಟಿ ಕೊಜಕೊಳಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲ ಡಾ ಎಚ್ ಸಿದ್ದೇಶ್ವರಪ್ಪ, ಗೌರವಾಧ್ಯಕ್ಷ ಸತೀಶ್ ಶೆಟ್ಟಿ ಧಾರವಾಡ, ಹಿರಿಯ ಶಿಕ್ಷಕ ಜಯಪ್ರಕಾಶ್ ನಾಯಕ್, ಎಸ್ ಡಿ ಎಂಸಿ ಉಪಾಧ್ಯಕ್ಷ ಸತೀಶ್ ನಾಯ್ಕ್, ವೇದಿಕೆಯ್ಲಲಿದ್ದರು.
ಸುವರ್ಣ ಮಹೋತ್ಸವ, ದಶಮಾನೋತ್ಸವ ಸಮಿತಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ ಬಡಾಮನೆ ದಂಪತಿ ಹಾಗೂ ಪ್ರಮುಖ ಸಾಧಕರನ್ನು ಸಮ್ಮಾನಿಸಲಾಯಿತು.
ಭವಾನಿ ಶಂಕರ್ ಲಾಡ್ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಅನಿಲ್ ಪಾಲನ್ ವಂದಿಸಿದರು.