ತೇಜಸ್ವಿ ಸೂರ್ಯ ಎದೆ ಸೀಳಿದರೆ ಸಂಸ್ಕಾರವೆಂಬುವುದೇ ಇರಲು ಸಾಧ್ಯವಿಲ್ಲ  — ಶೌವಾದ್ ಗೂನಡ್ಕ

Spread the love

ತೇಜಸ್ವಿ ಸೂರ್ಯ ಎದೆ ಸೀಳಿದರೆ ಸಂಸ್ಕಾರವೆಂಬುವುದೇ ಇರಲು ಸಾಧ್ಯವಿಲ್ಲ  — ಶೌವಾದ್ ಗೂನಡ್ಕ

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯರವರು ಮುಸಲ್ಮಾನರನ್ನು ಉದ್ದೇಶಸಿ ಎದೆ ಸೀಳಿದರೆ ನಾಲ್ಕಕ್ಷರ ಗೊತ್ತಿಲ್ಲದವರು ಪ್ರತಿಭಟನೆ ಮಾಡುತ್ತಾರೆಂದು ಹೇಳಿದ್ದಾರೆ ಆದರೆ ತೇಜಸ್ವಿ ಸೂರ್ಯರವರ ಎದೆ ಸೀಳಿದರೆ ಸಂಸ್ಕಾರದ ಒಂದಂಶವೂ ಇರಲು ಸಾಧ್ಯವಿಲ್ಲ, ಅಂತಹವರು ಮುಸಲ್ಮಾನರ ಬಗ್ಗೆ ಮಾತನಾಡುತ್ತಾರೆ. ಅವರು ಪದವಿಧರರಾಗಿರಬಹುದು ಆದರೆ ಮತ್ತೊಬ್ಬರ ಬಗ್ಗೆ ಹೇಗೆ ಮಾತನಾಡಬೇಕೆಂಬ ಸಾಮಾನ್ಯ ಜ್ಞಾನವು ಅವರಲಿಲ್ಲವೆಂದು ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರು ಹೇಳಿದ್ದಾರೆ.

ಪಂಕ್ಚರ್ ಹಾಕುವವರು ಸ್ವಾಭಿಮಾನಿಗಳಾಗಿ ದುಡಿದು ತಿನ್ನುವವರು, ಬಡಜನರ ಉದ್ಯೋಗದ ಕುರಿತಾಗಿ ತೇಜಸ್ವಿ ಸೂರ್ಯರವರು ಕೀಳಾಗಿ ಮಾತನಾಡಿದ್ದಾರೆ ಒರ್ವ ಸಂಸದರಾಗಿದ್ದುಕೊಂಡು ಬೇಜವಬ್ದಾರಿಯಿಂದ ಮಾತನಾಡುವುದು ಸರಿಯಲ್ಲ ಅನೇಕ ಮುಸ್ಲಿಮರು ಅನಕ್ಷರಸ್ಥರಾಗಿರಬಹುದು ಆದರೆ ತೇಜಸ್ವಿ ಸೂರ್ಯರಂತೆ ಸಂಸ್ಕಾರವಿಲ್ಲದೆ ಬದುಕುತ್ತಿಲ್ಲ, ಸಂಸದರು ತಮ್ಮ ಹೇಳಿಕೆಯನ್ನು ಹಿಂಪಡೆದು ಮುಸಲ್ಮಾನರ ಕ್ಷಮೆಯನ್ನಾಚಿಸಬೇಕೆಂದು ಶೌವಾದ್ ಗೂನಡ್ಕರವರು ಆಗ್ರಹಿಸಿದ್ದಾರೆ.


Spread the love
1 Comment
Inline Feedbacks
View all comments
pradeepkumar N.S
5 years ago

it is true. he talks only lies