ತೊಂದರೆಯಾದ ಗೋವುಗಳಿಗೆ ರಕ್ಷಿಸಲು ಗೋ ಅ್ಯಂಬುಲೆನ್ಸ್ : ಸಾಧ್ವಿ ಸರಸ್ವತಿ
ಉಡುಪಿ: ಗೋವುಗಳಿಗೆ ಅಫಘಾತ ತೊಂದರೆಯಾದ ರಕ್ಷಿಸಲು ಗೋ ಅ್ಯಂಬುಲೆನ್ಸ್ ಯೋಜನೆಯನ್ನು ದೇಶಾದ್ಯಂತ ವಿಶ್ವಹಿಂದು ಪರಿಷತ್ ಜಾರಿಗೆಗೊಳಿಸಲಿದ್ದು, ಪ್ರತಿಯೊಬ್ಬರೂ ಗೋವುಗಳ ಸಂರಕ್ಷಣೆಗಾಗಿ ಟೊಂಕಕಟ್ಟಬೇಕಾಗಿದೆ ಎಂದು ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಸಲಹಾ ಸಮಿತಿ ಸದಸ್ಯೆ ಸಾಧ್ವಿ ಸರಸ್ವತಿ ಹೇಳಿದರು.
ಅವರು ಪರ್ಕಳ ಗಣೇಶೋತ್ಸವ ಸುವರ್ಣ ಮಹೋತ್ಸವದ ಮಾತೃಸಂಗಮ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿ, ಮಾತೃದೇವೋ ಭವ, ಪಿತೃದೇವೋಭವ ಎನ್ನುವ ನಾಡಿನಲ್ಲಿ ಮಾತಾಪಿತರನ್ನು ನೋಡಿಕೊಳ್ಳಬೇಕಾಗಿದ್ದು, ಅದೇ ರೀತಿ ಗೋ ಸಾಕಣೆಯನ್ನು ಮಾಡಿ ಅದರಿಂದಾಗುವ ಅನೇಕ ಲಾಭಗಳನ್ನು ಪಡೆಯಬೇಕು. ಗೋವುಗಳಿಗೆ ತೊಂದರೆಯಾದಾಗ ಅವುಗಳನ್ನು ರಕ್ಷಿಸಲು ಅ್ಯಂಬುಲೆನ್ಸ್ ಯೋಜನೆಯನ್ನು ಜಾರಿಗೆಗೊಳಿಸಲಾಗುತ್ತಿದೆ ಎಂದರು.
ಮಕ್ಕಳಿಗೆ ನಾವು ದೇಶಭಕ್ತರ ತ್ಯಾಗ ಬಲಿದಾನವನ್ನು ಭಕ್ತಿಯೊಂದಿಗೆ ಶಕ್ತಿ, ಶಾಸ್ತ್ರದೊಂದಿಗೆ ಶಸ್ತ್ರವನ್ನು ಅಳವಡಿಸಬೇಕಾಗಿದೆ.ದೀಪಾವಳಿ ಆಚರಿಸದ ಚೀನ ತನ್ನ ದೇಶದ ದೀಪಾವಳಿ ವಸ್ತುಗಳನ್ನು ದೀಪಾವಳಿ ಆಚರಿಸುವ ಭಾರತದಲ್ಲಿ ಮಾರಾಟ ಮಾಡಿ ಆರ್ಥಿಕ ಲಾಭ ಗಳಿಸುತ್ತಿದೆ. ಸ್ವದೇಶಿ ಚಿಂತನೆಯ ಮೂಲಕ ಚೀನೀ ವಸ್ತುಗಳನ್ನು ಬಹಿಷ್ಕರಿಸಬೇಕಾಗಿದೆ ಎಂದರು.
ಗಣಪತಿ ಪ್ರಥಮ ಪೂಜೆಯನ್ನು ತೆಗೆದುಕೊಳ್ಳುವ ದೇವತೆಯಾಗಿದ್ದು, ಉತ್ತಮ ಬುದ್ದಿಯನ್ನು ಪ್ರಚೋದಿಸುವ ದೇವರೂ ಕೂಡ ಹೌದು ಎಂದರು.
ಲವ್ ಜಿಹಾದ್ ಹಿಂದೆ ಹಿಂದುಗಳ ಜನಸಂಖ್ಯೆಯನ್ನು ನಿಯಂತ್ರಿಸುವ ಹುನ್ನಾರವಿದ್ದು ಇದನ್ನು ಹಿಂದು ಸಮುದಾಯ ಗಮನಿಸಬೇಕಾಗಿದೆ. ಹಿಂದುಗಳಲ್ಲಿ ಒಡಕು ಉಂಟು ಮಾಡಲು ಆರ್ಯ-ದ್ರಾವಿಡ ವಾದವನ್ನು ಹರಿದು ಬಿಟ್ಟ ಶಕ್ತಿಗಳೇ ಇನ್ನೋಂದು ರೂಪದಲ್ಲಿ ಲವ್ ಜಿಹಾದ್ ಗೆ ಬೆಂಬಲ ನೀಡುತ್ತಿವೆ ಎಂದರು.
CAN SOMEONE DEFINE WHAT IS “SADHWI” BY SEEING THE PHOTOGRAPH OF SADHWI !!