ದ.ಕ ಜಿಲ್ಲಾ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿ.ಎ ಮೊಹಿದೀನ್ ರವರಿಗೆ ಶ್ರದ್ಧಾಂಜಲಿ ಸಭೆ

Spread the love

ದ.ಕ ಜಿಲ್ಲಾ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿ.ಎ ಮೊಹಿದೀನ್ ರವರಿಗೆ ಶ್ರದ್ಧಾಂಜಲಿ ಸಭೆ

ಮಂಗಳೂರು: ಮಾಜಿ ಸಚಿವರಾದ ಬಿ.ಎ ಮೊಹಿದೀನ್ ರವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯವತಿಯಿಂದ ಶ್ರದ್ಧಾಂಜಲಿ ಅರ್ಪಿಸುವ ಸಭೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗು ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಮಾಜಿ ಅರಣ್ಯ ಸಚಿವರಾದ ಸನ್ಮಾನ್ಯ ಶ್ರೀ ಬಿ. ರಮಾನಾಥ ರೈ ಅವರು ಮಾತನಾಡಿ ದಿವಂಗತ ಬಿ.ಎ ಮೊಹಿದೀನ್ ರವರು ತನ್ನ ಸಾರ್ವಜನಿಕ ಜೀವನದಲ್ಲಿ ಒಬ್ಬ ಉತ್ತಮ ನಾಯಕನಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ತನ್ನ ನಡೆ ನುಡಿಗಳಿಂದ ಸಾರ್ವಜನಿಕÀ ಸಮಸ್ಯಗಳಿಗೆ ಸ್ಪಂದಿಸಿಕೊಂಡು ಜಿಲ್ಲೆಯ ಮತ್ತು ರಾಜ್ಯದ ಅಭಿವೃದ್ಧಿಗೆ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ತನ್ನದೇ ಆದ ಅಭಿವೃದ್ಧಿಯನ್ನು ನೀಡಿ ಮುಸ್ಲಿಂ sಸಮುದಾಯದ ಪ್ರತಿಯೊಂದು ಮಕ್ಕಳು ಶಿಕ್ಷಣ ಪಡೆದು ವಿದ್ಯಾವಂತರಾಗಲು ಅವಕಾಶ ಆಗಿದೆ ಎಂದು ತಿಳಿಸಿದರು   ಬಿ. ಎ ಮೊಹಿದೀನ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಿ ಅವರ ಕುಟುಂಬದವರಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವಂತಹ ಶಕ್ತಿಯನ್ನು ಭಗವಂತನ್ನು ಕರುಣಿಸಲೆಂದು ನುಡಿನಮನವನ್ನು ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯರಾದ  ಐವನ್ ಡಿ’ ಸೋಜಾ ರವರು ದಿ|| ಮೊಹಿದೀನ್‍ರವರು ಜಿಲ್ಲೆಗೆ ಮತ್ತು ರಾಜ್ಯಕ್ಕೆ ನೀಡಿದ ಸೇವೆಯನ್ನು ಮತ್ತು ಜನರೊಂದಿಗೆ ದಿ|| ಮೊಹಿದೀನ್‍ರವರ ಒಡನಾಟವು ಯಾವ ರೀತಿ ಇತ್ತು ಎಂಬುದರ ಬಗ್ಗೆ ತಿಳಿಸಿ ದಿ|| ಮೊಹಿದೀನ್ ರವರಿಗೆ ಶ್ರದ್ದಾಂಜಲಿ ಅರ್ಪಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯರಾದ ಬಿ. ಇಬ್ರಾಹೀಂ ಮಾಜಿ ಸಚಿವ ಶ್ರೀ ಅಭಯಚಂದ್ರ ಜೈನ್, ಮೂಡಾದ ಮಾಜಿ ಅಧ್ಯಕ್ಷರಾದ ಇಬ್ರಾಹೀಂ ಕೋಡಿಜಾಲ್‍ರವರು ದಿ|| ಮೊಹಿದೀನ್‍ರವರ ಬಗ್ಗೆ ಮಾತನಾಡಿ ನುಡಿನಮನವನ್ನು ಸಲ್ಲಿಸಿದರು

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್ ಲೋಬೋರವರು ಮಾತನಾಡಿ ದಿ|| ಮೊಹಿದೀನ್ ರವರ ವಿಚಾರಗಳನ್ನು ತಿಳಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಇವತ್ತು ಪಿಲಿಕುಳ ನಿಸರ್ಗಧಾಮ ಸ್ಥಾಪನೆಯಾಗಲು ಇದಕ್ಕೆ ಬೇಕಾದ ಸ್ಥಳವನ್ನು ಸರಕಾರದವತಿಯಿಂದ ಇದಕ್ಕೆ ಬೇಕಾಗುವ ಸವಲತ್ತುಗಳನ್ನು ನೀಡಿರುವುದರಿಂದ ಪಿಲಿಕುಳ ನಿಸರ್ಗಧಾಮ ಸ್ಥಾಪನೆ ಆಗಿದೆ ಎಂದು ತಿಳಿಸಿ ದಿ|| ಮೊಹಿದೀನ್ ರವರಿಗೆ ನುಡಿನಮನವನ್ನು ಸಲ್ಲಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಹರೀಶ್ ಕುಮಾರ್ ಮಾತನಾಡಿ ದಿ|| ಬಿ. ಎ ಮೊದೀನ್‍ರವರು ಬಂಟ್ವಾಳ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಆಗಿರುವ ಸಂದರ್ಭದಿಂದ ಅವರು ದಿವಂಗತರಾಗುವತನಕ ರಾಜಕೀಯದ ಬಗ್ಗೆ ಆಗ ಆಗ ಅನೇಕ ಸಲಹಿಗಳನ್ನು ನೀಡಿ ಪಕ್ಷದ ಸಂಘಟನೆಯ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದವರು ಎಂದು ತಿಳಿಸಿದರು ದಿ|| ಬಿ.ಎ ಮೊದೀನ್‍ರವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು ಅವರ ಅಗಲುವಿಕೆಯು ದುಃಖವನ್ನು ಸಹಿಸುವಂತಹ ಶಕ್ತಿಯನ್ನು ಅವರ ಕುಟುಂಬದವರಿಗೆ ಪರಮಾತ್ಮನ್ನು ನೀಡಲಿಂದು ಪ್ರಾರ್ಥನೆ ಮಾಡಿ ನುಡಿನಮನವನ್ನು ಸಲ್ಲಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂತೋಷ ಕುಮಾರ್ ಶೆಟ್ಟಿ, ಕಚೇರಿ ಕಾರ್ಯದರ್ಶಿಯಾದ ನಝೀರ್ ಬಜಾಲ್, ಜಿಲ್ಲಾ ಕಾಂಗ್ರೆಸ್ ಪಧಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶಾಲೆಟ್ ಪೀಂಟೋ, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಮೇಯರ್ ಭಾಸ್ಕರ್ ಕೆ, ಮಾಜಿ ಮೇಯರ್, ಮತ್ತು ಉಪ ಮೇಯರ್ ಬ್ಲಾಕ್ ಅಧ್ಯಕ್ಷರುಗಳು ಪಕ್ಷದ ಮುಂಖಡರು, ಹಾಗು ಕಾಂಗ್ರೆಸ್ ಪಕ್ಷದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರುಗಳು, ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀಧನಂಜಯ ಅಡ್ಪಂಗಾಯ, ಆರ್.ಕೆ ಪೃಥ್ವಿರಾಜ್, ಲೊಕೇಶ್ ಹೆಗ್ಡೆ, ಸಂತೋಷ ಕುಮಾರ್ ಶೆಟ್ಟಿ ಹಸೈಗೊಲಿ, ದಿವಾಕರ ಗೌಡ, ವೆಲಿರಿಯನ್ ಸಿಕ್ವೇರಾ, ಜೆ ಅಬ್ದುಲ್ ಸಲೀಂ, ಮಾಯಿಲಪ್ಪ ಸಾಲ್ಯಾನ್,ವಿಶ್ವಾಸ ಕುಮಾರ್ ದಾಸ್ , ಪ್ರೇಮನಾಥ ಪಿ.ಬಿ, ನೀರಜ್ ಪಾಲ್, ಸುರೇಂದ್ರ ಕಂಬಳಿ, ಶ್ರೀನಿವಾಸ ಕಿಣಿ, ಅಬ್ಬಾಸ್ ಅಲೀ, ಧರಣೇದ್ರ ಕುಮಾರ್, ಕೆ.ಕೆ ಸಾಹುಲ್ ಹಮ್ಮಿದ್, ಟಿ ಅಸ್ ಅಬ್ದುಲ್, ಉಮಾರ್ ಫಾರುಕ್ ಫರಂಗಿಪೇಟೆ, ಪುರುಷೂತ್ತಮ ಚಿತ್ರಾಪುರ, ಮಹಮ್ಮದ್ ಬಡಗನ್ನೂರು, ಮುರಳಿಧರ್ ರೈ, ಟಿ.ಕೆ ಸುದೀರ್, ಸಿ.ಎಂ ಮುಸ್ತಫ್, ಆಶಾ ಡಿ’ಸಿಲ್ವಾ, ಮತ್ತು ದಿ|| ಬಿ.ಎ ಮೊದೀನ್‍ರವರ ಅಭಿಮಾನಿಗಳು ಭಾಗವಹಿಸಿದರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸದಾಶಿವ ಉಳ್ಳಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಬಿ.ಎ ಮಹಮ್ಮದ್ ಹನೀಫ್‍ರವರು ವಂದಿಸಿದರು.


Spread the love