ದಕ್ಷಿಣ ಕನ್ನಡ ಜಿಲ್ಲಾ ಬಾಲ ಭವನ ವತಿಯಿಂದ ಕರಾಟೆ ಪಂದ್ಯಾಟ

Spread the love

ದಕ್ಷಿಣ ಕನ್ನಡ ಜಿಲ್ಲಾ ಬಾಲ ಭವನ ವತಿಯಿಂದ ಕರಾಟೆ ಪಂದ್ಯಾಟ

ಮಂಗಳೂರು:  ಬೆಂಗಳೂರು ರಾಜ್ಯ ಬಾಲ ಭವನ ಸೊಸೈಟಿ, ದ.ಕ ಜಿಲ್ಲಾ ಬಾಲ ಭವನ ಸಮಿತಿ ಹಾಗೂ ದ.ಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲೆ ಇವರ ಸಹಯೋಗದಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಅತ್ತಾವರ ಸರೋಜಿನಿ ಮಧುಸೂದನ್ ಕುಶೆ ಶಾಲೆಯಲ್ಲಿ ಬುಧವಾರ ಕರಾಟೆ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

20 ಕೆಜಿಗಿಂತ ಕಡಿಮೆ ಬಾಲಕರ ವಿಭಾಗಲ್ಲಿ ಅನುರಾಗ್ ಚಿನ್ನದ ಪದಕ, ಭುವನ್ ಬೆಳ್ಳಿಯ ಪದಕ. ಯೋಚನ್ ಕಂಚಿನ ಪದಕ ಪಡೆದಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಮೌಲ್ಯ ಚಿನ್ನದ ಪದಕ ಪಡೆದಿರುತ್ತಾರೆ. ನೈಶಾ ಚಿನ್ನದ ಪದಕ ಪಡೆದಿರುತ್ತಾರೆ. 20 ರಿಂದ 23ಕೆಜಿ ವಿಭಾಗದಲ್ಲಿ ಅಧಿತ್ಯ ಚಿನ್ನದ ಪದಕ, ಶ್ರೀಶ ಬೆಳ್ಳಿಯ ಪದಕ, ಸೂರಜ್ ಚಿನ್ನದ ಪದಕ, ಸಾಕ್ಷಿತ್ ಬೆಳ್ಳಿಯ ಪದಕ, ದಕ್ಷ್ ಚಿನ್ನದ ಪದಕ, ಚಿನ್ನಯಿ ಬೆಳ್ಳಿಯ ಪದಕ, ಪ್ರಥಮ್ ಚಿನ್ನದ ಪದಕ, ಮನ್ವಿತ್ ಬೆಳ್ಳಿಯ ಪದಕ ,ಧಮನ್ ಚಿನ್ನದ ಪದಕ, ಭುವನ್ ಬೆಳ್ಳಿಯ ಪದಕ, ದಿಶಾನತ್ ಚಿನ್ನದ ಪದಕ ಜಶ್ವಿತ್ ಬೆಳ್ಳಿಯ ಪದಕ ಪಡೆದಿರುತ್ತಾರೆ. 35 ರಿಂದ 38 ಕೆಜಿ ವಿಭಾಗದಲ್ಲಿ ಸೌಮ್ಯ ಚಿನ್ನದ ಪದಕ, 35 ರಿಂದ 40 ಕೆಜಿ ವಿಭಾಗದಲ್ಲಿ ಮನಿಶಾ ಚಿನ್ನದ ಪದಕ ಅಕ್ಕಮ್ಮ ಬೆಳ್ಳಿಯ ಪದಕ ಪಡೆದಿರುತ್ತಾರೆ. 40 ರಿಂದ 45 ವಿಭಾಗದಲ್ಲಿ ಅನನ್ಯ ಚಿನ್ನದ ಪದಕ ಶಿಭಾನಿ ಬೆಳ್ಳಿಯ ಪದಕ ಪಡೆದಿರುತ್ತಾರೆ. 55 ಕೆಜಿ ವಿಭಾಗದಲ್ಲಿ ವೈಷ್ಣವಿ ಚಿನ್ನದ ಪದಕ ವಿನಿತಾ ಬೆಳ್ಳಿಯ ಪದಕ ಪಡೆದಿರುತ್ತಾರೆ.

ಮಂಗಳೂರು ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಪ್ರಾಂಶುಪಾಲರಾದ ಬಿಂದು ಸಾರ ಶೆಟ್ಟಿ ಇವರು ಕರಾಟೆ ಕಲಿಕೆ ಸ್ವಯಂ ರಕ್ಷಣೆಗೆ ಮಾತ್ರವಲ್ಲದೇ ಸ್ನಾಯುವಿನ ಶಕ್ತಿ, ನಮ್ಯತೆಯ ಸುಧಾರಣೆ, ಸಮತೋಲನ, ಚುರುಕುತನ ಮತ್ತು ಹೆಚ್ಚಿಸುತ್ತದೆ. ಸ್ಪರ್ಧೆಗಳು ಕೇವಲ ಮಕ್ಕಳ ಪ್ರತಿಭೆಗಳನ್ನು ಹೊರಹೊಮ್ಮಿಸುವ ಉದ್ದೇಶವನ್ನು ಹೊಂದಿರುವುದು ಮಾತ್ರವಲ್ಲದೇ “ಮಕ್ಕಳ ಹಕ್ಕುಗಳ ಒಡಂಬಡಿಕೆ” ಪ್ರಕಾರ ಮಕ್ಕಳಿಗೆ ನೀಡಲೇಬೇಕಾದ ಮತ್ತು ಮಕ್ಕಳು ಅನುಭವಿಸಬೇಕಾದ ಮಕ್ಕಳ ಹಕ್ಕುಗಳಲ್ಲಿ ಒಂದಾದ ಭಾಗವಹಿಸುವ ಹಕ್ಕನ್ನು ಕೂಡ ಪಡೆಯುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್.ಎ ಮಾತನಾಡಿ, ಮಕ್ಕಳು ಪಠ್ಯವನ್ನು ಅಭ್ಯಾಸ ಮಾಡುವುದರ ಜೊತೆಗೆ ಹೊರ ಜಗತ್ತಿನಲ್ಲಿ ನಡೆಯುವ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮನೋಭಾವವನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಚಂಪಾ , ಕರಾಟೆ ಗುರು ಸುರೇಂದ್ರ ಬಿ, ಶಾಲೆಯ ಎಲ್ಲಾ ಬೋಧಕ ವರ್ಗದವರು, ಬಾಲ ಭವನದ ಕಾರ್ಯಕ್ರಮ ಸಂಯೋಜಕಿ ಧನ್ಯಶ್ರೀ ಹಾಗೂ ಕಛೇರಿ ಸಹಾಯಕಿ ರೇಖಾ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾರಿಗೂ ಪ್ರಮಾಣ ಪತ್ರವನ್ನು ವಿತರಿಸಿ ಭಾಗವಹಿಸಿದ ಎಲ್ಲಾ ಮಕ್ಕಳನ್ನು ಅಭಿನಂದಿಸಲಾಯಿತು.


Spread the love
Subscribe
Notify of

0 Comments
Inline Feedbacks
View all comments