ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ  ಸ್ವಚ್ಛ ಕ್ವಿಜ್ – 2017

Spread the love

ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ  ಸ್ವಚ್ಛ ಕ್ವಿಜ್ – 2017

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಮಂಗಳೂರಿನ ಪುರಭವನದಲ್ಲಿ, ಜಿಲ್ಲೆಯ 8ರಿಂದ 12ನೇ ತರಗತಿಯೊಳಗಿನ ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಏರ್ಪಡಿಸಿದ ಸ್ವಚ್ಛ ಕ್ವಿಜ್ – 2017ನ್ನು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮಹಮ್ಮದ್ ನಝೀರ್ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ವಿ. ಪ್ರಸನ್ನರವರು ಸ್ವಾಗತಿಸಿ ವಂದನಾರ್ಪನೆಗೈದರು.

ಪುರಭವನದಲ್ಲಿ ನಡೆದ ಮೊದಲ ಸುತ್ತಿನ ಲಿಖಿತ ಸ್ಪರ್ಧೆಯಲ್ಲಿ ಜಿಲ್ಲೆಯ 1000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಇವರಲ್ಲಿ ಅಂತಿಮ ಸುತ್ತಿಗೆ ತಲಾ 2 ವಿದ್ಯಾರ್ಥಿಗಳಂತೆ 6 ತಂಡಗಳನ್ನು ಆಯ್ಕೆ ಮಾಡಲಾಯಿತು. ವಿಜೇತರನ್ನು ಹೊರತು ಪಡಿಸಿ ಲೂಡ್ಸ್ ಸೆಂಟ್ರಲ್ ಸ್ಕೂಲ್, ಬಿಜೈ, ಮಂಗಳೂರು, 2 ತಂಡ ಹಾಗೂ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್, ಮಂಗಳೂರಿನ 1 ತಂಡ ಅಂತಿಮ ಸುತ್ತಿಗೆ ಆಯ್ಕೆಯಾಗಿರುವರು.

ವಿಜೇತರಾಗಿ ಪ್ರಥಮ ಬಹುಮಾನವನ್ನು ಶಾರದಾ ಪಿ.ಯು.ಕಾಲೇಜು, ಕೊಡಿಯಾಲ್‍ಬೈಲ್, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಾದ ಪ್ರಜ್ಞಾ ಎನ್. ಹೆಬ್ಬಾರ್ ಮತ್ತು ಸಿದ್ದಾರ್ಥ್ ಎಚ್.ಬಂಗೇರ, ದ್ವಿತೀಯ ಬಹುಮಾನವನ್ನು ಶಾರದ ವಿದ್ಯಾಲಯ, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಾದ ಪ್ರದ್ಯುಮ್ನ ಉಪಾಧ್ಯಾ ಮತ್ತು ಪನ್ನಗ ಭಟ್, ತೃತೀಯ ಬಹುಮಾನವನ್ನು ಸೈಂಟ್ ಅಲೋಶಿಯಸ್ ಪಿ.ಯು. ಕಾಲೇಜು, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಾದ ಪ್ರಿನ್ಸನ್ ಪಿರೇರಾ ಮತ್ತು ಎರೋಲ್ ಫೆರ್ನಾಂಡೀಸ್ ಪಡೆದುಕೊಂಡರು.

ಈ ಸಂದರ್ಭದಲ್ಲಿ ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ ಆಳ್ವ, ಪುತ್ತೂರು ನಗರಸಭೆ ಪೌರಾಯುಕ್ತೆ ರೂಪ ಶೆಟ್ಟಿ, ಮೂಡುಬಿದ್ರೆ ಪುರಸಭೆ ಮುಖ್ಯಾಧಿಕಾರಿ ಶೀನ ನಾಯ್ಕ, ಮೂಲ್ಕಿ ಪಟ್ಟಣ ಪಂಚಾಯತ್‍ನ ಮುಖ್ಯಾಧಿಕಾರಿ ಇಂದುಮತಿ, ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರು ಮಧು ವಾಲ್‍ನಟ್ ನಾಲೆಡ್ಜ್ ಸೊಲ್ಯುಷನ್‍ನ ರಾಘವ್ (ಕ್ವಿಜ್ ಮಾಸ್ಟರ್), ನಿಸರ್ಗ ಫೌಂಡೇಶನ್, ಮಂಗಳೂರಿನ ಮಂಜುನಾಥ್ ಡಿ, ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


Spread the love