Spread the love
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೋನಾ ಪಾಸಿಟಿವ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮತ್ತೆ ಮೂರು ಮಂದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ವರದಿಯಾಗಿದೆ.
ರೋಗಿ ಸಂಖ್ಯೆ ಪಿ 536 ರ ಪ್ರಾಥಮಿಕ ಸಂಪರ್ಕದಲ್ಲಿದ್ದಂತಹ ಇಬ್ಬರಿಗೆ ಸುಮಾರು 38 ವರ್ಷ ವಯಸ್ಸಿನ ಮಹಿಳೆ ಹಾಗೂ 11 ವಯಸ್ಸಿನ ಬಾಲಕಿಯ ಗಂಟಲು ದ್ರವ ಪರೀಕ್ಷೆ ವರದಿ ಸ್ವೀಕೃತವಾಗಿದ್ದು, ಇವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿರುತ್ತದೆ. ಇವರು ಮಂಗಳೂರು ಮಹಾನಗರ ವ್ಯಾಪ್ತಿಯ ಬೋಳೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿರುತ್ತದೆ ಮತ್ತು ಇವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ರೋಗಿ ಸಂಖ್ಯೆ 5-390 ರ ಸಂಪರ್ಕದಲ್ಲಿದ್ದ 16 ವರ್ಷದ ಬಾಲಕಿಯನ್ನು ಎನ್.ಐ.ಟಿ.ಕ. ಯಲ್ಲಿ ವೈದ್ಯಕೀಯ ನಿಗಾದಲ್ಲಿರಿಸಲಾಗಿದ್ದು, ಇವರ 12 ನೇ ದಿನದ ಗಂಟಲು ದ್ರವ ವರದಿ ಬಂದಿದ್ದು, ಅದರಲ್ಲಿ ಸೋಂಕು ಇರುವುದು ದೃಢಪಟ್ಟಿರುತ್ತದೆ.
Spread the love