ದರೊಡೆಕೋರರ ಮೇಲೆ ಬಂಟ್ವಾಳ ಪೊಲೀಸರಿಂದ ಗುಂಡಿನ ದಾಳಿ
ಮಂಗಳೂರು: ಬಂಟ್ವಾಳದ ಮಣಿಹಳ್ಳದಲ್ಲಿ ವಾಹನ ತಪಾಸಣೆ ವೇಳೆ ನಿಲ್ಲಿಸದೆ ಪರಾರಿಯಾಗುತ್ತಿದ್ದವರ ಮೇಲೆ ಪೋಲಿಸ್ ಫಯರಿಂಗ್ ನಡೆದಿದ್ದು, ಮೂವರನ್ನು ಪೋಲಿಸರು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾದ ಘಟನೆ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.
ಬಂಧಿತರನ್ನು ಸದ್ದಾಂ ಮಾರಪಳ್ಳ, ಮೌಸಿನ್ ಸುರತ್ಕಲ್, ಮಹಮ್ಮದ್ ಇರ್ಶಾದ್ ಬೊಳ್ಳಾಯಿ ಎಂದು ಗುರುತಿಸಿದ್ದು, ಅಮ್ಮೆಮಾರ್ ಮನ್ಸೂರು ಮತ್ತು ಅಮ್ಮಿ ಎಂಬವರು ಪರಾರಿಯಾಗಿದ್ದಾರೆ.
ಗುರುವಾರ ಮಧ್ಯರಾತ್ರಿ ವೇಳೆ ಪೋಲಿಸರು ತಪಾಸಣೆ ನಡೆಸುತ್ತಿದ್ದ ವೇಳೆ ವಾಹನವೊಂದು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಪೋಲಿಸ್ ಅಧಿಕಾರಿಗಳ ಮೇಲೆ ಹಾಯಿಸಲು ಯತ್ನಿಸಿ ಪರಾರಿಯಾಗಲು ಹೋದ ವೇಳೆ ನಗರ ಠಾಣೆಯ ಎಸ್ ಐ ಚಂದ್ರಶೇಖರ್ ಮತ್ತು ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಅವರು ಫಯರಿಂಗ್ ನಡೆಸಿದ್ದಾರೆ. ಕಾರಿನಲ್ಲಿ ಒಟ್ಟು ಐದು ಮಂದಿ ಇದ್ದು ಮೂವರನ್ನು ಪೋಲಿಸರು ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ. ಕಾರಿನಲ್ಲಿ ತಲವಾರು ಸಹಿತ ಮಾರಕಾಸ್ತ್ರಗಳು ದೊರೆತಿದ್ದು ವಾಹನಗಳನ್ನು ತಡೆದು ಡಕಾಯತಿ ಮಾಡಲು ಮತ್ತು ದಾರಿಯಲ್ಲಿಯಾವುದಾದರು ಮನೆಯಲ್ಲಿ ದನ ಕಳ್ಳತನ ಮಾಡಲು ಹೋಗಿರುವುದಾಗಿ ತಿಳಿಸಿರುತ್ತಾರೆ.