ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಸವಿದ ರಾಹುಲ್ ಗಾಂಧಿ

Spread the love

ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಸವಿದ ರಾಹುಲ್ ಗಾಂಧಿ

ದಾವಣಗೆರೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿನ ಪಿಜೆ ಬಡಾವಣೆಯಲ್ಲಿರುವ ವಿಜಿ ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ಬೆಣ್ಣೆ ದೋಸೆ ಸವಿದರು.

ಬೆಣ್ಣೆದೋಸೆ ರುಚಿಗೆ ಮನಸೋತ ಅವರು ಹೋಟೆಲ್ ಮಾಲೀಕನಿಗೆ ಮೆಚ್ಚುಗೆ ತಿಳಿಸಿದರು. ಬಳಿಕ ಪಕ್ಕದಲ್ಲಿರುವ ಪದ್ದು ಕಾಫಿ ಬಾರ್‌ನಿಂದ ಚಹಾ ತರಿಸಿಕೊಂಡು ಕುಡಿದರು. ನಂತರ ಅಭಿಮಾನಿಗಳಿಗೆ ಹಸ್ತಲಾಘವ ಮಾಡಿ ಚಿತ್ರದುರ್ಗಕ್ಕೆ ತೆರಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೂಡ ಬೆಣ್ಣೆ ದೋಸೆ ತಿಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ ರವರು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪಸ್ಥಿತರಿದ್ದರು.


Spread the love
1 Comment
Inline Feedbacks
View all comments
drona
6 years ago

Enjoy man enjoy. When you come to ‘kudla’ enjoy koru Totti too. At udipi you can try Mattu gulla bolue huli. Aao ji Khao ji.