ದಿ.4 ರಿಂದ 7 ರ ವರೆಗೆ ‘ವಿಶ್ವ ಕೊಂಕಣಿ ನಾಟಕ ಮಹೋತ್ಸವ’

Spread the love

ದಿ.4 ರಿಂದ 7 ರ ವರೆಗೆ ‘ವಿಶ್ವ ಕೊಂಕಣಿ ನಾಟಕ ಮಹೋತ್ಸವ’
ವಿಶ್ವ ಕೊಂಕಣಿ ನಾಟಕ ಮಹೋತ್ಸವವು ಇದೇ ಅಕ್ಟೋಬರ್ ದಿ.4 ರಿಂದ 7 ರ ವರೆಗೆ ನಾಲ್ಕು ದಿನಗಳ ಕಾಲ ಮಂಗಳೂರಿನ ಟಿ.ವಿ.ರಮಣ ಪೈ ಸಭಾಗೃಹದಲ್ಲಿ ಪ್ರತಿ ದಿನ ಸಂಜೆ 5 ಗಂಟೆ 30 ನಿಮಿಷಕ್ಕೆ ನಡೆಯಲಿರುವುದು. ಕೊಂಕಣಿ ನಾಟಕ ಕ್ಷೇತ್ರದ ಖ್ಯಾತನಾಮರಾದ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ, ಶ್ರೀ ರಮಾನಂದ ಚೂರ್ಯ, ಶ್ರೀ ಚಾ.ಫ್ರಾ.ಡಿಕೋಸ್ತಾ ಹಾಗೂ ಶ್ರೀ ಹೊಸಾಡÀ ಬಾಬುಟಿ ನಾಯಕ್ ಅವರ ಸ್ಮರಣಾರ್ಥ ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನವು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಡನೆ ಈ ನಾಟಕ ಮಹೋತ್ಸವವನ್ನು ಆಯೋಜಿಸಿದೆ.
ದಿ.4 ರಂದು ಕೇರಳ ರಾಜ್ಯದ ಎರ್ನಾಕುಲಂ ನ ಕೇರಳ ‘ಕೊಂಕಣಿ ಕಲ್ಚರಲ್ ಫೆÇೀರ್ಟ್’ಎಲಮಕ್ಕರ ಇವರು ಪ್ರಸ್ತುತ ಪಡಿಸುವ ‘ರಾವ್ ಮಾಮ್ಮಾಲೆ ವ್ಹೊರಣ್’ ನಾಟಕದ ಮೂಲ ಕಥೆ – ಜಾನ್ ಫೆರ್ನಾಂಡಿಸ್. ನಿರ್ದೇಶನ ಹಾಗೂ ಸಂಭಾಷಣೆ -ಚಂದ್ರಬಾಬು ಯು.ಶೆಟ್ಟಿ. ಸಂಗೀತ ಸಂಯೋಜನೆ-ಸಂದೀಪ್ ನಟರಾಜನ್ ಹಾಗೂ ಸಾನು ಗೋಪಿನಾಥ್.
ಆಧುನಿಕ ಬದುಕಿನ ಜಂಜಾಟದಲ್ಲಿ ಕಳೆದುಹೋಗುತ್ತಿರುವ ಕೊಂಕಣಿ ಜಾನಪದ ಸಂಪತ್ತು,ಸಂಪ್ರದಾಯ,ಹಾಡುಹಸೆಗಳನ್ನು ಪುನರಪಿ ನೆನಪಿಸುತ್ತಾ, ಇವುಗಳನ್ನು ಕಾಯ್ದಿಟ್ಟುಕೊಳ್ಳಬೇಕಾದ ಅನಿವಾರ್ಯತೆಯ ಸಂದೇಶವನ್ನು ತಿಳಿ ಹಾಸ್ಯದೊಡನೆ ಈ ನಾಟಕ ನೀಡುತ್ತದೆ.
ದಿ.5 ರಂದು ಮಂಗಳೂರಿನ “ರಂಗ ಅಂತರಂಗ’ತಂಡದವರು ಪ್ರಸ್ತುತಪಡಿಸುವ “ವರ್ಸಾಕ ಏಕ ಪಾವಟಿ’- ನಾಟಕದ ಕಥೆ ಹಾಗೂ ನಿರ್ದೇಶನ- ಎಡ್ಡಿ ಸಿಕ್ವೇರಾ. ಸಂಭಾಷಣೆ-ಚಾ.ಫ್ರಾ.ಡಿಕೋಸ್ತಾ. ಸಂಗೀತ ಸಂಯೋಜನೆ-ರೇನ್ಸನ್ ಸೆರಾವೊ.
ಬದುಕಿದ್ದಾಗ ಅಥವಾ ವೃದ್ಧಾಪ್ಯದ ಸಮಯದಲ್ಲಿ ಸರಿಯಾಗಿ ನೋಡಿಕೊಳ್ಳದೆ,ತಂದೆ ತಾಯಂದಿರು ಗತಿಸಿದ ಬಳಿಕ ಅವರನ್ನು ಕುರಿತು ಅಪರಿಮಿತ ಪ್ರೀತಿ,ವಿಶ್ವಾಸಗಳನ್ನು ತೋರಿಕೆಯ ಮಾತುಗಳಲ್ಲಿ ವ್ಯಕ್ತಪಡಿಸುತ್ತಾ ಅವರ ಭಾವಚಿತ್ರಗಳನ್ನು ವಾರ್ತಾಪತ್ರಿಕೆಗಳಲ್ಲಿ ಪ್ರಕಟಿಸುವ, ಮನೆಯ ಆಯಕಟ್ಟಿನ ಜಾಗದಲ್ಲಿ ಅವರ ದೊಡ್ಡ ದೊಡ್ಡ ಭಾವಚಿತ್ರಗಳನ್ನು ಇರಿಸಿ,ಹೂವಿನಹಾರವನ್ನು ಹಾಕಿ,ಮೊಸಳೆ ಕಣ್ಣೀರನ್ನು ಸುರಿಸಿ,ಕಪಟ ಪ್ರೀತಿಯನ್ನು ತೋರ್ಪಡಿಸುವ ಇಂದಿನ ಮಕ್ಕಳುಮರಿಗಳನ್ನು ವಿಡಂಬಿಸುತ್ತಾ,ಮಾತಾ ಪಿತರ ಬಗ್ಗೆ ನೈಜ ಪ್ರೀತಿ,ಕಾಳಜಿಯನ್ನು ತೋರಬೇಕಾದ ಅಗತ್ಯದ ಕುರಿತು ಈ ನಾಟಕ ಹೇಳುತ್ತದೆ.
ದಿ.6 ರಂದು ಗೋವಾದ ‘ಅಂತ್ರುಜ್ ಲಲಿತಕ್’ ಪಂಗಡದವರು ಪ್ರಸ್ತುತಪಡಿಸುವ ‘ಪ್ರೇಮ್ ಜಾಗೊರ್’ ನಾಟಕದ ರಚನೆ- ಪುಂಡಲೀಕ ನಾರಾಯನ ನಾಯ್ಕ್. ನಿರ್ದೇಶನ–ಶ್ರೀಧರ ಕಾಮತ್, ಬಾಂಬೋಲ್ಕರ್. ಸಂಗೀತ ಸಂಯೋಜನೆ- ಚೇತನ್ ಬೆಡೇಕರ್. ಗೋವಾದ ಜಾನಪದ ರಂಗಭೂಮಿ ಪ್ರಕಾರವಾದ ‘ಜಾಗೊರ್’ ಮೂಲಕ ಪರಂಪರೆ ಮತ್ತು ಆಧುನಿಕತೆಯ ನಡುವಣ ಸಂಘರ್ಷವನ್ನು ಹಾಡು,ನೃತ್ಯಗಳ ಮೂಲಕ ಈ ನಾಟಕ ಸಂಕೇತಿಸುತ್ತದೆ.
ದಿ. 7 ರಂದು ಮುಂಬೈಯ ಕೊಂಕಣಿ ತ್ರಿವೇಣಿ ಕಲಾಸಂಗಮ ತಂಡದವರು ಪ್ರಸ್ತುತಪಡಿಸುವ ‘ಹೂನ್ ಉದ್ಕಾ ಘೋಟು’ ನಾಟಕದ ರಚನೆ- ಹೊಸಾಡ ಬಾಬುಟಿ ನಾಯಕ್. ನಿರ್ದೇಶನ-ಡಾ.ಚಂದ್ರಶೇಖರ .ಎನ್.ಶೆಣೈ. ಸಂಸಾರದಲ್ಲಿ ಸಾಮರಸ್ಯದ ಹಾಗೂ ಪ್ರೀತಿಯ ಅನಿವಾರ್ಯತೆಯನ್ನು ಈ ನಾಟಕ ಸಾರುತ್ತದೆ.
ಮುಖ್ಯವಾಗಿ ಕೊಂಕಣಿ ಭಾಷೆಯನ್ನಾಡುವ ಗೋವಾ, ಕರ್ನಾಟಕ, ಮಹಾರಾಷ್ತ್ರ ಹಾಗೂ ಕೇರಳ ರಾಜ್ಯಗಳನ್ನು ಪ್ರತಿನಿಧಿಸುವ ಈ ನಾಟಕ ತಂಡಗಳು ತಮ್ಮ ತಮ್ಮ ಪ್ರದೇಶದ ನಾಟಕಕಲೆಯನ್ನು ಆಯಾ ಪ್ರಾದೇಶಿಕ ಸೊಗಡಿನ ಸಂಗೀತ ಹಾಗೂ ರಂಗಸಜ್ಜಿಕೆಯೊಡನೆ ಪರಸ್ಪರ ವಿನಿಮಯ ಮಾಡಿ ಪ್ರದರ್ಶಿಸುವ ಈ ವಿಶ್ವ ಕೊಂಕಣಿ ನಾಟಕ ಮಹೋತ್ಸವವು ಉಚಿತ ಪ್ರವೇಶದ ಮೂಲಕ ಮಂಗಳೂರು ಹಾಗೂ ಆಸುಪಾಸಿನ ಕೊಂಕಣಿ ನಾಟಕ ಕಲಾ ರಸಿಕರಿಗೆ ರಸದೌತಣ ನೀಡುವುದರಲ್ಲಿ ಸಂದೇಹವಿಲ್ಲ.


Spread the love