ದೀಪಾವಳಿ ಸಂಭ್ರಮಕ್ಕೆ ಮುಂಬಯಿ ಸಜ್ಜು…..
ಮುಂಬಯಿ: ಮಹಾನಗರ ಮುಂಬಯಿ ಮತ್ತೆ ನವ ವಧುವಿನಂತೆ ಶೃಂಗಾರಗೊಂಡು ಬೆಳಕಿನ ಹಬ್ಬದ ಸಂಭ್ರವಕ್ಕೆ ಮೆರೆದು ನಿಂತಿದೆ. ಕಾರ್ತಿಕ ಮಾಸದ ಶರದೃತುವಿನ ಪ್ರಾಪ್ತತೆಯ ಸೌಂದರ್ಯತೆಯ ಪ್ರಕೃತಿಯಲ್ಲೂ ರಾಷ್ಟ್ರದ ಆಥಿರ್ಕ ರಾಜಧಾನಿ ಮುಂಬಯಿ ಇದೀಗ ಕಂಗೋಳಿಸುತ್ತಿದೆ.
ಭಾರತ ದೇಶದ ನಿಜರ್ಥದ ಭಾವೈಕ್ಯತೆ, ಸಾಮರಸ್ಯದ ಗೂಡಾದ ಮುಂಬಯಿ ಸರ್ವಧಮೀಯರ ನಾಡಿಗಿದ್ದು ಇಂತಹ ಬೆಳಕಿನ ಹಬ್ಬ ದೀಪಾವಳಿಗೆ ಅರ್ಥವನ್ನುಂಟು ಮಾಡುವ ನಾಡು ಕೂಡಾ ಹೌದು. ಇಲ್ಲಿನ ಜನತೆ ಜಾತಿಮತ ಬೇಧ ಮರೆತು ಏಕತೆಯಿಂದ ಬಾಳುತ್ತಾ ಪರಸ್ಪರ ಅನ್ಯೋನ್ಯತೆಯಿಂದ ದೀಪಾವಳಿಯನ್ನೂ ಆಚರಿಸುತ್ತಿರುವುದು ಅಭಿನಂದನೀಯ. ಇದು ದೇಶವಿದೇಶಿಯರಿಗೂ ಮಾದರಿ. ದೀಪಾರಾಧನೆಗೆ ತುಂಬಾ ಇಲ್ಲಿ ತುಂಬಾ ಮಹತ್ವವಿದೆ.
ನಗರದಾದ್ಯಂತ ಅಂಧಾಕಾರ ನಿವಾರಣೆಗೊಂಡು ವೈವಿಧ್ಯಮಯ ಲೈಟು, ಗೂಡುದೀಪ, ನಕ್ಷತ್ರಗಳಿಂದ ಪ್ರಕಾಶಮಾನವಾಗಿ ಕಂಗೋಳಿಸುತ್ತಿದೆ. ನರಕ ಚತುರ್ದಶಿಯಿಂದ, ಲಕ್ಷ್ಮೀಪೂಜೆ, ಬಲಿಪಾಡ್ಯ, ಗೋವರ್ಧ ನ ಪೂಜೆ, ಸಹೋದರ ಬಿದಿಗೆ (ಬಾವುಬೀಚ್), ಲಕ್ಷದೀಪೆÇೀತ್ಸವ ಇತ್ಯಾದಿಗಳಿಂದ ತುಳಸೀ ಪೂಜೆ ತನಕವೂ ಮುಂಬಯಿಗರಿಗೆ ದೀಪಾವಳಿಯ ಸಡಗರವೋ ಸಡಗರ. ಇಲ್ಲಿನ ಜನತೆ ಎಲ್ಲವನ್ನೂ ಅಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಆಚರಿಸುತ್ತಾ ಹಬ್ಬದ ನಿಜರ್ಥದ ಸಂದೇಶ ಹಂಚಿಕೊಳ್ಳುತ್ತಾರೆ. ಈ ಬಾರಿಯ ದೀಪಾವಳಿಯು ಸರ್ವರ ಮನ-ಮನೆಗಳ ಅಂತರ್ಜ್ಯೋತಿಯನ್ನು ಉರಿಸುತ್ತಾ ಸಹಬಾಳ್ವೆಗೆ ಪ್ರೇರಕವಾಗಲಿ.