ದುಬಾಯಿಯಲ್ಲಿ ‘ಜ್ಞಾನಯಜ್ಞ’ ಯಕ್ಷಮಿತ್ರರ ‘ಚಕ್ರೇಶ್ವರಪರೀಕ್ಷಿತ’ ಯಕ್ಷಗಾನ ಪ್ರದರ್ಶನ

Spread the love

ದುಬಾಯಿಯಲ್ಲಿ “ಜ್ಞಾನಯಜ್ಞ” ಯಕ್ಷಮಿತ್ರರ “ಚಕ್ರೇಶ್ವರ ಪರೀಕ್ಷಿತ”
ಯಕ್ಷಗಾನ ಪ್ರದರ್ಶನ

ದುಬಾಯಿ: ಜೂನ್30ನೇ ತಾರೀಕು ಶುಕ್ರವಾರ ಸಂಜೆ5.00ಗಂಟೆಯಿಂದ ಶೇಖ್ರಾಶೀದ್ಸ ಭಾಂಗಣ- (ಇಂಡಿಯನ್ಹೈಸ್ಕೂಲ್ದುಬಾಯಿ) ಭವ್ಯರಂಗ ಮಂಟಪದಲ್ಲಿ ಒಂದುಅಪೂರ್ವ “ಜ್ಞಾನಯಜ್ಞ” ಕಾರ್ಯಕ್ರಮ ಪ್ರೀಶಿಯಸ್ಪಾರ್ಟೀಸ್ಅಂಡ್ಎಂಟರ್ಟೈನ್ಮೆಂಟ್ಸರ್ವಿಸಸ್ಶ್ರ ಆಶ್ರಯದಲ್ಲಿ  ಯಕ್ಷಮಿತ್ರರು ಅರ್ಪಿಸಿದ ಯಕ್ಷಗಾನ”ಚಕ್ರೇಶ್ವರಪರೀಕ್ಷಿತ”ಯಶಸ್ವಿ ಪ್ರದರ್ಶವಾಗಿ ಸಭಾಂಗಣದಲ್ಲಿ ಕಿಕ್ಕಿರಿದ ಕೊಲ್ಲಿ ನಾಡಿನ ಯಕ್ಷಗಾನ ಪ್ರೇಮಿಗಳಮನ ಸೆಳೆಯಿತು.

ಶ್ರೀವಾಸುದೇವ ಭಟ್ ಮತ್ತು ಶ್ರೀವೆಂಕಟೇಶ್ ಶಾಸ್ತ್ರಿ ಪುತ್ತಿಗೆ ಇವರ ಪೌರೋಹಿತ್ಯದಲ್ಲಿ ಚೌಕಿಪೂಜೆ, ರಂಗ ಪೂಜೆ ನಡೆದು ನಂತರ ದೀಪಬೆಳಗಿಸುವುದರೊಂದಿಗೆ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಮುಖ್ಯಾತಿಥಿಗಳಾಗಿ ಶ್ರೀಯುತರುಗಳಾದ ಹರೀಶ್ ಶೇರೆಗಾರ್, ಸರ್ವೊತ್ತಮ ಶೆಟ್ಟಿ, ಶ್ರೀ ವಾಸುದೇವ ಭಟ್, ಭಾಗವತರಾದ ಶ್ರೀಗಿರೀಶ್ರೈಕಕ್ಕೆಪದವು, ಶ್ರೀಗಣೇಶ್ ರಾವ್, ಹರೀಶ್ ಬಂಗೇರಾ  ಮತ್ತು ಯಕ್ಷಮಿತ್ರರು ತಂಡದ ಕಾರ್ಯಕಾರಿ ಸಮಿತಿಯ ಶ್ರೀಯುತರುಗಳಾದ ದಿನೇಶ್ಶೆಟ್ಟಿ ಕೊಟ್ಟಿಂಜ, ಚಿದಾನಂದ ಪೂಜಾರಿ, ವಿಠಲ್ ಶೆಟ್ಟಿ ದಯಾ ಕಿರೋಡಿಯನ್, ಗಣೇಶ್ ರೈ ಹಾಗೂ ಇನ್ನಿತರ ಅತಿಥಿಗಳು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

ಭಾಗವತರು – ಶ್ರೀಗಿರೀಶ್ಕಕ್ಕೆಪದವು, ಚೆಂಡೆ-ಮದ್ದಳೆ ಶ್ರೀಗಣೇಶ್ರಾವ್ಅಡೂರು, ಮದ್ದಳೆ – ಲಕ್ಶ್ಮೀನಾರಾಯಣ ಶರ್ಮಾ, ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಚಕ್ರತಾಳ- ಚಂದ್ರಮೋಹನ್ ಶೆಟ್ಟಿಗಾರ್ , ವೇಷಭೂಷಣ-ಪ್ರಸಾದನ- ಗಂಗಾಧರ್ಡಿ ಶೆಟ್ಟಿಗಾರ್, ಜನಾರ್ಧನ್ಬದಿಯಡ್ಕ, ರಂಗಸಜ್ಜಿಕೆ – ದಿನೇಶ್ಬಿಜೈ, ಅನಂದ್ಸಾಲಿಯಾ ನ್ಕಿನ್ನಿಗೋಳಿ.

ಪಾತ್ರವರ್ಗದಲ್ಲಿ – ಧರ್ಮರಾಯ- ಭವಾನಿ ಶಂಕರ್ ಶರ್ಮಾ. ಭೀಮ- ಮಕರಂದ, ವಿಷ ವೈದ್ಯ ಪತ್ನಿ, ತಕ್ಷಕ, ಬ್ರಾಹ್ಮಣ ಪತ್ನಿ – ಗಿರೀಶ್ ನಾರಾಯಣ ಕಾಟಿಪಳ್ಳ. ಅರ್ಜುನ – ಪ್ರತೀಕ್ಷ ದಯಾನಂದ್ಪಕ್ಕಳ. ನಕುಲ, ಜರ- ಭೀಮಸೆನ – ಅದಿತಿ ದಿನೇಶ್ ಶೆಟ್ಟಿ ಕೊಟ್ಟಿಂಜ . ಸಹದೇವ ಶುಕಮುನಿ, ಶೃತಸೇನ – ಪ್ರಾಪ್ತಿಜಯಾನಂದ ಪಕ್ಕಳ. ಬಾಲಪರಿಕ್ಷಿತ್ವನ ಪಾಲಕ, ಬ್ರಾಹ್ಮಣ, ನಾಗ – ಅದಿತ್ಯ ದಿನೇಶ್ಶೆಟ್ಟಿ ಕೊಟ್ಟಿಂಜ. ಕಲಿಪುರುಷ, ಉತ್ತಂಕ – ವಾಸುಬಾಯರು. ಕೃತವರ್ಮ, ತಕ್ಷಕ – ವಿಕ್ರಮಶೆಟ್ಟಿ ಕಡಂದಲೆ. ಸ್ಯಾತಕಿ, ಶೃಂಗಿ, ಉಗ್ರಸೇನ- ಶರತ್ಕುಮಾರ್ಪೂಜಾರಿ. ಸೂರ್ಯಸೇನ – ದಕ್ಷರವಿ ಕೋಟ್ಯಾನ್. ವಜ್ರ, ಆಸ್ತಿಕ – ಶರಣ್ಯ ವೆಂಕಟೇಶ್ಶಾಸ್ತ್ರಿ ಪುತ್ತಿಗೆ. ಸನಕಾದಿ, ಮಂಗಲ – ಸುಮಂತಾ ಗಿರೀಶ್ ನಾರಾಯಣ್. ಸನಕಾದಿವನಪಾಲಕ – ಇಶಿತಾ ಶೇಕರ್ ಪೂಜಾರಿ, ಸ್ಮೃತಿ ಲಕ್ಷ್ಮಿಕಾಂತ್ ಭಟ್, ಶ್ರೀದೇವಿ ಲಕ್ಷ್ಮಿನಾರಾಯಣ ಶರ್ಮಾ.

ಮೂರ್ತೆಯವನು, ವಿಷವೈದ್ಯ – ಚಿದಾನಂದ ಪೂಜಾರಿ ವಾಮಂಜೂರು. ಬಲರಾಮ, ದೇವೆಂದ್ರ – ಸುಖಾಂತ ರಾಮ್ಜೆಪ್ಪು. ದಾರುಕವಿಪ್ರ- ಕೃಷ್ಣರಾಜ್ ರಾವ್ ಅಬುಧಾಬಿ. ಪರಿಕ್ಷಿತ, ರಕ್ತಾಂಗ – ಕಿಶೊರ್ಗಟ್ಟಿ ಉಚ್ಚಿಲ. ಚಂಡಾಲ – ಸತೀಶ್ ಶೆಟ್ಟಿಗಾರ್ ವಿಟ್ಲ. ಇರಾವತಿ, ಮಂಗಲ, ಸ್ತ್ರೀವೇಷ – ಸ್ವಾತಿ ಶರತ್ ಸರಳಾಯ. ವನಪಾಲಕರು – ಅಶೋಕ್ ಶೆಟ್ಟಿ, ತನೀಶ್ಪ್ರಕಾಶ್ಪಕ್ಕಳ, ಅನ್ವಿಜಗನ್ನಾಥ್ಬೆಳ್ಳಾರೆ, ವೈಷ್ಣವಿ ಮನೋಹರ್ ಶೆಟ್ಟಿಗಾರ್ . ಶಮಿಕ – ಪ್ರಭಾಕರ್ ಡಿ ಸುವರ್ಣ ಕರ್ನಿರೆ. ರಕ್ತಾಕ್ಷ – ಕೃಷ್ನರಾವ್ಪ್ರಸಾದ್ಸುರತ್ಕಲ್. ರಕ್ತಕೇಶಿ – ಬಾಲಕೃಷ್ಣ ಡಿ ಶೆಟ್ಟಿಗಾರ್ ಕಿನ್ನಿಗೋಳಿ. ವಜ್ರಬಾಹು – ಅನಿಕೇತಬಿ.ಎಸ್. ಶರ್ಮಾ. ಗುರುವಾಯುರಪ್ಪ – ಸ್ವಾತಿ ಸಂತೋಷ್ ಕಟೀಲು. ಶ್ರೀಕೃಷ್ಣ, ಜನಮೇಜಯ – ಡಿ ಶೆಟ್ಟಿಗಾರ್ ಕಿನ್ನಿಗೋಳಿ.

ಭಾಗವತ ಶ್ರೀಗಿರೀಶ್ರೈಕಕ್ಕೆ ಪದವುರವರಿಗೆ ಗೌರವಪೂರ್ವಕ ಸನ್ಮಾನ

ಕರ್ನಾಟಕದ ತುಳುನಾಡಿನ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಕ್ಕೆಪದವುನ ಶ್ರೀ ಪದ್ಮನಾಭ ರೈ ಮತ್ತು ಶ್ರೀಮತಿ ಸುಮತಿ ರೈ ದಂಪತಿಗಳ ಮಗನಾಗಿ ಜನಿಸಿ, ತಮ್ಮ ವಿದ್ಯಾಭ್ಯಾಸದನಂತರ ಧರ್ಮಸ್ಥಳ ಕೇಂದ್ರದಲ್ಲಿ ಬೈಪಾಡಿತ್ತಾರಿಂದ ಮತ್ತು ಮೂಲಪೀಠ ಶ್ರೀಕುರಿಯಗಣಪತಿ ಶಾಸ್ತ್ರಿ ಹಾಗೂ ಪಟ್ಲಸತೀಶ್ಶೆಟ್ಟಿಯವರಿಂದ ಪ್ರಸಂಗ ಮಾಹಿತಿ ಕಲಿತು ನಂತರ ಕಟೀಲು 3ನೇಮೇಳದಲ್ಲಿ 7ವರ್ಷ ಸಂಗೀತಗಾರರಾಗಿ ಸೇವೆಸಲ್ಲಿಸಿದ್ದಾರೆ.

ಅಳಿಕೆಸತ್ಯಸಾಯಿ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ಗಂಗಾಧರ ಭಟ್ಟರ ಸಹಾಯಕರಾಗಿ ಸೇವೆಸಲ್ಲಿಸುತಿದ್ದಾರೆ. ನಾಲ್ಕು ವರ್ಷದಿಂದ ಶ್ರೀಬಪ್ಪನಾಡು ದುರ್ಗಾಪರಮೇಶ್ವರಿ ಮೇಳದಲ್ಲಿ ಪ್ರಧಾನಭಾಗವತರಾಗಿ ಸೇವೆಸಲ್ಲಿಸಿದ್ದಾರೆ. ತುಳು ಪ್ರಸಂಗ “ಬನತಬಂಗಾರ್” ಇವರಿಗೆ ಅತ್ಯಂತ ಖ್ಯಾತಿಯನ್ನು ತಂದುಕೊಟ್ಟಿರುವ ಪ್ರಸಂಗವಾಗಿದೆ. ಬಹರೈನ್ನಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಸಹಭಾಗಿಯಾಗಿದ್ದಾರೆ. ವಿದ್ಯಾಕೊಳ್ಳುರುರವರ ಹಿಂದಿ ಯಕ್ಷಗಾನ “ಪಂಚವಟಿ” “ಭಸ್ಮಾಸುರ ಮೋಹಿನಿ” “ಮಹಿಷಾವಧೆ” ಭಾರತದ ಪ್ರಮುಖ ನಗರಗಳಾದ ದೆಹಲಿ, ಕಲ್ಕತ್ತಾ, ಗುಜರಾತ್, ಜಮ್ಮುಕಾಶ್ಮೀರ, ಚೆನೈ, ಭೂಪಾಲ್, ಕಾಶಿ, ಹರಿಧ್ವಾರದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ನಾದವೈಭವ ಮತ್ತು ಗಾನವೈಭವ ಹಲವು ಕಾರ್ಯಕ್ರಮಗಳನ್ನು ನೀಡಿರುವ ಇವರನ್ನು ಹಲವಾರು ಅಭಿಮಾನಿಗಳು, ಸಂಘಸಂಸ್ಥೆಗಳು ಸನ್ಮಾನಿ ಗೌರವಿಸಿದ್ದಾರೆ. “ಯಕ್ಷಮಂದಾರ” ಬಿರುದು ಗಿರೀಶ್ರೈಕಕ್ಕೆಪದವುರವರ ಸಾಧನೆಗೆ ಸಂದಗೌರವವಾಗಿದೆ.
ಯು.ಎ.ಇ.ಯಲ್ಲಿ ನೆಲೆಸಿರುವ ಸಮಸ್ಥ  ಯಕ್ಷಗಾನ ಅಭಿಮಾನಿಗಳ ಪರವಾಗಿ  ಸನ್ಮಾನಿಸಿ ಗೌರವಿಸಲಾಯಿತು.

ಪ್ರಖ್ಯಾತ ಚೆಂಡೆವಾದ ಕಶ್ರೀಅಡೂರ್ಗಣೇಶ್ರಾವ್ರವರಿಗೆ ಸನ್ಮಾನ
ಕರ್ನಾಟಕ ಕಡಲತೀರದ ತುಳುನಾಡಿನ ಪ್ರಖ್ಯಾತ ಚೆಂಡೆವಾದಕ ಶ್ರೀಕೃಷ್ಣ ಮತ್ತು ಶ್ರೀಮತಿ ಪಾರ್ವತಿ ದಂಪತಿಗಳ ಮಗನಾಗಿ ಕಾಸರಗೋಡಿನಲ್ಲಿ ಅಡೂರಿನಲ್ಲಿ ಜನಿಸಿರುವ ಇವರು ತಮ್ಮ ತಂದೆಯವರಿಂದ ಮತ್ತು ಕುಕ್ಕಿಲ ಶಂಕರಭಟ್ಟರಿಂದ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವರು. ಯಕ್ಷಾಗನರಂಗದಲ್ಲಿ 37 ವರ್ಷಗಳಿಂದ ತಿರುಗಾಟದ ಅನುಭವ ಪಡೆದವರು. ಪ್ರಸ್ತುತ ಧರ್ಮಸ್ಥಳ ಮೇಳದಲ್ಲಿ ಕಳೆದ22ವ್ರಷಗಳಿಂದ ಸೇವೆಸಲ್ಲಿಸುತ್ತಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿ ಮತ್ತು ಹೊರ ದೇಶ ಕುವೈತ್, ಮಸ್ಕತ್, ಮತ್ತು ಬಹರೈನ್ತಮ್ಮ ಹಸ್ತಕೌಶಲ್ಯವನ್ನು ಪ್ರದರ್ಶಿದ್ದಾರೆ. ಇವರ ಅಪೂರ್ವ ಸಾಧನೆಗೆ “ಯಕ್ಷಗಾನ ಬ್ರಹ್ಮ” ಚೆಂಡೆಯ ಗಂಡುಗಲಿ” “ನಾದ ಮೃದಂಗ” ಬಿರುದು, ಸನ್ಮಾನ, ಗೌರವ ಪಡೆದಿರುವ ಇವರನ್ನು ಯು.ಎ.ಇ.ಯಲ್ಲಿ ನೆಲೆಸಿರುವ ಯಕ್ಷಗಾನ ಅಭಿಮಾನಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಯಕ್ಷಗಾನ ಕಲಾವಿದರು / ಮುಖವರ್ಣಿಕೆ ಕಲಾಕಾರರು ಶ್ರೀಜನಾರ್ಧನ ಎನ್. ರವರಿಗೆ ಸನ್ಮಾನ
ಕರ್ನಾಟಕ ಕಡಲತೀರದ ಕಾಸರಗೋಡಿನ ಶ್ರೀಬಟ್ಯಪ್ಪ ಪೂಜಾರಿ ಮತ್ತು ಶ್ರೀಮತಿ ಪದ್ಮಾವತಿ ದಂಪತಿಗಳ ಮಗ್ನಾಗಿ ಜನಿಸಿ ಹುಟ್ಟೂರಿನ ಶಿಕ್ಷಣ ಮುಗಿಸಿ ಮೈಸೂರಿ ವಿಶ್ವವಿದ್ಯಾಲಯದಲ್ಲಿ ಶಿಖ್ಷನ್ಪಡೆದಿದ್ದಾರೆ. ಶ್ರೀದಿವಾಣ ಶಿವಶಂಕರ್ಭಟ್ಹಾಗೂ ಉಪ್ಪಳ ಕೃಷ್ಣಮಾಸ್ಟರ್ರಿಂದ ನಾಟ್ಯಭ್ಯಾಸ ಪಡೆದವರು.

ಮಲ್ಲ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ 17ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಇವರು ಪುಂಡುವೇಷ್, ಕಿರೀಟ ವೇಷಧಾರಿಯಾಗಿ ಯಕ್ಷಗಾನಕ್ಕೆ ಬೇಕಾಗುವ ಮರದ ಕಿರೀಟ, ಅನೇಕ ಶೈಲಿಯ ಕಿರೀಟಗಳನ್ನು ಮೂಡಿಸುವ ಕಲಾಕಾರರಾಗಿರುವ ಇವರು ಮುಖವರ್ಣಿಕೆಯಲ್ಲಿ ಆಕರ್ಷಕ ವರ್ಣ ವಿನ್ಯಾಸ ಪಾತ್ರಧಾರಿಗಳ ಅಂದ ಚೆಂದವನ್ನು ಹೆಚ್ಚಿಸಿ ಪ್ರಸಂಗದ ನೈಜ್ಯತೆಗೆ ಹಎಚ್ಚಿನ ಮೆರಗು ನೀಡುವ ಈಅಪ್ರತಿಮ ಕಲಾವಿದರನ್ನು ಸಮಸ್ಥ ಅಭಿಮಾನಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಊರಿನಿಂದ ಅತಿಥಿಯಾಗಿ ಆಗಮಿಸಿ ಯಕ್ಷಗಾನ ಕಲಾವಿದರ ವೇಷಭೂಷಣ ಪ್ರಸಾದನ ಜವಬ್ಧಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟ ಗಂಗಾಧರ್ಡಿ. ಶೆಟ್ಟಿಗಾರ್ಕಿನ್ನಿಗೋಳಿ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಸನ್ಮಾನ ಪ್ರಕ್ರಿಯೇಯಲ್ಲಿ ಗೌರವ ಅತಿಥಿಗಳು ,ಪ್ರಾಯೋಜಕರು, ಯಕ್ಷಮಿತ್ರರ ಕಾರ್ಯಕಾರಿ ಸಮಿತಿಯವರು ಭಾಗವಹಿಸಿ ಸನ್ಮಾನ ಮಾಡಿ ಗೌರವಿಸಿದರು. ಎಲ್ಲಾ ಪ್ರಯೋಜಕರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಶ್ರೀಯುತರುಗಳಾದ ವಿಠಲ್ಶೆಟ್ಟಿಯವರು ಪ್ರಾರಂಭದಲ್ಲಿ ಸರ್ವರನ್ನು ಸ್ವಾಗತಿಸಿದರು ಡೊನಾಲ್ಡ್ಕೊರೆಯಾ ಕಾರ್ಯಕ್ರಮ ನಿರೂಪಣೆ ಮತ್ತು ಗಣೇಶ್ರೈಯವರು ಸನ್ಮಾನ ಪತ್ರಗಳನ್ನು ವಾಚಿಸಿದರು.


Spread the love