ದುಷ್ಕೃತ್ಯಕ್ಕೆ ಸಂಚು ಆರೋಪ ತಲವಾರು ಸಹಿತ ನಾಲ್ವರ ಬಂಧನ

Spread the love

ದುಷ್ಕೃತ್ಯಕ್ಕೆ ಸಂಚು ಆರೋಪ ತಲವಾರು ಸಹಿತ ನಾಲ್ವರ ಬಂಧನ

ಸುರತ್ಕಲ್ : ಸುರತ್ಕಲ್ ಪೋಲಿಸ್ ಠಾಣೆ ವ್ಯಾಪ್ತಿಯ ಕೃಷ್ಣಾಪುರ 4 ನೇ ಬ್ಲಾಕಿನ ಮನೆಯೊಂದರಲ್ಲಿ ದುಷ್ಕತ್ಯ ಎಸಗಲು ತಲವಾರನ್ನು ಬಚ್ಚಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪಣಂಬೂರು ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದ ರೌಡಿ ನಿಗ್ರಹ ದಳದ ಪೋಲಿಸರ ಸೋಮವಾರ ದಾಳಿ ನಡೆಸಿ ಆರೋಪಿ ಸಂದೀಪ್ ಸಹಿತ ನಾಲ್ಕು ಮಂದಿಯನ್ನು ಬಂಧಿಸಿ 3 ತಲವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಪ್ರಮುಖ ಆರೋಪಿ ಸಂದೀಪ್ ನೀಡಿದ ಮಾಹಿತಿಯಂತೆ ಪೋಲಿಸರು ಆತನ ಸಹಚರರಾದ ಉಡುಪಿ ಹಾರಾಡಿ ನಿವಾಸಿ ಆಕಾಶ್, ಅಡ್ಯಾರ್ ಸಮೀಪದ ಫರಂಗೀಪೇಟೆ ನಿವಾಸಿ ಚರಣ್ ರಾಜ್ ಯಾನೆ ಚನ್ನು, ಧರ್ಮಸ್ಥಳ ಕೊಲ್ಪೆ ನಿವಾಸಿ ರಕ್ಷಿತ್ ಎಂಬವರನ್ನು ಕುತ್ತೆತ್ತೂರಿನಲ್ಲಿ ಅವರಿಂದ 2 ನಾಡ ಪಿಸ್ತೂಲ್ ಹಾಗೂ 10 ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸುರತ್ಕಲ್ ಕೇಶವ ಶೆಟ್ಟಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರವ ಪ್ರಸ್ತುತ ಬೆಳಗಾವಿ ಜೈಲಿನಲ್ಲಿರುವ ಸತೀಶ್ ಯಾನೆ ಸಚ್ಚು ಎಂಬಾತನ ಸೂಚನೆಯಂತೆ ಆಕಾಶ್ ಮತ್ತು ಪ್ರಶಾಂತ್ ಎಂಬವರು ತಮ್ಮಲಿದ್ದ 2 ನಾಡ ಪಿಸ್ತೂಲುಗಳನ್ನು ಧರ್ಮಸ್ಥಳದ ಕೊಲ್ಪೆ ನಿವಾಸಿ ರಕ್ಷಿತ್ ಎಂಬಾತನಿಗೆ ಹಸ್ತಾಂತರಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೋಲಿಸರು ಧಾಳಿ ನಡೆಸಿ ರಕ್ಷಿತ್ ಮನೆಯಿಂದ ನಾಡ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಈ ಹಿಂದೆ ಕೂಡಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸಂದೀಪ್ ವಿರುದ್ದ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಚರಣ್ ರಾಜ್ ವಿರುದ್ದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣ ಹಾಗೂ ರಕ್ಷಿತ್ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಗಳ ಸಹಿತ ವಶಪಡಿಸಿಕೊಂಡ ತಲವಾರುಗಳನ್ನು ಮುಂದಿನ ತನಿಖೆಗಾಗಿ ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.


Spread the love