ದೆಹಲಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ, ದೆಹಲಿ ಕರ್ನಾಟಕ ಸಂಘ ಮತ್ತು ಕೊಡವ ಸಮಾಜ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ 28 ಫೆಬ್ರವರಿ 2016ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ‘ಕೊಡವ ಸಾಹಿತ್ಯ-ಸಂಸ್ಕøತಿಯ ಮೆರುಗು’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮವನ್ನು ದೆಹಲಿ ಪೋಲಿಸ್‍ನಲ್ಲಿ ಡಿ.ಸಿ.ಪಿ.ಯಾಗಿ ಸೇವೆ ಸಲ್ಲಿಸುತ್ತಿರುವ ಬಿ.ಎಲ್. ಸುರೇಶ್‍ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿಯ ರಿಜಿಸ್ಟ್ರಾರ್, ಉಮರಬ್ಬ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿದ್ದಾಟಂಡಎಸ್. ತಮ್ಮಯ್ಯ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್. ಜಯಚಂದ್ರ, ನ್ಯಾಯಾಧೀಶರು, ಕರ್‍ಕರ್ ಡೂಮ ಕೋರ್ಟ್, ನವದೆಹಲಿ, ಪಾಲಚಂಡ ಬ್ರಿಜೇಶ್ ಕಾಳಪ್ಪ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಕರ್ನಾಟಕ ಸರ್ಕಾರ, ಶಾಂತೆಯಡ ವೀಣಾ ಅಚ್ಚಯ್ಯ, ಅಧ್ಯಕ್ಷರು, ಕರ್ನಾಟಕ ರಾಜ್ಯಕರಕುಶಲ ಅಭಿವೃದ್ಧಿ ನಿಗಮ, ಬೆಂಗಳೂರು, ಎಸ್. ಐ. ಭಾವೀಕಟ್ಟಿ, ಉಪನಿರ್ದೇಶಕರು, ರಂಗಾಯಣ ಮೈಸೂರು, ಪ್ರಭಾರ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಡಗು ಜಿಲ್ಲೆ, ವಸಂತ ಶೆಟ್ಟಿ ಬೆಳ್ಳಾರೆ, ಅಧ್ಯಕ್ಷರು, ದೆಹಲಿ ಕರ್ನಾಟಕ ಸಂಘ, ನವದೆಹಲಿ, ಮಾಚಿಮಂಡ ಕಾರ್ಯಪ್ಪ, ಅಧ್ಯಕ್ಷರು, ಕೊಡವ ಸಮಾಜ, ನವದೆಹಲಿ ಇವರುಗಳು ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ಬೆಳ್ಳಿಯಪ್ಪ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ದೆಹಲಿ ಕರ್ನಾಟಕ ಸಂಘದ ಸಾಂಸ್ಕøತಿಕ ಉಪಸಮಿತಿಯ ಅಧ್ಯಕ್ಷರಾದ ಸಖಾರಾಮ ಉಪ್ಪೂರು ವಂದನಾರ್ಪಣೆ ಸಲ್ಲಿಸಿದರು.