ದೇವಸ್ಠಾನದ ಮಹೋತ್ಸವದಲ್ಲಿ ಸರ ಸುಲಿಗೆ ಆರೋಪಿಗಳಿಬ್ಬರ ಬಂಧನ

Spread the love

ದೇವಸ್ಠಾನದ ಮಹೋತ್ಸವದಲ್ಲಿ ಸರ ಸುಲಿಗೆ ಆರೋಪಿಗಳಿಬ್ಬರ ಬಂಧನ

ಮಂಗಳೂರು: ದೇವಸ್ಠಾನದ ವರ್ಷಾವಧಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಾದಿಗಳ ಸರ ಕಳವು ಆರೋಪಿದಲ್ಲಿ ಇಬ್ಬರು ಮಹಿಳೆಯರನ್ನು ಮುಲ್ಕಿ ಠಾಣಾ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಡಿಂಡಿಗಲ್ ನಿವಾಸಿಗಳಾದ ಮುತ್ತುಮಾರಿ (38) ಮತ್ತು ನಂದಿನಿ (20) ಎಂದು ಗುರುತಿಸಲಾಗಿದೆ.

chain-snacting-temple

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಾದ ಪಾವಂಜೆ ಜ್ಞಾನ ಶಕ್ತಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಎಂಬಲ್ಲಿ ಡಿಸೆಂಬರ್ 5 ರಂದು ನಡೆದ ವರ್ಷಾವದಿ ಚಂಪಾ ಷಷ್ಟಿ ಮಹೋತ್ಸವದಲ್ಲಿ ಭಾಗವಹಿಸಿದ ಭಕ್ತಾಧಿಗಳ ಚಿನ್ನದ ಸರಗಳನ್ನು ಸುಲಿಗೆ ಮಾಡಿದ ಆರೋಪಿತರುಗಳನ್ನು ಮುಲ್ಕಿ ಪೊಲೀಸ್ ಠಾಣಾ ಪೊಲೀಸರು ಪತ್ತೆಹಚ್ಚಿರುತ್ತಾರೆ. ಆರೋಪಿಗಳಿಂದ ಪಾವಂಜೆ ದೇವಸ್ಥಾನದಲ್ಲಿ ಸುಲಿಗೆ ಮಾಡಿದ ನಾಲ್ಕು ಪ್ರಕರಣಗಳನ್ನು ಪತ್ತೆ ಹಚ್ಚಿ ಸುಲಿಗೆ ಮಾಡಿದ ನಾಲ್ಕು ಚಿನ್ನದ ಸರಗಳನ್ನು (ಸುಮಾರು 98 ಗ್ರಾಂ, ಸುಮಾರು ರೂ.2,50,000/- ಮೌಲ್ಯದ) ವಶಪಡಿಸಿಕೊಂಡಿರುತ್ತಾರೆ.

ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅನಂತಪಧ್ಮನಾಭ, ಪಿ.ಎಸ್.ಐ ಚಂದ್ರಶೇಖರಯ್ಯ, ಸಾಂತಪ್ಪ. ಆರ್, ಪ್ರೋಬೆಷನರಿ ಪಿ.ಎಸ್.ಐ ಮಾರುತಿ ಮತ್ತು ಸಿಬ್ಬಂದಿಗಳಾದ ಉಮೇಶ, ಬಸವರಾಜ, ರಾಜೇಶ್, ಅಣ್ಣಪ್ಪ, ಜೋಯ್ಸ್ ಡಿ’ಸೋಜ, ಗೀತಾ.ಸಾಲ್ಯಾನ್, ಅಕ್ಷಯ, ಕು| ವಿಜಯ ಲಮಾಣಿ ಮತ್ತು ಸುಪ್ರಿತಾರವರು ಪತ್ತೆ ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love