ದೇಶ ಭಕ್ತಿಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ: ನಿರ್ಮಲಾ ಬ್ರಹ್ಮಾವರ, ಶ್ರೀನಿಕೇತನ ಶಾಲೆ ಮಟಪಾಡಿ ಪ್ರಥಮ
ಬ್ರಹ್ಮಾವರ: ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಇವರ ವತಿಯಿಂದ ಆಯೋಜಿಸಿದ್ದ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಆಹ್ವಾನಿತ ಸ್ಥಳೀಯ ಶಾಲಾ ವಿದ್ಯಾರ್ಥಿಗಳ ದೇಶ ಭಕ್ತಿಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಿರ್ಮಲಾ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ ಹಾಗೂ ಹೈಸ್ಕೂಲ್ ವಿಭಾಗದಲ್ಲಿ ಶ್ರೀನಿಕೇತನ ಪ್ರೌಢ ಶಾಲೆ ಮಟಪಾಡಿ ಪ್ರಥಮ ಸ್ಥಾನ ಗಳಿಸಿತು.
ನಿರ್ಮಲಾ ಹಿರಿಯ ಪ್ರಾಥಮಿಕ ಶಾಲೆ – ಪ್ರಥಮ
ಶ್ರೀನಿಕೇತನ ಪ್ರೌಢ ಶಾಲೆ ಮಟಪಾಡಿ – ಪ್ರಥಮ
ವಿಕೆ ಆರ್ ಆಚಾರ್ಯ ಮೆಮೋರಿಯಲ್ ಪ್ರೌಢಶಾಲೆ ಕುಂಜಾಲು – ದ್ವೀತಿಯ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ – ದ್ವೀತಿಯ
ಗೌರವ ಸನ್ಮಾನ -ಹೆಪ್ಲಾಥಾನ್ ನಲ್ಲಿ ಚಿನ್ನದ ಪದಕ ವಿಜೇತೆ ರಕ್ಷಿತಾ ಗಾಣಿಗ
ಪ್ರಾಥಮಿಕ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ವಿಕೆ ಆರ್ ಆಚಾರ್ಯ ಮೆಮೋರಿಯಲ್ ಪ್ರೌಢಶಾಲೆ ಕುಂಜಾಲು ಕ್ರಮವಾಗಿ ದ್ವೀತಿಯ ಸ್ಥಾನ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಬಿ ಎಸ್ ಎನ್ ಎಲ್ ಇದರ ನಿವೃತ್ತ ಮಹಾಪ್ರಬಂಧಕರಾದ ಎಮ್ ಚಂದ್ರಶೇಖರ ಕಲ್ಕೂರ ಅವರಿಗೆ ಗೌರವ ಸನ್ಮಾನ ನೀಡಲಾಯಿತು.
ಗೌರವ ಸನ್ಮಾನ – ಯೂತ್ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಶರೋನ್ ಸಿಕ್ವೇರಾ ಮತ್ತು ಸುಬ್ರಹ್ಮಣ್ಯ ಆಚಾರ್ಯ
ಇದೇವೇಳೆ ಕರ್ನಾಟಕ ರಾಜ್ಯ ಪುರುಷ ಮತ್ತು ಮಹಿಳೆಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮಹಿಳಾ ಹೆಪ್ಲಾಥಾನ್ ನಲ್ಲಿ ಚಿನ್ನದ ಪದಕ ವಿಜೇತೆ ರಕ್ಷಿತಾ ಗಾಣಿಗ, ಯೂತ್ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಶರೋನ್ ಸಿಕ್ವೇರಾ ಮತ್ತು ಸುಬ್ರಹ್ಮಣ್ಯ ಆಚಾರ್ಯ ಇವರುಗಳನ್ನು ಗುರುತಿಸಲಾಯಿತು.
ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ತಂಡ
ವೇದಿಕೆಯಲ್ಲಿ ನೀಲಾವರ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಶ್ವನಾಥ್ ಶೆಟ್ಟಿ ಮಟಪಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಟಪಾಡಿ ಇದರ ಅಧ್ಯಕ್ಷರಾದ ಎಮ್ ಚಂದ್ರಶೇಖರ ನಾಯರಿ, ಹಂದಾಡಿ ಗ್ರಾಮ ಪಂಚಾಯತ್ ಉಪಾಧ್ಯಾಕ್ಷರಾದ ಅಶೋಕ್ ಪೂಜಾರಿ, ಮೂರ್ತೆದಾರರ ಸೇವಾಸಹಕಾರಿ ಸಂಘ ಬ್ರಹ್ಮಾವರ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಎನ್ ಕರ್ಕೇರಾ, ರೋಟರಿ ರಾಯಲ್ಸ್ ಬ್ರಹ್ಮಾವರ ನಿಕಟಪೂರ್ವ ಅಧ್ಯಕ್ಷರಾದ ಅಭಿರಾಮ್ ನಾಯಕ್, ಯೂತ್ ಕ್ಲಬ್ ಗೌರವ ಸಲಹೆಗಾರರು ಮತ್ತು ಸರ್ವೆಯರ್ ಉಡುಪಿ ವಿಜಯ ನಾಯಕ್, ಚಪ್ಟೇಗಾರ್ ಯುವ ವೇದಿಕೆ ಅಧ್ಯಕ್ಷರಾದ ರವೀಂದ್ರ ನಾಯಕ್ ಉಪಸ್ಥೀತರಿದ್ದರು.
ಯೂತ್ ಕ್ಲಬ್ ಅಧ್ಯಕ್ಷರಾದ ಶರತ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶರೋನ್ ಸಿಕ್ವೇರಾ ಮತ್ತು ವಿಜಯ ನಾಯಕ್ ಸನ್ಮಾನಿತರ ಪರಿಚಯ ಮಾಡಿದರು. ಸುಬ್ರಹ್ಮಣ್ಯ ಆಚಾರ್ಯ ಧನ್ಯವಾದವಿತ್ತರು. ಪತ್ರಕರ್ತ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.