ದೇಶಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ನೆಹರೂ ಕೊಡುಗೆ ಸ್ಮರಣೀಯ: ಗಫೂರ್

Spread the love

ದೇಶಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ನೆಹರೂ ಕೊಡುಗೆ ಸ್ಮರಣೀಯ: ಗಫೂರ್

ಉಡುಪಿ: ಆಧುನಿಕ ಭಾರತದ ಶಿಲ್ಪಿ, ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂರವರ 130ನೇ ಹುಟ್ಟುಹಬ್ಬವನ್ನು ಮಾಜಿ ಸಚಿವರಾದ  ವಿನಯ ಕುಮಾರ್ ಸೊರಕೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಶ್ರೀ ಎಂ.ಎ. ಗಫೂರ್ರವರು ಮಾತನಾಡುತ್ತಾ 17 ವರ್ಷಗಳ ಸುದೀರ್ಘ ಅವಧಿಗೆ ದೇಶದ ನೇತೃತ್ವವನ್ನು ವಹಿಸಿ ದೇಶಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ನೆಹರೂರವರು ಮಹಾತ್ಮಾ ಗಾಂಧಿಯವರ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸುವ ಮೂಲಕ ದೇಶಕ್ಕೆ ಕೊಟ್ಟ ತ್ಯಾಗ, ಬಲಿದಾನ, ಶ್ರಮದಿಂದ ದೇಶ ಇಂದು ಪ್ರಜಾತಂತ್ರ ವ್ಯವಸ್ಥೆಯೊಂದಿಗೆ ಬಲಿಷ್ಠವಾಗಿದೆ. ಸ್ವಾತಂತ್ರ್ಯ ದೊರಕುವಾಗ ದೇಶದ ಜನತೆಗೆ ಹಸಿವಿನೊಂದಿಗೆ ಯಾವುದೇ ಸೂರು ಇರಲಿಲ್ಲ. ಕೈಗಾರಿಕೆಗಳು, ಬಂದರುಗಳು, ಸಂಚಾರ ವ್ಯವಸ್ಥೆಗಳು ಇರಲಿಲ್ಲ. ಆದರೆ ನೆಹರೂರವರು ವಿಜ್ಞಾನಿಗಳು ಹಾಗೂ ಕೈಗಾರಿಕೋದ್ಯಮಿಗಳ ಸಹಬಾಗಿತ್ವದೊಂದಿಗೆ ದೇಶದಲ್ಲಿ ಕೈಗಾರಿಕೆಗಳು ಪ್ರಾರಂಭಿಸಲು ಕಾರಣೀಭೂತರಾದರು. ಸಾರಿಗೆ ವ್ಯಸ್ಥೆ, ಆರೋಗ್ಯ ಕೇಂದ್ರ ಮತ್ತು ಶಿಕ್ಷಣ ಕ್ರಾಂತಿ, ವಿಜ್ಞಾನ, ತಂತ್ರಜ್ಞಾನಗಳೊಂದಿಗೆ ಪಂಚವಾರ್ಷಿಕ ಯೋಜನೆ ಜಾರಿಗೆ ತಂದು ರಾಷ್ಟ್ರವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದರು.

ಜಿಲ್ಲಾ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ನೆಹರೂರವರ ಕೊಡುಗೆಯನ್ನು ನೆನಪಿಸುವುದರೊಂದಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿಯವರು ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ಮಾಜಿ ಶಾಸಕರಾದ ಶ್ರೀ ಯು.ಆರ್.ಸಭಾಪತಿ, ಎಐಸಿಸಿ ಸದಸ್ಯರಾದ ಪಿ.ವಿ. ಮೋಹನ್, ಮಾಜಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹಾಗೂ ಪಕ್ಷದ ಮುಖಂಡರಾದ ಸರಳಾ ಕಾಂಚನ್, ದಿನೇಶ್ ಪುತ್ರನ್, ಭಾಸ್ಕರ್ ರಾವ್ ಕಿದಿಯೂರು, ನೀರೆಕೃಷ್ಣ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ, ಹೆಚ್.ಹರಿಪ್ರಸಾದ್ ಶೆಟ್ಟಿ ಮೈರ್ಮಾಡಿ ಸುಧಾಕರ ಶೆಟ್ಟಿ, ಹರೀಶ್ ಕಿಣಿ, ಶಬ್ಬೀರ್ ಅಹ್ಮದ್, ನಾಗೇಶ್ ಉದ್ಯಾವರ, ಮಹಾಬಲ ಕುಂದರ್, ಅಣ್ಣಯ್ಯ ಶೇರಿಗಾರ್, ಇಸ್ಮಾಯಿಲ್ ಆತ್ರಾಡಿ, ಮಂಜುನಾಥ ಪೂಜಾರಿ, ಸುರೇಶ್ ನಾಯ್ಕ್, ಯತೀಶ್ ಕರ್ಕೇರ, ಶಶಿಧರ ಶೆಟ್ಟಿ ಎಲ್ಲೂರು, ಸುಧಾಕರ ಕೋಟ್ಯಾನ್, ಮೀನಾಕ್ಷಿ ಮಾಧವ ಬನ್ನಂಜೆ, ಡಾ. ಸುನಿತಾ ಶೆಟ್ಟಿ, ಕಿಶೋರ್ ಕುಮಾರ್, ವಿಜಯ ಪೂಜಾರಿ, ಚಂದ್ರಿಕಾ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ನವೀನ್ಚಂದ್ರ ಸುವರ್ಣ, ಶೇಖರ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.


Spread the love