ದೇಶದ ಅಭಿವೃದ್ಧಿ ಗೆ ಪ್ರಧಾನಿ ಮೋದಿಯ ಕೈಗಳನ್ನು ಬಲಪಡಿಸಬೇಕು – ಎಸ್.ಎಂ.ಕೃಷ್ಣ

Spread the love

ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ ಯಲ್ಲಿ ಮಾತ್ರ ನಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಬೇಕು. ಅದರ ನಂತರ ಜನಾ ದೇಶ ಸಿಕ್ಕಿದವರಿಗೆ ದೇಶದ ಪರಿಪೂರ್ಣ ಅಧಿಕಾರ ನಡೆಸಲು ಮುಕ್ತ ಅವಕಾಶ ಕಲ್ಪಿಸಬೇಕು. ಅದುವೇ ಪ್ರಜಾಪ್ರಭುತ್ವದ ನಿಜವಾದ ತಿರುಳು ಆಗಿದೆ. ಆದುದರಿಂದ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯ ಕೈಗಳನ್ನು ನಾವು ಬಲಪಡಿಸುವ ಕಾರ್ಯ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.

SM-krishna1 ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಯರ್ಾಯ ಪೇಜಾವರ ಮಠದ ವತಿಯಿಂದ ನೀಡಲಾದ ರಾಷ್ಟ್ರರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಇಂದು ದೇಶದಲ್ಲಿ ಮೌಲ್ಯಗಳು ಕುಸಿದು ಬೀಳುತ್ತಿರುವ ಸನ್ನಿವೇಶ ಉಂಟಾಗಿದೆ. ಒಂದು ಕಡೆ ಕುಸಿಯುತ್ತಿರುವ ಮೌಲ್ಯಗಳನ್ನು ಮೇಲಕ್ಕೇತ್ತುವ ಪ್ರಯತ್ನಗಳು ನಡೆದರೆ ಇನ್ನೊಂದೆಡೆ ಅದರ ವಿರುದ್ಧ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದರು.

SM-krishna2

ಇಂದು ದೇಶದ ರಾಜಕಾರಣದಲ್ಲಿ ಹಣಕ್ಕೆ ಪ್ರಾತಿನಿಧ್ಯತೆ ನೀಡಲಾಗುತ್ತಿದೆ. ನಮ್ಮ ಚುನಾವಣೆಯಲ್ಲಿ ಸಾಕಷ್ಟು ಸುಧಾರಣೆ ಗಳನ್ನು ತಂದು ಹಣದ ಪ್ರಾಮುಖ್ಯತೆ ಕಡಿಮೆ ಮಾಡುವ ಮಹತ್ವದ ಕಾರ್ಯ ವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಬೇಕಾಗಿದೆ. ಈ ಬಗ್ಗೆ ನಿಷ್ಠುರ ನಿಲುವು ತೆಗೆದುಕೊಂಡಲ್ಲಿ ಅವರನ್ನು ಇಡೀ ದೇಶವೇ ಹಾಡಿ ಹೊಗಳಲಿದೆ. ಅಂತಹ ಶಕ್ತಿ ಪ್ರಧಾನಿ ಮೋದಿಗೆ ನೀಡಬೇಕಾದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

SM-krishna

ಪ್ರಧಾನಿ ನರೇಂದ್ರ ಮೋದಿಯ ವಿದೇಶಿ ಪ್ರವಾಸದಿಂದಾಗಿ ಇಂದು ಎಲ್ಲ ಕಡೆ ನಮ್ಮ ದೇಶದ ಪರಂಪರೆಯ ಬಗ್ಗೆ ಹೊಗಳಿಕೆಯ ಮಾತುಗಳು ಕೇಳಿ ಬರುತ್ತಿವೆ. ಅಮೆರಿಕಾ, ಸೋವಿಯತ್ ರಷ್ಯಾ ಮತ್ತು ನಮ್ಮ ದೇಶದ ನಡು ವಿನ ಸಂಬಂಧವನ್ನು ಮೋದಿ ಗಟ್ಟಿ ಮಾಡಿದ್ದಾರೆ. ಚೀನಾ ಇಂದು ನಮ್ಮ ಮುಂದೆ ಇರುವ ದೊಡ್ಡ ಪ್ರಶ್ನಾರ್ಥಕ ಚಿಹ್ನೆ. ಆ ದೇಶದ ನಡುವಿನ ಸಂಬಂಧ ವನ್ನು ವೃದ್ಧಿಸುವ ಪ್ರಯತ್ನವನ್ನು ಮೋದಿ ಮುಂದುವರೆಸುತ್ತಿದ್ದಾರೆ ಎಂದು ಅವರು ಮೋದಿಯ ಗುಣಗಾನ ಮಾಡಿದರು.

ಜಾತಿ ನಮ್ಮ ದೇಶದ ದೊಡ್ಡ ಶತ್ರು. ನಾವು ಜಾತಿಯ ಅಂಧಾಭಿಮಾನಿಗಳಾಗಿರುವುದರಿಂದ ಇಂದು ನಮ್ಮ ದೇಶ ಬಡವಾಗಿದೆ. ಜಾತಿಯ ಗುಲಾಮ ರಾಗದಿದ್ದರೆ ಅದರ ಮೇಲೆ ನಿಯಂತ್ರಣ ಹೊಂದಲು ಸಾಧ್ಯ. ಇದರಿಂದ ಸಮಾಜ ಪರಿವರ್ತನೆಯಾಗುತ್ತದೆ. ಜಾತಿಯ ವಿವಾದವನ್ನು ನಾಗರಿಕ ಚೌಕಟ್ಟಿ ನಲ್ಲಿ ಪರಿಹಾರಿಸುವ ಕಾರ್ಯ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದರು.


Spread the love
3 Comments
Inline Feedbacks
View all comments
Suresh Bhat
8 years ago

ಇತ್ತೀಚೆಗೆ ಉಡುಪಿ ಮಠದಲ್ಲಿ ಮೀರ್ ಸಾದಿಕ್‍ರನ್ನು ಗುರುತಿಸಿ ಇಂತಹ ಕೆಲಸಕ್ಕೆ ಬಾರದ ಪ್ರಶಸ್ತಿಗಳನ್ನು ದಯಪಾಲಿಸುವ ಘನ ಕಾರ್ಯ ನಡೆಯುತ್ತಿದೆ. ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮುಖರ್ಜಿಯವರೂ ಇಂತಹದೇ ಇನ್ನೊಂದು ಪ್ರಶಸ್ತಿಗೆ ಭಾಜನರಾಗಿ, ನಂತರ ಭಾವುಕರಾಗಿ ರಾಮ ಮಂದಿರ ನಿರ್ಮಾಣಕ್ಕೆ ಕರೆಕೊಟ್ಟಿರುವುದನ್ನು ಸ್ಮರಿಸಬಹುದು.

Original R.Pai
8 years ago

Wow!!! SM Krishna praising Sri Modiji? Is Congress in Karnaatka doomed?

NN
8 years ago

Flirting for the BJP ticket or is he an independent thinker like US politicians.