ದೇಶದಲ್ಲಿ ನಿರುದ್ಯೋಗ ಇಲ್ಲವೇ ಇಲ್ಲ ಎಂದ ಕೇಂದ್ರ ಸಚಿವ ಅರುಣ ಜೇಟ್ಲಿಯವರ ಹೇಳಿಕೆ ಖಂಡನೀಯ: ಡಿವೈಎಫ್ಐ
ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ಗೆ ಸರಕಾರ ನೀರಿಕ್ಷಿಸದ ರೀತಿಯಲ್ಲಿ ದೇಶವ್ಯಾಪಿ ತೀವ್ರತೆರನಾದ ವಿರೋಧ ಹಾಗೂ ಪ್ರತಿರೋಧ ತೋರುತ್ತಿರುವ ಜನತೆಗೆ ಸತ್ಯವನ್ನು ಒಪ್ಪಿಕೊಳ್ಳುವ ಬದಲು ಕೇಂದ್ರ ಸಚಿವರಾದ ಅರುಣ ಜೇಟ್ಲಿಯವರು ತಮ್ಮ ಸರಕಾರದ ಅಸಮರ್ಥ ಆಡಳಿತವನ್ನು ನಿರುದ್ಯೋಗವೇ ಇಲ್ಲ ಎಂದು ನಾಚಿಕೆಯಿಲ್ಲದೇ ಸಮರ್ಥನೆ ನೀಡುತ್ತಿರುವುದು ಜನತೆಗೆ ಮಾಡುವ ಮಹಾದ್ರೋಹವಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಕಾರ್ಷಿಕ ಬಿಕ್ಕಟ್ಟಿನ ಪರಿಹಾರಕ್ಕಾಗಿ 170ಕ್ಕೂ ಹೆಚ್ಚು ರೈತ ಸಂಘಟನೆಗಳು ಸೇರಿ ಮಾಡಿದ ಕಿಸಾನ್ ಸಂಘರ್ಷಯಾತ್ರೆ, ತಮಿಳುನಾಡು ರೈತರು ತಲೆಬುರುಡೆ ಇಟ್ಟು ನಡೆಸಿದ ಪ್ರತಿಭಟನೆ, ಕಾರ್ಮಿಕರು ಪಾರ್ಲಿಮೆಂಟ್ ಚಲೋ, ದಲಿತ, ಮಹಿಳಾ ಸಮುದಾಯ ಹಾಗೂ ನೌಕರರ ವರ್ಗದ ಹೋರಾಟ, ಉದ್ಯೋಗಕ್ಕೆ ಒತ್ತಾಯಿಸಿ ದೇಶವ್ಯಾಪಿ ಯುವಜನರು ಡಿವೈಎಫ್ಐ ನಿಂದ ಕಳೆದ ವರ್ಷ ನವಂಬರ್ ನಲ್ಲಿ #WhereIsMyJob ಘೋಷಣೆಯಡಿ ನಡೆಸಿದ ಹೋರಾಟ, ನಿವೃತ್ತ ಸೈನಿಕರು ಪಿಂಚಣಿ ಗಾಗಿ ನಡೆಸಿದ ಪ್ರತಿಭಟನೆ ಇನ್ನೂ ಹತ್ತಾರು ಐತಿಹಾಸಿಕ ಹೋರಾಟಗಳು ದೇಶದ ಆಡಳಿತ ಕೇಂದ್ರ ನವದೆಹಲಿಯಲ್ಲೆ ನಡೆದಿದ್ದರೂ, “ದೇಶಗಳಲ್ಲಿ ತಾರಾಜ್ಯಧಿಕಾರಕ್ಕೆ ಬಂದ ನಂತರ ಯಾವುದೇ ರಾಜಕೀಯ ಸಾಮಾಜಿಕ ಚಳುವಳಿಗಳೇ ನಡೆದಿಲ್ಲ”ವೆಂದು ಆಳುವ ಸರಕಾರವೇ ಈ ರೀತಿ ಹೇಳುತ್ತಿರುವುದು ತನ್ನ ಅಸಮರ್ಥತೆಯನ್ನು ಎತ್ತಿ ಹಿಡಿಯುತ್ತಿದೆಯಲ್ಲದೇ ತಾವು ಆಡಳಿತ ನಡೆಸಲು ಅಯೋಗ್ಯರೆಂದು ಜೇಟ್ಲಿ ಹೇಳಿಕೊಂಡಿದ್ದಾರೆ.
ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರದ ಇತ್ತಿಚೇಗೆ ನೇಮಕಾತಿ ಸಂದರ್ಭಗಳಲ್ಲಿ ಕೋಟಿಗಟ್ಟಲೇ ಯುವಜನರು ಅರ್ಜಿ ಹಾಕಿದ್ದು ನಿರುದ್ಯೋಗದ ಕರಾಳ ವಾಸ್ತವವನ್ನು ಕಣ್ಣಿಗೆ ರಾಚುವಂತೆ ತೋರುತ್ತಿದೆ.
೧. ಭಾರತೀಯ ರೇಲ್ವೆ ಇಲಾಖೆಯ ನೇಮಕಾತಿ ಮಂಡಳಿಯ 62,9067 ಗ್ಯಾಂಗ್ ಮನ್, ಹೆಲ್ಪರ್,ಮೆಕ್ಯಾನಿಕಲ್, ಇಲೆಕ್ಟ್ರಿಷಿಯನ್ ಇತ್ಯಾದಿ ಹುದ್ದೆಗಳಿಗೆ 1 ಕೋಟಿ 90 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದಾರೆ. ಇದರಲ್ಲಿ ಬಹುತೇಕರು ಸ್ನಾತಕೋತ್ತರ ಪದವಿಧರರು.
೨. ಉತ್ತರಪ್ರದೇಶದಲ್ಲಿ ಕ್ಲಾಸ್ 4 400 ಹುದ್ದೆಗಳಿಗೆ 23ಲಕ್ಷ ಅರ್ಜಿ ಸಲ್ಲಿಸಿದ್ದರು ಅದರಲ್ಲಿ 50ಸಾವಿರ ಪದವೀಧರರು.
೩. ಪಶ್ಚಿಮ ಬಂಗಾಳದಲ್ಲಿ ಕ್ಲಾಸ್4 ನ 6000 ಹುದ್ದೆಗೆ 25ಲಕ್ಷ ಜನ ನೇಮಕಾತಿ ಪರೀಕ್ಷೆ ಬರೆದರು, ಇದರಲ್ಲಿ ಬಹುತೇಕರು ಪದವಿ&ಸ್ನಾತಕೋತ್ತರ ಪದವಿಧರರು.
೪. ಮುಂಬೈನಲ್ಲಿ ಪಿಯುಸಿ ವಿದ್ಯಾರ್ಹತೆಯ ಮೇಲೆ 1137ಪೋಲಿಸ್ ಪೇದೆ ಹುದ್ದೆಗೆ 543 ಜನ ಸ್ನಾತಕೋತ್ತರ ಪದವಿಧರು, 425ಜನ ಇಂಜಿನೀಯರಿಂಗ್ ಪದವಿದರೂ ಸೇರಿ 2ಲಕ್ಷ ಜನಅರ್ಜಿ ಸಲ್ಲಿಸಿದಾರೆ.
ಇಂತಹ ಹತ್ತು ಹಲವಾರು ವಾಸ್ತವಿಕ ಉದಾಹರಣೆಗೆಗಳನ್ನು ದಿನನಿತ್ಯ ನೋಡುತ್ತಿದ್ದೇವೆ.
ಇನ್ನು ಕೇಂದ್ರ ಸರಕಾರದ ಅಡಿಯಲ್ಲೇ ಇರುವ ಹಲವು ಇಲಾಖೆಗಳಲ್ಲಿ (ಎಲ್ಐಸಿ ಯಂತಹ ಬೃಹತ್ ಸಂಸ್ಥೆಗಳನ್ನು ಹೊರತುಪಡಿಸಿ) 25ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಇನ್ನೂ ಆಯ ರಾಜ್ಯಗಳಲ್ಲಿಯೂ ಕೂಡ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ.
ಕೋಟ್ಯಂತರ ಯುವಜನತೆ ಉದ್ಯೋಗವಿಲ್ಲದೇ ದಿನನಿತ್ಯ ಪರದಾಡುತ್ತಿದ್ದರೂ ಕೇಂದ್ರ ಸಚಿವರು ಜನತೆಯನ್ನು ದಿಕ್ಕುತಪ್ಪಿಸಲು ಈ ರೀತಿ ಸುಳ್ಳಿನ ದಾರಿಗೆ ಶರಣಾಗಿದ್ದಾರೆ.
ಕೇಂದ್ರ ಸರ್ಕಾರದ ಎಲ್ಲ ವಿಧದಲ್ಲೂ ಆಡಳಿತವೈಪಲ್ಯ ಹೊಂದಿದ್ದು ಅದನ್ನು ಮರೆಮಾಚಲು ಇಂತಹ ಆತ್ಮಹತ್ಯಾಕರಿ ನಡೆಗೆ ಮುಂದಾಗಿದ್ದು ದೇಶದ ಜನತೆ ಈ ಮೋಸವನ್ನು ಅರಿಯಬೇಕೆಂದು ಡಿವೈಎಫ್ಐ ಜನತೆಯಲ್ಲಿ ವಿನಂತಿಸುತ್ತದೆಯಲ್ಲದೇ, ದೇಶವನ್ನು ದಿವಾಳಿ ಅಂಚಿಗೆ ತಲುಪಿಸಿ, ಯುವಜನರಿಗೆ ಉದ್ಯೋಗ ಒದಗಿಸದೇ ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿರುವ ಈ ಸರಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೇ ಕೂಡಲೇ ಸಚಿವರು ದೇಶದ ಜನತೆಗೆ ನೀಡಿದ ಈ ಸುಳ್ಳು ಹೇಳಿಕೆಯನ್ನು ವಾಪಸ್ಸು ಪಡೆದು ಕ್ಷಮೆ ಯಾಚಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸುತ್ತದೆ.