ದೊಡ್ಡಣ ಗುಡ್ಡೆಯಲ್ಲಿ ವ್ಯಾಯಾಮ ಶಾಲೆಯಲ್ಲಿನ ಆಂಜನೇಯ ಭಾವಚಿತ್ರ ವಿರೂಪ ಯತ್ನ
ಉಡುಪಿ: ದುಷ್ಕರ್ಮಿಗಳ ತಂಡವೊಂದು ವ್ಯಾಯಾಮ ಶಾಲೆಯಲ್ಲಿ ಇರಿಸಿದ ಆಂಜನೇಯನ ಭಾವಚಿತ್ರವನ್ನು ವಿರೂಪಗೊಳಿಸಲು ಯತ್ನಿಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಉಡುಪಿ ಪೆರಂಪಳ್ಳಿ ಸಮೀಪದ ದೊಡ್ಡಣಗುಡ್ಡೆ ಬಳಿ ಗುರುವಾರ ರಾತ್ರಿ ನಡೆದಿದೆ.
ಇಲ್ಲಿನ ವ್ಯಾಯಾಮ ಶಾಲೆಯಲ್ಲಿ ಪ್ರತಿನಿತ್ಯ ಯುವಕರು ವ್ಯಾಯಾಮ ತರಬೇತಿ ನಡೆಸುತ್ತಿದ್ದು, ಗುರುವಾರ ಸಂಜೆ ವೇಳೆ ಕೆಲವೊಂದು ಅನ್ಯಕೋಮಿನ ಯುವಕರು ಒಳಪ್ರವೇಶಿಸಿ ಆಂಜನೇಯನ ಭಾವಚಿತ್ರಕ್ಕೆ ಟೋಪಿ ಹಾಕಿ ಸೆಲ್ಫಿ ತೆಗೆದುದಿದ್ದು ಇದನ್ನು ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. ಗುರುವಾರವಾದ ಹಿನ್ನೆಲೆಯಲ್ಲಿ ಇಲ್ಲಿ ಪೂಜೆ ನಡೆದಿತ್ತು. ದೊಡ್ಡಣಗುಡ್ಡೆ ಮಸೀದಿ ಹಿಂಬದಿ ಇರೋ ರಂಗಮಂದಿರ ಇದಾಗಿದ್ದು,ಪ್ರತಿನಿತ್ಯ ಇಲ್ಲಿ ಆಟೋಟಗಳು ,ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ. ಘಟನೆಯ ಮಾಹಿತಿ ಪಡೆದು ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ಸ್ವಲ್ಪ ಸಮಯ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತು.
ಮಾಹಿತಿ ಪಡೆದು ಪ್ರಕರಣದ ಸೂಕ್ಷ್ಮತೆ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಎಸ್ಪಿ ನಿಶಾ ಜೇಮ್ಸ್, ಡಿವೈಎಸ್ಪಿ ಜೈ ಶಂಕರ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಸೂಕ್ತ ಬಂದೋಬಸ್ತ್ ಗೆ ನಿರ್ದೇಶನ ನೀಡಿದರು.