ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ
ಉಡುಪಿ: ದೊಡ್ಡ ಶಾಲೆ ಉತ್ತಮವೋ ಸಣ್ಣ ಶಾಲೆ ಉತ್ತಮವೋ ಎಂಬ ದ್ಚಂಧ್ವ ಇದ್ದೇ ಇರುತ್ತೆ. ಸಣ್ಣ ಶಾಲೆಯಲ್ಲಿ ಪ್ರತೀ ಮಗುವಿನ ಮೇಲೆ ಸಿಗುವ ವೈಯುಕ್ತಿಕ ಗಮನ ದೊಡ್ಡ ಶಾಲೆಗಳಲ್ಲಿ ಸಿಗುವುದಿಲ್ಲ ಎಂದು ಡಯೆಟ್ ಉಪ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಹೇಳಿದರು.
ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘವನ್ನ ಉದ್ಘಾಟಿಸಿ ಮಾತನಾಡಿದ ಅವರು, ಒಂದನೇ ತರಗತಿ ಎನ್ನುವುದು ಮಗುವಿಗೆ ಜೀವನದಲ್ಲಿ ಒಂದೇ ಬಾರಿ ಸಿಗೋದು. ಅದು ಒಳ್ಳೆದಿರಬೇಕು ಅನ್ನೋದು ಎಲ್ಲಾ ಪೋಷಕರ ನಿರೀಕ್ಷೆ. ಕ್ವಾಲಿಟಿ ನಾವು ಖಾತರಿಪಡಿಸಬೇಕು. ಹಳೆ ವಿದ್ಯಾರ್ಥಿ ಸಂಘದಲ್ಲಿ ದುಡ್ಡು ಮುಖ್ಯ ಅಲ್ಲ ಸದಸ್ಯರ ಸಂಖ್ಯೆ ಮುಖ್ಯ. ಸಂಘಟನೆಯಲ್ಲಿ ದೊಡ್ಡ ಸಂಖ್ಯೆ ಸದಸ್ಯರಿದ್ದಾಗ ಅದೇ ದೊಡ್ಡ ಶಕ್ತಿ ಎಂದು ಹೇಳಿದರು
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪರೀಕ್ಷಿತ್ ಶೇಟ್, ಗೌರವಾಧ್ಯಕ್ಷ ರೋಹಿತ್ ಕರಂಬಳ್ಳಿ ಶಾಲೆಯ ಕೊಡುಗೈ ದಾನಿ ಕೆಎಂ ಉಡುಪ ಅವರ ಪತ್ನಿ ಶಾಂತ ಉಡುಪ, ಸುಬ್ರಮಣ್ಯ ಶೇರಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇತ್ತೀಚಗೆ ನಡೆದ ಹಳೆ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪರೀಕ್ಷಿತ್ ಶೇಟ್, ಉಪಾಧ್ಯಕ್ಷರಾಗಿ ಕೀರ್ತಿ, ಗೌರವಾಧ್ತಕ್ಷರಾಗಿ ರೋಹಿತ್ ಕರಂಬಳ್ಳಿ, ಕಾರ್ಯದರ್ಶಿಯಾಗಿ ಸೌಮ್ಯ, ಖಜಾಂಚಿಯಾಗಿ ಯಶ್ಪಾಲ್, ಸಂಘಟನಾ ಕಾರ್ಯದರ್ಶಿ ನಾಗೇಶ್,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೃಥ್ವಿರಾಜ್, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಕಾಶ್ , ಕ್ರೀಡಾ ಕಾರ್ಯದರ್ಶಿಯಾಗಿ ಕಿಶೋರ್, ಜೊತೆ ಕಾರ್ಯದರ್ಶಿಯಾಗಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ನಿರ್ಮಲಾ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ರಫೀಕ್ ಆಯ್ಕೆಯಾದರು.