ಧರ್ಮ ಸಂಸದ್ ಪ್ರಚಾರಾರ್ಥ ಸುಧಾಮ ರಥಯಾತ್ರೆಗೆ ಚಾಲನೆ

Spread the love

ಧರ್ಮ ಸಂಸದ್ ಪ್ರಚಾರಾರ್ಥ ಸುಧಾಮ ರಥಯಾತ್ರೆಗೆ ಚಾಲನೆ

ಉಡುಪಿ:  ಧರ್ಮ ಸಂಸದ್ ನ ಪ್ರಚಾರಕ್ಕೆ ನಿರ್ಮಿಸಿದ ಸುವರ್ಣ ರಥಯಾತ್ರೆಗೆ ಚಾಲನೆ  ಬುಧವಾರ ಉಡುಪಿಯಲ್ಲಿ ಜರುಗಿತು.

ರಥಯಾತ್ರೆಗೆ ವಕೀಲ ಪ್ರವೀಣ್ ಪೂಜಾರಿ ಚಾಲನೆ ನೀಡಿ ಇತ್ತೀಚೆಗೆ ಬುದ್ದಿಜೀವಿಗಳು ದೇವರಿಲ್ಲ, ಹಿಂದೂ ಧರ್ಮವೇ ಇಲ್ಲ ಎನ್ನುತ್ತಿದ್ದಾರೆ. ಅವರಿಗೆ ಈ ಧರ್ಮಸಂಸದ್ ಮೂಲಕ ಸರಿಯಾದ ಉತ್ತರ ನೀಡಬೇಕು. ಅದಕ್ಕಾಗಿ ನಾಡಿನ ಮೂಲೆಮೂಲೆಗಳಿಂದ ಲಕ್ಷಾಂತರ ಮಂದಿ ಹಿಂದುಗಳು ಆದಮಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಹಿಂದೂ ಪರಿಷತ್ ನ ಪ್ರಾಂತ್ಯ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿದ ಉಡುಪಿಯಲ್ಲಿ ನ.24ರಿಂದ 26ರವರೆಗೆ ನಡೆಯುವ ಧರ್ಮ ಸಂಸದ್ ಮೂಲಕ ಹಿಂದು ಧರ್ಮವನ್ನು ಟೀಕಿಸುವವರಿಗೆ ಬಲವಾದ ಸಂದೇಶವನ್ನು ನೀಡಬೇಕಾಗಿದೆ. ರಾಜಕೀಯ ಮತ್ತು ಸಾಮಾಜೀಕ ಬದಲಾವಣೆಯ ಕಾಲ ಸನ್ನಿಹಿತವಾಗಿದೆ, ಆದ್ದರಿಂದ ಬಹಳ ದೊಡ್ಡ ಸಂಖ್ಯೆಯಲ್ಲಿ ಹಿಂದುಗಳು ಈ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಹಿಂದು ಧರ್ಮದ ಶಕ್ತಿಯನ್ನು ಪ್ರದರ್ಶಿಸಬೇಕು.

  ಸಮಾಜವನ್ನು ಜಾತಿ, ಅಹಿಂದ, ಅಲ್ಪಸಂಖ್ಯಾತ ಇತ್ಯಾದಿ ಹೆಸರಿನಲ್ಲಿ ಒಡೆಯುವ ಪ್ರಯತ್ನ ನಡೆಯುತ್ತಿದೆ. ಇದನ್ನು ವಿಫಲಗೊಳಿಸುವ ರಾಜಕೀಯ ಉದ್ದೇಶ ಮತ್ತು ಹಿಂದೂ ಧರ್ಮದೊಳಗೆ ಇರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಒಗ್ಗಟ್ಟನ್ನು ಸಾಧಿಸುವ ಸಾಮಾಜಿತ ಉದ್ದೇಶಗಳೆರಡೂ ಈ ಧರ್ಮ ಸಂಸದ್ ನ ಮೂಲಕ ಈಡೇರಬೇಕಾಗಿದೆ ಎಂದವರು ಹೇಳಿದರು.

   ಪ್ರಾಸ್ತಾವಿಕ ಭಾಷಣ ಮಾಡಿದ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್, ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕುಗಳಲ್ಲಿ 250ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಲಾಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

  ಕಾರ್ಯಕ್ರಮದಲ್ಲಿ ವಿ.ಹಿಂ.ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ. ವಿಲಾಸ್ ನಾಯಕ್, ಬಜರಂಗದಳದ ಉಡುಪಿ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿ.ಹಿಂ.ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಕ್ರಷ್ಣಮೂರ್ತಿ, ಉಡುಪಿ ನಗರಾಧ್ಯಕ್ಷ ಸಂತೋಷ್ ಸುವರ್ಣ ಉದ್ಯಾವರ ಉಪಸ್ಥಿತರಿದ್ದರು.

  ಬಜರಂಗದಳದ ಮಂಗಳೂರು ವಿಭಾಗ ಸಂಘಟನಾ ಸಂಚಾಲಕ ಸುನಿಲ್ ಕೆ.ಆರ್. ಸ್ವಾಗತಿಸಿದರು. ಮಾಧ್ಯಮ ಪ್ರಮುಖ್ ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿ, ವಿ.ಹಿ.ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರತ್ನಾಕರ್ ಅಮೀನ್ ವಂದಿಸಿದರು.


Spread the love