ಧರ್ಮದ ತಳಹದಿಯೊಂದಿಗೆ ವ್ಯಕ್ತಿ ನಿರ್ಮಾಣವಾದಾಗ ಸಮಾಜದ ಅಭ್ಯುದಯ ಸಾಧ್ಯ : ವೀರೇಂದ್ರ ಹೆಗ್ಗಡೆ

Spread the love

ಧರ್ಮದ ತಳಹದಿಯೊಂದಿಗೆ ವ್ಯಕ್ತಿ ನಿರ್ಮಾಣವಾದಾಗ ಸಮಾಜದ ಅಭ್ಯುದಯ ಸಾಧ್ಯ : ವೀರೇಂದ್ರ ಹೆಗ್ಗಡೆ

ಸಮಾಜ ಇಂದು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಧರ್ಮದ ನೆಲೆಯಲ್ಲಿ ಪರಿಹಾರವಿದೆ. ಧರ್ಮದ ತಳಹದಿಯೊಂದಿಗೆ ವ್ಯಕ್ತಿ ನಿರ್ಮಾಣವಾದಾಗ ಸಮಾಜದ ಅಭ್ಯುದಯ ಸಾಧ್ಯ.
– ಹೀಗೆಂದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ.

ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸೋಮವಾರ ರಾಷ್ಟ್ರೀಯ ಧರ್ಮಸಂಸದ್-2018 ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧರ್ಮ ಸಂಸದ್‌ನಿಂದ ಸದ್ವಿಚಾರ ಪಸರಿಸಿ ಸಾಮಾಜಿಕ ಬದಲಾವಣೆ ಮತ್ತು ಧಾರ್ಮಿಕ ಜ್ಞಾನ ವೃದ್ಧಿಯಾಗುತ್ತದೆ. ಸಂತರ ನಡೆ, ನುಡಿಯಲ್ಲಿ ರಾಷ್ಟ್ರದ ಒಳಿತಿನ ಚಿಂತನೆಯಿದೆ. ಪ್ರಜೆಗಳ ಹಿತ ಮತ್ತು ಸಮಾಜದ ಪುನರುತ್ಥಾನ ಧರ್ಮ ಸಂಸದ್ ಆಶಯ ಎಂದರು.
ಉದ್ಘಾಟಿಸಿದ ಜುನಾ ಆಕಾಡ ಶ್ರೀ ಪಂಚದಶಾನಂ ರಾಷ್ಟ್ರೀಯ ಸಚಿವ ಶ್ರೀಮಹಂತ್ ದೇವಾನಂದ ಸರಸ್ವತಿ ಸ್ವಾಮೀಜಿ, ಸನಾತನ ಸಂಸ್ಕೃತಿಯ ಪ್ರಾಣ ಸಾಧು ಸಂತುರು. ಧರ್ಮ ಸಂಸದ್ ಮೂಲಕ ಧರ್ಮ ಪ್ರೇರಣೆಯಾಗಬೇಕು. ಆಧುನಿಕ ಮೆಕಾಲೆ ಶಿಕ್ಷಣ ಪದ್ಧತಿ ನಮ್ಮ ಸನಾತನ ಸಂಸ್ಕೃತಿಯಿಂದ ವಿಮುಖರನ್ನಾಗಿಸುತ್ತಿದೆ ಎಂದರು.

ಕೇಂದ್ರ ಸಚಿವ ಸದಾನಂದ ಗೌಡ, ಸಂಸದ ನಳಿನ್‌ಕುಮಾರ್ ಕಟೀಲು, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿದರು.

ಮಹಾಮಂಡಲೇಶ್ವರ, ಮಂಡಲೇಶ್ವರ, ಮಹಾಂತರು, ನಾಗಾಸಾಧುಗಳು, ನಾನಾ ಪರಂಪರೆಯ ಜಗದ್ಗುರುಗಳು ಸೇರಿದಂತೆ 108 ಮಠದ ಸಾಧ್ವಿಗಳು ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜಾ ಸ್ವಾಗತಿಸಿದರು. ಸತ್ಯಜಿತ್ ಸುರತ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ವಂದಿಸಿದರು. ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀಧಾಮ ಮಾಣಿಲ, ಶ್ರೀ ರೇಣುಕಾನಂದ ಸ್ವಾಮೀಜಿ, ತೀರ್ಥಹಳ್ಳಿ ಶ್ರೀನಾರಾಯಣಗುರು ಸಂಸ್ಥಾನ, ಮುಕ್ತಾನಂದ ಸ್ವಾಮೀಜಿ, ಕರಿಂಜೆ ಕ್ಷೇತ್ರ, ಬಾಳೆಕೊಡಿ ಕ್ಷೇತ್ರದ ಶ್ರೀಮಣಿಕಾಂತ ಸ್ವಾಮೀಜಿ, ರಾಣಿಬೆನ್ನೂರು ಸಿದ್ದಾರೂಢಾಶ್ರಮದ ಶ್ರೀಸದ್ಗುರು ಮರುಳಶಂಕರ ಸ್ವಾಮೀಜಿ, ಉತ್ತರಪ್ರದೇಶ ಚಿತ್ರಕೂಟದ ಸಂತೋಷಾನಂದ ಸ್ವಾಮೀಜಿ, ಮಂಡ್ಯ ಬನಜಿಗ ಗುರುಪೀಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮಧ್ಯಪ್ರದೇಶ ಉಜ್ಜಯಿನಿ ಕ್ಷೇತ್ರದ ಅಘೋರಿ ಯೋಗಿ ವಿವೇಕ್‌ನಾಥ್ ಜೀ, ಹರಿದ್ವಾರ ಸರಿಪಂಚ್‌ದಸ್‌ನಾಮ್ ಜೂನಾ ಅಖಾಡದ ಮಹಂತ್ ನವಿಗಿರಿ ಸ್ವಾಮೀಜಿ ಸೇರಿ 25 ಪ್ರಮುಖ ಸಾಧು ಸಂತರು ಭಾಗವಹಿಸಿದ್ದರು.


Spread the love