ಧರ್ಮದ ಹೆಸರಿನಲ್ಲಿ ಸಂಘಪರಿವಾರದಿಂದ ಸಮಾಜದಲ್ಲಿ ಸಮಸ್ಯೆ ಸೃಷ್ಟಿ – ರಮಾನಾಥ್ ರೈ
ಮಂಗಳೂರು: ಧರ್ಮ, ದೇವರು, ರಾಷ್ಟ್ರೀಯತೆಯ ಹೆಸರಿನಲ್ಲಿ ಕೆಲವೊಂದು ಸಮಾಜ ವಿರೋಧಿ ಶಕ್ತಿಗಳು ಸಮಾಜದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕುವುದಲ್ಲದೆ ಶಾಂತಿಯಿಂದ ಯಾರಿಗೂ ಬದಕಲು ಬಿಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆರೋಪಿಸಿದರು.
ಅವರು ಸರ್ಕಿಟ್ ಹೌಸಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಗೋರಕ್ಷಣೆಯ ಹೆಸರಿನಲ್ಲಿ ಚಡ್ಡಿ ಪರಿವಾರ (ನಾನು ಸಂಘ ಪರಿವಾರ ಎಂದು ಸಂಬೋಧೀಸಲ್ಲ ಎಂದ ರೈ) ಅಮಾಯಕ ಜನರನ್ನು ಕೊಲ್ಲುವ ಕೆಲಸಕ್ಕೆ ಕೈಹಾಕಿದ್ದಾರೆ. ಇತ್ತೀಚೆಗೆ ರಾಷ್ಟ್ರದ ಪ್ರಧಾನಿ ತಮ್ಮ ಭಾಷಣದಲ್ಲಿ 80% ಗೋರಕ್ಷಕರೆಂದು ಕರೆಸಿಕೊಳ್ಳುವವರು ಕ್ರಿಮಿನಲ್ ಚಟುವಟಿಕೆ ತೊಡಗಿಸಿಕೊಳ್ಳುವವರು ಎಂದು ಹೇಳೀದ್ದು ಅದು ಸತ್ಯದ ಮಾತು ಎಂದರು.
ಈ ಮೊದಲು ಗೋರಕ್ಷಕರೆಂದು ಹೇಳಿಕೊಳ್ಳುವವರು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಧಾಳಿ ನಡೆಸುತ್ತಿದ್ದು ಈಗ ಹಿಂದುಳಿದ ವರ್ಗದವರನ್ನು ಗುರಿಯಾಗಿಸಿಕೊಂಡಿದ್ದಾರೆ. ಬಂಟ್ವಾಳದಲ್ಲಿ ಹರೀಶ್ ಪೂಜಾರಿಯನ್ನು ಕೊಂದ ಈ ಸಂಘಟನೆಗಳ ಕೃತ್ಯವನ್ನು ಜಿಲ್ಲೆಯ ಜನರು ವಿರೋಧಿಸಬೇಕು. ಸಂಘಪರಿವಾರ ಜಿಲ್ಲೆಯಲ್ಲಿ ಕೋಮುವಾದವನ್ನು ಬಿತ್ತುವುದರೊಂದಿಗೆ ಅಮಾಯಕ ಜನರನ್ನು ಕೊಲ್ಲುತ್ತಿದ್ದಾರೆ. ಇತ್ತೀಚೆಗೆ ಕೆಂಜೂರು ಪ್ರವೀಣ್ ಪೂಜಾರಿಯನ್ನು ಗೋರಕ್ಷಕರು ಕೊಂದಿರುವುದು ಇದಕ್ಕೆ ಇನ್ನೊಂದು ಉದಾಹರಣೆ. ನಮ್ಮ ನಿಯೋಗ ಇತ್ತೀಚೆಗೆ ಐಜಿಯವರನ್ನು ಭೇಟಿಯಾಗಿ ಗೋರಕ್ಷಕರ ವಿರುದ್ದ ಕಠಿಣ ಕ್ರಮಕೈಗೋಳ್ಳುವಂತೆ ವಿನಂತಿಸಲಾಗಿದೆ. ಪ್ರತಿಯೊಬ್ಬರು ಕೋಮುವಾದವನ್ನು ಹಾಗೂ ಸೋಕಾಲ್ಡ್ ಗೋರಕ್ಷಕರನ್ನು ವಿರೋಧಿಸುವ ಕೆಲಸ ನಡೆಸಬೇಕು ಅಲ್ಲದೆ ಜಿಲ್ಲೆಯ ಜನರು ಒಗ್ಗಟ್ಟಾಗಿ ಇಂತಹ ವ್ಯಕ್ತಿಗಳ ವಿರುದ್ದ ಸಮರ ಸಾರಬೇಕಾಗಿದೆ ಎಂದರು.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸ ರೈ ಅದು ರಾಣಿ ಅಬ್ಬಕ್ಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವಾಗಿರಲಿಲ್ಲ ಬದಲಾಗಿ ಅದೊಂದು ರಾಜಕೀಯ ನಾಟಕವಾಗಿತ್ತು. ಅಮಿತ್ ಶಾ ಸಭೆಯಲ್ಲಿ ಯಡ್ಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂದು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಂಭೋಧೀಸಿರುವುದು ರಾಜಕೀಯ ಪ್ರೇರಿತ ಕಾರ್ಯಕ್ರಮ ಎಂಬುದಕ್ಕೆ ಸಾಕ್ಷಿ. ವಿಶ್ವವಿದ್ಯಾನಿಲಯದ ಆವರಣದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದನ್ನು ನಾವು ವಿರೋಧಿಸುತ್ತೇವೆ. ಸಿಂಡಿಕೇಟ್ ಸದಸ್ಯರು ಈ ಕುರಿತು ಸರಕಾರಕ್ಕೆ ಪತ್ರ ಬರೆದಿದ್ದು, ತಿರಂಗ ಯಾತ್ರೆಯ ಹೆಸರಿನಲ್ಲಿ ಬಿಜೆಪಿ ಜನರನ್ನು ವಂಚಿಸಲು ಪ್ರಯತ್ನಿಸುತ್ತದೆ.
ಇದೇ ವೇಳೆ ನೆಹರು ಕುರಿತು ಕಾರ್ಯಕ್ರಮ ವಿಶ್ವವಿದ್ಯಾನಿಲಯ ಆವರಣದಲ್ಲಿ ಆಯೋಜಿಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೈ ಅದು ಎಬಿವಿಪಿ ಹಾಗೂ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವಾಗಿತ್ತು ಎಂದು ಉತ್ತರಿಸಿದರು.
ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಶಶಿಧರ್ ಹೆಗ್ಡೆ, ಮಿಥುನ್ ರೈ, ಕವಿತಾ ಸನಿಲ್ ಹಾಗೂ ಇತರರು ಉಪಸ್ಥಿತರಿದ್ದರು.
ramanath rai ravare namaskara
vishwadalli dharamda hesari nalli rakta pata agutiruvudu yava dharma parivara davarinda heltira please
rajakigoskara satya sullagalla
bhayotpadane mattu balavtada matantara bagge yavatdru nimma anisike heloke agatta please