ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಧರ್ಮದ ಹೆಸರಿನಲ್ಲಿ ಗಲಾಟೆ ಹಬ್ಬಿಸಲು ಯತ್ನಿಸಿದವರ ಬಂದನ
ಪುತ್ತೂರು: ಈ ದಿನ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಇಲಾಖಾ ಜೀಪಿನಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿ PSI ಮತ್ತು ಸಿಬ್ಬಂದಿಯವರು ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ 15.15 ಗಂಟೆಗೆ ಸಂಟ್ಯಾರುನಲ್ಲಿದ್ದಾಗ ರೆಂಜ ರಿಕ್ಷಾ ತಂಗುದಾಣದ ಬಳಿ ಹಿಂದೂ ಮುಸ್ಲಿಂ ಯುವಕ ಯುವತಿಯರು.
ಮುಸ್ಲಿಮರ ಮನೆಗೆ ಬಕ್ರೀದ್ ಹಬ್ಬಕ್ಕೆ ಅತಿಥಿಗಳಾಗಿ ಹೋಗಲು ಬಂದವರನ್ನು ಕೆಲವರು ಗುಂಪು ಸೇರಿ ಅವರನ್ನು ಹೋಗದಂತೆ ತಡೆದು ನಿಂದಿಸುತ್ತಿರುವುದಾಗಿ ತಿಳಿದು ಸ್ಥಳಕ್ಕೆ ತಲುಪಿದಾಗ ಸುಮಾರು 8_10 ಜನರು ಗುಂಪು ಸೇರಿ 5 ಹುಡುಗರು ಮತ್ತು 5 ಹುಡುಗಿಯರನ್ನು ಸುತ್ತುವರೆದು ಗಲಾಟೆ ಮಾಡುತ್ತಿದ್ದು ಅದರಲ್ಲಿ ಓರ್ವ ಯುವಕ ಹಲ್ಲೆಗೊಳಗಾಗಿದ್ದು ಎದೆಯನ್ನು ಹಿಡಿದು ಅಳುತ್ತಿದ್ದವರನ್ನು ಆಟೋದಲ್ಲಿ ಚಿಕಿತ್ಸೆಗೆ ಕಳುಹಿಸಿಕೊಟ್ಟು ಅಲ್ಲೆ ಇದ್ದ ಸಾರ್ವಜನಿಕರೊಬ್ಬರಲ್ಲಿ ವಿಚಾರಿಸಲಾಗಿ ಬಕ್ರಿದ್ ಹಬ್ಬದ ಸಲುವಾಗಿ ನಿಡ್ಪಳ್ಳಿ ಕೆರೆಮಾರಿನ ಅಬ್ದುಲ್ ಶಮೀರ್ ಎಂಬಾತನು ತನ್ನ ಸಹಪಾಠಿಗಳನ್ನು ಊಟಕ್ಕೆ ಕರೆದಿದ್ದು ಈ ಬಗ್ಗೆ ಮಂಗಳೂರಿನಿಂದ ಬಸ್ಸಲ್ಲಿ ಬಂದು ರೆಂಜ ತಲುಪಿ ಅಲ್ಲಿಂದ ಆಟೋ ರಿಕ್ಷಾದಲ್ಲಿ ನಿಡ್ಪಳ್ಳಿ ಹೋಗುವಾಗ ಅಲ್ಲೆ ಇದ್ದ ರಿಕ್ಷಾ ಚಾಲಕ ರುಕ್ಮ ಎಂಬವರು ನೀವು ಮುಸ್ಲಿಮರು ಹಿಂದು ಹೆಣ್ಣು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತೀರಾ?ನಿಮ್ಮ ಹೆಣ್ಣು ಮಕ್ಕಳನ್ನು ಮನೆಗೆ ಕಳುಹಿಸುತ್ತೀರಾ ಬೇವರ್ಸಿ ಎಂದು ಬೈದು ನಂತರ ಈ ವಿಚಾರ ತಿಳಿದು ಅಲ್ಲಿ ಬಂದವರು ಹುಡುಗಿಯರನ್ನು ಉದ್ದೇಶಿಸಿ ಬೈದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಧರ್ಮದ ಹೆಸರಿನಲ್ಲಿ ಗಲಾಟೆ ಹಬ್ಬಿಸಲು ಯತ್ನಿಸಿದ್ದು ಕೈಯಿಂದ ಹೊಡೆದ ಗಲಾಟೆ ಮಾಡಿದ ರುಕ್ಮ, ಸತೀಶ್ ಕರ್ನಪ್ಪಾಡಿ, ಶೇಷಪ್ಪ ಪಿಟ್ಟರ್,ರಿಕ್ಷಾ ಚಾಲಕ ಗಣೇಶ್ ,ಕುಂಞ, ದುಗ್ಗಪ್ಪ, ಪುರುಶೋತ್ತಮ ಎಂಬವರನ್ನು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದು ಹಿಂದೂ ಮುಸ್ಲಿಂ ಸಮುದಾಯದ ನಡುವೆ ಸೌಹಾರ್ದತೆಗೆ ಧಕ್ಕೆ ಯಾಗುವಂತೆ ಮಾಡಿ ಸಾರ್ವಜನಿಕ ನೆಮ್ಮದಿಯನ್ನು ಕದಡಿದ್ದರಿಂದ ಪುತ್ತೂರು ಗ್ರಾಮಾಂತರ ಠಾಣೆ ಅಕ್ರ 128/2018 ಕಲಂ 143,147,341,504,323,153(ಎ) ಜೊತೆಗೆ 149 ಐಪಿಸಿರಂತೆ ಸ್ವಯಂ (suo motto)ಪ್ರಕರಣ ದಾಖಲಿಸಲಾಗಿದೆ.
ನಂತರ ಅತಿಥಿಗಳಾಗಿ ಬಂದಿದ್ದ ವಿದ್ಯಾರ್ಥಿಗಳು ಬಕ್ರೀದ್ ಆತಿಥ್ಯ ಸ್ವೀಕರಿಸಿ ತೆರಳಿರುತ್ತಾರೆ.
ಆ ಊರಿನ ಹಿಂದು ಮುಖಂಡರು ಈ ಘಟನೆಯನ್ನು ಖಂಡಿಸಿ ಪೊಲೀಸರ ಜೊತೆ ಸಹಕರಿಸಿರುತ್ತಾರೆ.