ನಗರದ ಅನಧೀಕೃತ ಮಸಾಜ್ ಕೇಂದ್ರಗಳಿಗೆ ಮೇಯರ್ ಕವಿತಾ ಸನೀಲ್ ಧಾಳಿ

Spread the love

ನಗರದ ಅನಧೀಕೃತ ಮಸಾಜ್ ಕೇಂದ್ರಗಳಿಗೆ ಮೇಯರ್ ಕವಿತಾ ಸನೀಲ್ ಧಾಳಿ

ಮಂಗಳೂರು: ಮಂಗಳೂರಿನ ಬಲ್ಮಠದಲ್ಲಿರುವ ಬಾಡಿ ಮಸಾಜ್ ಪಾರ್ಲರ್ ಗಳ ಮೇಲೆ ಮಂಗಳೂರು ಮಹಾನಗರಪಾಲಿಕೆ ಮೇಯರ್ ಕವಿತಾ ಸನಿಲ್ ಮಂಗಳವಾರ ಅನಿರೀಕ್ಷಿತ ಧಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಯುವತಿಯರಿಂದ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಯುವಕರು ಓಡಿ ಪರಾರಿಯಾಗಿದ್ದಾರೆ.

ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನೀಲ್ ಹಾಗೂ ಅವರ ತಂಡ ಮಂಗಳವಾರ ನಗರದಲ್ಲಿ ಅನಧೀಕೃತವಾಗಿ ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರ್ ಹಾಗೂ ಸ್ಕಿಲ್ ಗೇಮ್ ಸೆಂಟರ್ ಗಳ ಮೇಲೆ ಧಾಳಿ ನಡೆಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕವಿತಾ ಸನೀಲ್ ಅವರ ನಗರದಲ್ಲಿ ಹಲವಾರು ಸ್ಕೀಲ್ ಗೇಮ್ ಸೆಂಟರ್ ಅನಧೀಕೃತವಾಗಿ ಕಾರ್ಯಾಚರಿಸುತ್ತವೆ. ಹಲವಾರು ಯುವಕರು ತಮ್ಮ ಜೀವನನ್ನು ಇಲ್ಲಿ ಕಳೆದು ಹಾಳು ಮಾಡಿಕೊಳ್ಳುವುದರೊಂದಿಗೆ ಕಷ್ಟಪಟ್ಟು ದುಡಿದ ಹಣವನ್ನು ಕೂಡ ಪೋಲು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೋಷಕರು ಕೂಡ ಇಂತಹ ಅನಧಿಕೃತ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಮುಂದೆ ಬರಬೇಕಾಗಿದೆ ಎಂದರು.

ನಗರದಲ್ಲಿ ಹಲವಾರು ಆಯುರ್ವೇದ ಕೇಂದ್ರಗಳು ಯಾವುದೇ ರೀತಿಯ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮಸಾಜ್ ಪಾರ್ಲರ್ ನಡೆಸುತ್ತಿದ್ದಾರೆ, ಇಂದು ಧಾಳಿಯ ವೇಳೆ ಕೂಡ ಕೇಂದ್ರ ಅನಧಿಕೃತವಾಗಿ ನಡೆಯುತ್ತಿತ್ತು. ಮುಂದಿನ ದಿನಗಳಲ್ಲಿ ನಗರಪಾಲಿಕೆ ಇಂತಹ ಕೇಂದ್ರಗಳ ಮೇಲೆ ಧಾಳಿಯನ್ನು ಮುಂದುವರಿಸಲಾಗುವುದು ಎಂದರು.

ಇದೇ ವೇಳೆ ಮಸಾಜ್ ಕೇಂದ್ರದ ಸುಜಾತಾ ರೈ ಮಾತನಾಡಿ ನಮಲ್ಲಿ ಸುಪ್ರೀಂ ಕೋರ್ಟಿನ ಆದೇಶ ಇರುವುದರಿಂದ ನಾವು ನಿರಾಂತಕವಾಗಿ ಸ್ಕಿಲ್ ಗೇಮ್ ಸೆಂಟರ್ ನಡೆಸಲು ಅವಕಾಶವಿದೆ. ಇದಕ್ಕೆ ನಗರಪಾಲಿಕೆಯ ಯಾವುದೇ ಪರವಾನಿಗೆ ಅಗತ್ಯವಿಲ್ಲ. ಯಾವುದೇ ರೀತಿಯ ಮುಂಗಡ ನೋಟಿಸ್ ನೀಡದೆ ಹೀಗೆ ಧಾಳಿ ನಡೆಸುವುದು ಸರಿಯಲ್ಲ ನಾವು ನಮ್ಮ ಉದ್ಯಮವನ್ನು ಮುಂದುವರಿಸುತ್ತೇವೆ ಅಲ್ಲದೆ ನಮ್ಮ ಉದ್ಯಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು.


Spread the love