ನಗರದಲ್ಲಿ ಟ್ರಾಫಿಕ್ ಮುಕ್ತ ಮಂಗಳೂರು ಅಭಿಯಾನದೆಡೆ ಸೈಕಲ್ ಜಾಥಾ
ಮಂಗಳೂರು: ನಗರದ ಮಂಗಳೂರು ಸೈಕ್ಲಿಂಗ್ ಕ್ಲಬ್ ಇದರ ಸಹಕಾರದೊಂದಿಗೆ ದೇಶದ ಪ್ರತಿಷ್ಠಿತ ಕಿಲ್ಲರ್ ಜೀನ್ಸ್ ಬ್ರಾಂಡಿನ ‘ಕೆ-ಲೌಂಜ್’ ಬಲ್ಮಠ ರಸ್ತೆಯಲ್ಲಿರುವ ಯುವಪೀಳಿಗೆಯ ರೆಡಿಮೇಡ್ ಉಡುಪುಗಳ ಮಳಿಗೆಯಲ್ಲಿ ಮೇ. 14 ರಂದು ಸೈಕಲ್ ಜಾಥಾವನ್ನು ಏರ್ಪಡಿಸಲಾಗಿತ್ತು.
ಈ ಸೈಕಲ್ ಜಾಥಾದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ಸಹಾಯಕ ಪೋಲಿಸ್ ಕಮೀಷನ್ನರು ಉದಯನಾಯಕ್ ಹಸಿರು ನಿಶಾನೆ ತೋರಿಸಿ ವಿದ್ಯುಕ್ತವಾಗಿ ಉದ್ಘಾಟಿಸಿದರು ಮತ್ತು ನಗರದ ಅಪರಾಧ ದಳದ ಮುಖ್ಯಸ್ಥ ವಲೈಂಟಿನ್ ಡಿ’ಸೋಜಾ ಸೈಕಲ್ ಸವಾರಿಯನ್ನು ಬಿಡುಗಡೆಗೊಳಿಸಿ, ಹೆದ್ದಾರಿಯಲ್ಲಿ ಸೈಕಲ್ ಸವಾರಿ ನಡೆಸುವಾಗ ಜಾಗರೂಕತೆ ವಹಿಸುವಂತೆ ಕಿವಿಮಾತು ನೀಡಿದರು. ಈ ಸಂದರ್ಭದಲ್ಲಿ ಮುಂಬೈನ ಕೇವಲ್ ಕಿರಣ್ ಕ್ಲಾತಿಂಗ್ ಸಂಸ್ಥೆಯ ಸತೀಶ್ ಪಟೇಲ್, ಮಂಗಳೂರು ಸೈಕ್ಲಿಂಗ್ ಕ್ಲಬ್ನ ಅನಿಲ್ ಶೇಟ್ ಮತ್ತು ಹರೀಶ್ ಮಹೇಶ್ವರಿ, ಕೆ-ಲೌಂಜ್ ಮಳಿಗೆಯ ಸಂಜಯ್ ವಸಾನಿ ಮತ್ತು ಹಿತೇನ್ ವಸಾನಿ ಉಪಸ್ಥಿತರಿದ್ದರು.
ಮಂಗಳೂರು ಸೈಕ್ಲಿಂಗ್ ಕ್ಲಬ್ನ 25 ಸೈಕಲ್ ಸವಾರರ ಮುಖ್ಯಸ್ಥ ಅನಿಲ್ ಶೇಟ್ ನೇತೃತ್ವದಲ್ಲಿ ಮಂಗಳೂರು ಜನತೆಗೆ ಸೈಕಲ್ ಸವಾರಿಯ ಉಪಯೋಗ ಮತ್ತು ಟ್ರಾಫಿಕ್ ಸಂದಣಿ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ನಗರದ ಬಲ್ಮಠ ರಸ್ತೆಯ ಕೆ-ಲೌಂಜ್ ಮಳಿಗೆಯಿಂದ ಹೊರಟ ಈ ಸೈಕಲ್ ಜಾಥಾವು ಪಾಂಡೇಶ್ವರದ ಎಂಫೈರ್ ಮಾಲ್ – ಹಂಪನಕಟ್ಟಾ – ಕೆ.ಎಸ್.ರಾವ್ ರಸ್ತೆ, ಪಿವಿಎಸ್ ಜಂಕ್ಷನ್, ಎಂ.ಜಿ.ರಸ್ತೆ – ಸಾಯಿಬೀನ್ ಕಾಂಪ್ಲೆಕ್ಸ್ ಹಿಂತಿರುಗಿ ಪಿವಿಎಸ್ ಜಂಕ್ಷನ್ ಬಂಟ್ಸ್ ಹಾಸ್ಟೆಲ್ ರಸ್ತೆ, ನಂತೂರು ವೃತ್ತ, ಸೈಂಟ್ ಆ್ಯಗ್ನೆಸ್ ಕಾಲೇಜು, ಬೆಂದೂರುವೆಲ್ ವೃತ್ತ ಹಿಂತಿರುಗಿ ಬಲ್ಮಠ ರಸ್ತೆಗೆ ಕೊನೆಗೊಂಡಿತು.