Spread the love
ನದಿಗೆ ಇಳಿದ ಐವರು ಬಾಲಕರು ನೀರು ಪಾಲು
ಬಂಟ್ವಾಳ: ಪಲ್ಗುಣಿ ನದಿಗೆ ಬಿದ್ದು ಐದು ಮಂದಿ ಬಾಲಕರು ನೀರು ಪಾಲಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.







ಮೃತರನ್ನು ಮುಲಾರಪಟ್ನ ನಿವಾಸಿಗಳಾದ ಅಸ್ಲಾಂ(17), ರಮೀಜ್ (17), ಅಜ್ಮಲ್ (18), ಮುದಾಸಿರ್ (17), ಸವಾದ್ (17) ಎಂದು ಗುರುತಿಸಲಾಗಿದೆ. ನೀರುಪಾಲಾದ ಐವರಲ್ಲಿ ಸವಾದ್ ಎಂಬಾತನ ಶವ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಇನ್ನು ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಸೋಮವಾರ ರಜಾ ದಿನವಾಗಿದ್ದರಿಂದ ಸೋಮವಾರ ಸಂಜೆ ವಿದ್ಯಾರ್ಥಿಗಳು ನದಿಯಲ್ಲಿ ಈಜಲೆಂದು ತೆರಳಿದ್ದರು. ಐವರು ಮಕ್ಕಳು ರಾತ್ರಿಯಾದರೂ ಮನೆಗೆ ವಾಪಾಸ್ಸಾಗದ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಮೊಬೈಲ್ಗೆ ಕರೆ ಮಾಡಿದ್ದಾರೆ.
ಕರೆಗಳನ್ನು ಸ್ವೀಕರಿಸಿದ್ದರಿಂದ ಆತಂಕಗೊಂಡ ಪೋಷಕರು ಹುಡುಕಾಟ ನಡೆಸುತ್ತಿರುವಾಗ ಪಲ್ಗುಣಿ ನದಿ ದಡದಲ್ಲಿ ಐವರ ವಸ್ತ್ರ ಹಾಗೂ ಮೊಬೈಲ್ ಪತ್ತೆಯಾಗಿದೆ. ಇದರಿಂದ ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ ಎಂದು ಪೋಷಕರು ಶಂಕಿಸಿ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.
Spread the love