ನವದೆಹಲಿ: ಕೇಂದ್ರ ಕೃಷಿ ಸಚಿವ ಬೇಜವ್ದಾರಿಯ ಹೇಳಿಕೆ ; ರೈತರ ಆತ್ಮಹತ್ಯೆಗೆ ಪ್ರೇಮ ವೈಫಲ್ಯ, ನಪುಂಸಕತ್ವ ಕಾರಣ

Spread the love

ನವದೆಹಲಿ: ದೇಶದಲ್ಲಿ ಪ್ರಸಕ್ತ ವರ್ಷ 1,400ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಪ್ರೇಮ ವೈಫಲ್ಯ ಅಥವಾ ನಪುಂಸಕತ್ವವೇ ಕಾರಣ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ರಾಜ್ಯಸಭೆಯಲ್ಲಿ ರೈತರ ಆತ್ಮಹತ್ಯೆಗೆ ಕಾರಣವೇನು ಎಂಬುದರ ಬಗ್ಗೆ ಚರ್ಚೆಯಾಗುತ್ತಿದ್ದ ವೇಳೆ ರಾಧಾ ಮೋಹನ್ ಸಿಂಗ್, ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ರೈತರ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆಗಳು, ರೋಗ, ಮಾದಕವಸ್ತು, ವರದಕ್ಷಿಣೆ , ಪ್ರೇಮ ವೈಫಲ್ಯ ಮತ್ತು ನಪುಂಸಕತ್ವ ಕಾರಣ ಎಂದು ಹೇಳಲಾಗಿದೆ ಎಂದು ಉತ್ತರಿಸಿದ್ದಾರೆ.ಸಚಿವರ ಈ ಹೇಳಿಕೆಗೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ.
ಅದೇ ವೇಳೆ ಸಚಿವರ ಈ ರೀತಿಯ ಹೇಳಿಕೆ ವಿರುದ್ಧ ತಾವು ನೋಟಿಸ್ ಸಲ್ಲಿಸುವುದಾಗಿ ಜನತಾದಳ (ಯುನೈಟೆಡ್) ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ.ಕೇಂದ್ರ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ  ಕಾಂಗ್ರೆಸ್ ವಕ್ತಾರ, ನಟ ರಾಜ್ ಬಬ್ಬರ್,  ರೈತರ ಆತ್ಮಹತ್ಯೆಯ ಬಗ್ಗೆ ಬಿಜೆಪಿ ಮಾತ್ರವೇ ಈ ರೀತಿಯ ಬೇಜವಾಬ್ದಾರಿಯ ಹೇಳಿಕೆ ನೀಡಬಲ್ಲುದು ಎಂದಿದ್ದಾರೆ.


Spread the love