ನವೆಂಬರ್ 17: ದ.ಕ. ಜಿಲ್ಲಾ ಮಟ್ಟದ ಯುವಜನೋತ್ಸವ 2018-19

Spread the love

ನವೆಂಬರ್ 17: ದ.ಕ. ಜಿಲ್ಲಾ ಮಟ್ಟದ ಯುವಜನೋತ್ಸವ 2018-19

ಮಂಗಳೂರು :2018-19ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ.ಜಿಲ್ಲೆ, ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಅಮರಮುಡ್ನೂರು, ದ. ಕ. ಜಿಲ್ಲಾ ಯುವಜನ ಒಕ್ಕೂಟ(ರಿ), ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ, ಫ್ರೆಂಡ್ಸ್ ಕ್ಲಬ್ ಪೈಲಾರು(ರಿ) ಹಾಗೂ ಶೌರ್ಯ ಯುವತಿ ಮಂಡಲ ಪೈಲಾರು ಇವರುಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 17 ರಂದು ಪೂರ್ವಾಹ್ನ 9 ಗಂಟೆಗೆ ಸುಳ್ಯ ತಾಲೂಕಿನ ಸುವರ್ಣ ರಂಗ ರಂಗಮಂದಿರ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿ ಸಂಘಟಿಸಲಾಗುವುದು.

ಈ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜನಪದ ನೃತ್ಯ (15 ನಿಮಿಷ, ಗುಂಪು ಸ್ಪರ್ಧೆ, ಸ್ಪರ್ಧಿಗಳ ಸಂಖ್ಯೆ 20), ಜನಪದ ಹಾಡು ( 7 ನಿಮಿಷ ಗುಂಪು ಸ್ಪರ್ಧೆ, ಸ್ಪರ್ಧಿಗಳ ಸಂಖ್ಯೆ 10), ಏಕಾಂಕ ನಾಟಕ (45 ನಿಮಿಷ, ಗುಂಪು ಸ್ಪರ್ಧೆ, ಸ್ಪರ್ಧಿಗಳ ಸಂಖ್ಯೆ 12, ಇಂಗ್ಲೀಷ್ ಅಥವಾ ಹಿಂದಿ ಭಾಷೆಗಳಲ್ಲಿ), ಶಾಸ್ತ್ರೀಯ ಸಂಗೀತ ( voಛಿಚಿಟ Soಟo, 15 ನಿಮಿಷ, ಹಿಂದುಸ್ತಾನಿ ಅಥವಾ ಕರ್ನಾಟಕ), ಶಾಸ್ತ್ರೀಯ ಸಂಗೀತ (Iಟಿsಣಡಿumeಟಿಣಚಿಟ Soಟo 15 ನಿಮಿಷ, ಹಿಂದುಸ್ತಾನಿ ಅಥವಾ ಕರ್ನಾಟಕ ಶೈಲಿಯಲ್ಲಿ ತಬಲ, ವೀಣೆ, ಸಿತಾರ್, ಕೊಳಲು, ಮೃದಂಗ), ಹಾರ್ಮೋನಿಯಂ (ಲಘು, 10 ನಿಮಿಷ, ವೈಯಕ್ತಿಕ), ಗಿಟಾರ್‍ವಾದನ (10 ನಿಮಿಷ, ವೈಯಕ್ತಿಕ ), ಶಾಸ್ತ್ರೀಯ ನೃತ್ಯ (15 ನಿಮಿಷ ವೈಯಕ್ತಿಕ, ಮಣಿಪುರಿ, ಒಡಿಸ್ಸಿ, ಕಥಕ್, ಕೂಚುಪುಡಿ ಮತ್ತು ಭರತನಾಟ್ಯವನ್ನು ಪ್ರದರ್ಶಿಸಬಹುವುದು), ಆಶುಭಾಷಣ( 4 ನಿಮಿಷ, ವೈಯಕ್ತಿಕ ಇಂಗ್ಲೀಷ್ ಅಥವಾ ಹಿಂದಿ ಭಾಷೆಗಳಲ್ಲಿ) ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಈ ಯುವಜನೋತ್ಸವದಲ್ಲಿ ಜಿಲ್ಲೆಯ 15 ರಿಂದ 29 ವರ್ಷ ಒಳಪಟ್ಟ ಎಲ್ಲಾ ಯುವಕ ಸಂಘ/ಯುವತಿ ಮಂಡಲ/ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಅರ್ಹರಾಗಿರುತ್ತಾರೆ.

ಆದ್ದರಿಂದ ಈ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಹೆಸರುಗಳನ್ನು ನವೆಂಬರ್ 16 ರಂದು ಸಂಜೆ 5 ಗಂಟೆಯ ಒಳಗಾಗಿ ತೇಜಸ್ವಿ ಕಡಪಳ ಕೋಶಾಧಿಕಾರಿ, ಯುವಜನ ಸಂಯುಕ್ತ ಮಂಡಳಿ, ಸುಳ್ಯ ತಾಲೂಕು ಇವರ (ದೂ.ಸಂ. 9482222206 ) ಇವರಿಗೆ ಕಳುಹಿಸಿ ಕೊಡುವಂತೆ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love