ನಾಪತ್ತೆಯಾಗಿದ್ದ ಮಹಿಳೆ 18 ತಿಂಗಳ ಬಳಿಕ ಪತ್ತೆ

Spread the love

ನಾಪತ್ತೆಯಾಗಿದ್ದ ಮಹಿಳೆ 18 ತಿಂಗಳ ಬಳಿಕ ಪತ್ತೆ

ಮಂಗಳೂರು: ಕಳೆದ 18 ತಿಂಗಳುಗಳಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಮತ್ತೋರ್ವ ವ್ಯಕ್ತಿಯೊಂದಿಗೆ ನಾಪೋಕ್ಲು ಪರಂಪೋರು ಎಂಬಲ್ಲಿ ಪತ್ತೆಯಾಗಿದ್ದಾರೆ.

ಪತ್ತೆಯಾದ ಮಹಿಳೆಯನ್ನು ಒಲಾಮೊಗರು ನಿವಾಸಿ ಕೃಷ್ಣಪ್ಪ ಅವರ ಪತ್ನಿ ಉಮಾವತಿ (45) ಎಂದು ಗುರುತಿಸಲಾಗಿದೆ.

ಪೋಲಿಸ್ ಮೂಲಗಳ ಪ್ರಕಾರ 2015 ಜೂನ್ 15 ರಿಂದ ಉಮಾವತಿ ನಾಪತ್ತೆಯಾಗಿದ್ದು, ಈ ಕುರಿತು ಆಕೆಯ ಮಗಳು ಗುಲಾಬಿ ಪೋಲಿಸರಿಗೆ ದೂರು ನೀಡಿದ್ದರು.

missing-puttur-women-found-20161225 missing-puttur-women-found-20161225-01

2015 ಜೂನ್ 15 ಬೆಳಿಗ್ಗೆ 8 ಗಂಟೆಗೆ ಉಮಾವತಿ ಕೆಲಸ ನಿಮಿತ್ತ ಹೊರಹೋಗಿದ್ದು ಮರಳಿ ಮನೆಗೆ ಬಂದಿರಲಿಲ್ಲ. ಪೋಲಿಸ್ ದೂರಿನ ಬಳಿಕ ಪೋಲಿಸರು ಉಮಾವತಿಯನ್ನು ಹುಡುಕುವ ಸಲುವಾಗಿ ಸುಳ್ಯ, ಮಡಿಕೇರಿ, ಮೈಸೂರು ಹಾಗೂ ಕೇರಳಗಳಲ್ಲಿ ಹುಡುಕಾಟ ನಡೆಸಿದ್ದರು. ಡಿಸೆಂಬರ್ 24 ರಂದು ಖಚಿತ ಮಾಹಿತಿಯ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಬ್ದಲ್ ಖಾದರ್ ಹಾಗೂ ಅವರ ತಂಡ ಉಮಾವತಿಯನ್ನು ಚೆರಿಯಪರಂಬು ನಾಪೋಕ್ಲು ಎಂಬಲ್ಲಿ ಪತ್ತೆ ಮಾಡಿದ್ದು ಆಕೆ ಬಾಲಕೃಷ್ಣ ಎಂಬವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಉಮಾವತಿಯವರನ್ನು ಮುಂದಿನ ತನಿಖೆಗಾಗಿ ಪುತ್ತೂರು ಪೋಲಿಸರಿಗೆ ಹಸ್ತಾಂತರಿಸಲಾಗಿದೆ.


Spread the love