ನಿಟ್ಟೂರು ಮಹಿಳಾ ನಿಲಯದಿಂದ ನಾಪತ್ತೆಯಾಗಿದ್ದ ಮಗು-ಮಹಿಳೆಯರು ಮತ್ಸ್ಯಾ ಗಂದಾ ರೈಲಿನಲ್ಲಿ ಪ್ರಯಾಣಿಸಿ ಮುಂಬಯಿ ಸೇರಿದ್ದಾರೆ
ಮುಂಬಯಿ: ಇತ್ತೀಚೆಗೆ ನಿಟ್ಟೂರು ಅಲ್ಲಿನ ಮಹಿಳಾ ನಿಲಯದಿಂದ ಇಬ್ಬರು ಮಹಿಳೆಯರು ಮತ್ತು ಮಗು ನಾಪತ್ತೆಯಾಗಿದ್ದು ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇವರು ಜೂ.26ನೇ ಸೋಮವಾರ ಕೊಂಕಣ್ ರೈಲ್ವೇಯ ಮತ್ಸಾ ್ಯಗಂಧಾ ರೈಲಿನಲ್ಲಿ ಪ್ರಯಾಣಿಸಿ ಮುಂಬಯಿ ಸೇರಿದ್ದಾರೆ ಎಂದು ಅವರನ್ನು ಪ್ರತ್ಯಕ್ಷವಾಗಿ ಕಂಡ ಭಯಂದರ್ ನಿವಾಸಿ, ಹೆಸರಾಂತ ಲೇಖಕಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ತಿಳಿಸಿದ್ದಾರೆ.
ಕಳೆದ ಸೋಮವಾರ ತಾನು ಇದೇ ಮತ್ಸಾ ್ಯಗಂಧಾ ರೈಲಿನಲ್ಲಿ ಮುಂಬಯಿಗೆ ಪ್ರಯಾಣಿಸುತ್ತಿದ್ದು ಬಾರ್ಕೂರು ನಿಲ್ದಾಣದಲ್ಲಿ ರೈಲು ಹತ್ತಿದ್ದೆ. ಆದರೆ ನನ್ನ ಟಿಕೇಟು ಮುರುಡೇಶ್ವದಿಂದ ಕಾಯ್ದಿರಿಸಲ್ಪಟ್ಟ ಕಾರಣ ಮುರುಡೇಶ್ವ ತನಕ ನಾನೂ ಸಾಮಾನ್ಯ ಬೋಗಿ (ಜನರಲ್ ಕೋಚ್)ನಲ್ಲಿ ಪ್ರಯಾಣಿಸಿದ್ದು ಈ ಇಬ್ಬರು ಮಹಿಳೆಯರು ಸುಶೀಲಾ, ರೂಪಾಲಿ ಮತ್ತು ರಾಜೇಶ್ (ಮಗು) ನನ್ನ ಮುಂದಿನ ಸೀಟುಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು ಎಂದು ಇಂದು ಪತ್ರಿಕಾ ವರದಿ ಓದಿದ ಲತಾ ಸಂತೋಷ್ ಶೆಟ್ಟಿ ಅವರು ಪತ್ರಕರ್ತ ರೋನ್ಸ್ ಬಂಟ್ವಾಳ್‍ಗೆ ತಿಳಿಸಿದ್ದಾರೆ.
ಕರ್ನಾಟಕದವರಂತೆ ಕಾಣದಿದ್ದ ಕಾರಣ ಅವರು ನಮ್ಮಲ್ಲಿ ಹೆಚ್ಚಾಗಿ ಮಾತನಾಡದೆ ತಮ್ಮಷ್ಟಕ್ಕೆ ತಾವಿದ್ದರೂ ನಾವು ಮಾನವೀಯತೆಯ ದೃಷ್ಠಿಯಿಂದ ಮಾತನಾಡಿಸಿದಾಗ ನಾವು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಬಂದಿದ್ದು ಈಕೆಗೆ ಯಾರೂ ಪೆÇೀಷಕರಿಲ್ಲದ ಕಾರಣ ನಮ್ಮೂರಿಗೆ ಕರೆದೊಯ್ಯುತ್ತಿದ್ದೇನೆ ಎಂದಷ್ಟೇ ಸುಶೀಲಾ ಹೇಳಿದ್ದರು. ಅವರು ಅನುಮಾನಸ್ಪದವಾಗಿ ತೋರದೆ ನಿಸ್ಸಾರವಾಗಿದ್ದ ಕಾರಣ ನಾವಾಗಿಯೂ ಅವರಲ್ಲಿ ಹೆಚ್ಚೇನೂ ಕೇಳಲು ಹೋಗಿಲ್ಲ. ಆದುರಿಂದ ಯಾವ ಊರು ಇತ್ಯಾದಿಗಳ ಬಗ್ಗೆ ಅವರೂ ತಿಳಿಸಿಲ್ಲ. ಮೂಕಿ ಎಂಬತ್ತೆ ಕಾಣುತ್ತಿದ್ದ ರೂಪಾಲಿ ತನ್ನ ಕೈಯಲ್ಲಿ ಮಗುವನ್ನು ಎತ್ತಿಕೊಂಡಿದ್ದಳು ಎಂದು ಲತಾ ಶೆಟ್ಟಿ ತಿಳಿಸಿದ್ದಾರೆ.
ಸುಶೀಲಾ ಅವರು ಒಂದು ಶಬ್ದವೂ ಮಾತನಾಡದಿದ್ದರೂ ಮೂಗಿಯಂತೆ ಕಾಣುತ್ತಿರಲಿಲ್ಲ. ಆದರೆ ರೂಪಾಲಿ ಮಾತನಾಡಿ ಈಕೆಗೆ ಯಾರೂ ನೋಡುವವರಿಲ್ಲ. ಆದುದರಿಂದ ನಾನು ನನ್ನ ಮನೆಯಲ್ಲಿರಿಸಿ ಅವರ ಪೆÇೀಷಣೆ ಮಾಡುವುದಾಗಿ ಯೋಚಿಸಿ ತನ್ನ ಜೊತೆ ನಮ್ಮೂರಿಗೆ ಕರೆದೊಯ್ಯುತ್ತಿದ್ದೇನೆ ಎಂದು ರೈಲ್ವೇ ಕ್ಯಾಂಟೀನ್ ಪೂರೈಕೆದಾರ ರಾಘವೇಂದ್ರ ಕುಂದಾಪುರ ಅವರಲ್ಲಿ ತಿಳಿಸಿರುವುದರ ಬಗ್ಗೆ ಲತಾ ಶೆಟ್ಟಿ ಹೇಳಿರುವರು.
ಮುರುಡೇಶ್ವದಿಂದ ನಾನು ರಾತ್ರಿವಿಡೀ ನನ್ನ ಕಾಯ್ದಿರಿಸಿದ ಬೋಗಿ ಸಂಖ್ಯೆ ಎಸ್9ರಲ್ಲಿ ಪ್ರಯಾಣಿಸಿ ಬೆಳಿಗ್ಗೆ ಥಾಣೆ ನಿಲ್ದಾಣದಲ್ಲಿ ಇಳಿಯುತ್ತಿರುವಾಗಲೂ ಅವರು ಅದೇ ಜನರಲ್ ಕೋಚ್‍ನಲ್ಲಿದ್ದು ಕುರ್ಲಾ ಟರ್ಮಿನಲ್ಸ್‍ನತ್ತ ಸಾಗಿದ್ದಾರೆ. ಮತ್ತೆ ತನ್ನ ಪ್ರಯಾಣವನ್ನು ಕಡೆ ಬೆಳೆಸಿದ್ದಾರೆ ಎಂದು ತಿಳಿಯದು ಎಂದು ಪ್ರತ್ಯಕ್ಷದರ್ಶಿಯಾಗಿದ್ದ ಮುದ್ದುಮನೆ ಲತಾ ತಿಳಿಸಿದ್ದಾರೆ.
ವರದಿ : ರೋನ್ಸ್ ಬಂಟ್ವಾಳ್