ನಿತ್ಯ ಜೀವನದಲ್ಲಿ ದಾರ್ಶನಿಕರ ತತ್ವೋಪದೇಶ ಅಳವಡಿಸಿಕೊಳ್ಳಬೇಕು : ಕೊಲ್ಲಾಡಿ ಬಾಲಕೃಷ್ಣ ರೈ

Spread the love

ನಿತ್ಯ ಜೀವನದಲ್ಲಿ ದಾರ್ಶನಿಕರ ತತ್ವೋಪದೇಶ ಅಳವಡಿಸಿಕೊಳ್ಳಬೇಕು : ಕೊಲ್ಲಾಡಿ ಬಾಲಕೃಷ್ಣ ರೈ

ಮಂಗಳೂರು: ಬೆಳಗ್ಗೆ ಎದ್ದಾಗ ನಾವು ಮೊದಲು ಪ್ರಾರ್ಥನೆ ಮಾಡುವುದು ದೇವರಿಗೆ. ಅದೇ ರೀತಿ ದೇಶಕ್ಕೆ, ನಾಡಿಗೆ, ಮಣ್ಣಿಗೆ ಕೊಡುಗೆ ನೀಡಿದ ಮಹನೀಯರನ್ನೂ ನಾವು ಸ್ಮರಿಸುತ್ತೇವೆ. ಅಂಥವರ ಸಾಲಿಗೆ ಸೇರಿದವರು ಶ್ರೇಷ್ಠ ಶಿಕ್ಷಕ ಡಾ. ಸರ್ವಪಳ್ಳಿ ರಾಧಾಕೃಷ್ಣನ್. ಅವರು ಮಹೋನ್ನತ ಸ್ಥಾನವನ್ನು ಪಡೆದು ಈ ಮಣ್ಣಿನ ಋಣವನ್ನು ಸಲ್ಲಿಸಿ ನಮಗೆ ಆದರ್ಶ ಪ್ರಾಯರಾಗಿದ್ದಾರೆ. ಅವರು ಕೊಟ್ಟ ಸೇವೆ ನಮಗೆ ಸಂದೇಶಗಳಾಗಿದೆ. ಆದ್ದರಿಂದ ನಾವು ನಮ್ಮ ನಿತ್ಯ ಜೀವನದಲ್ಲಿ ಮಹಾನ್ ದಾರ್ಶನಿಕರ ತತ್ವೋಪದೇಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಮಾನವ ಹಕ್ಕುಗಳ ಒಕ್ಕೂಟದ ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ ಹಿತ ನುಡಿದರು.

ಟೀಮ್ ವೀರಾಂಜನೇಯ ಫರಂಗಿಪೇಟೆ, ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ, ಕರ್ನಾಟಕ ಇದರ ಸಹಭಾಗಿತ್ವದೊಂದಿಗೆ ಫರಂಗಿಪೇಟೆಯ ಶ್ರೀರಾಮ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪುಸ್ತಕ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಟೀಮ್ ವೀರಾಂಜನೇಯ ತಂಡದ ಸದಸ್ಯರು, ಇಂದು ಶಿಕ್ಷಕರನ್ನು ಸ್ಮರಿಸುವ ಜೊತೆಗೆ ತಾವು ಕಲಿತ ಶಾಲೆಗೆ, ತಮ್ಮ ಸಮಾಜಕ್ಕೆ ಋಣ ಸಂದಾಯ ಮಾಡುವ ಕೆಲಸವನ್ನು ಮಾಡಿರುವುದಕ್ಕೆ ಅವರು ಸಂಘಟನೆಯ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.

ಮುಖ್ಯ ಅತಿಥಿಗಳಾಗಿ ಸೂರಜ್ ಇನ್‌ಸ್ಟಿಟ್ಯೂಟ್‌ನ ಸಂಚಾಲಕಿ ಹೇಮಲತಾ ರೇವಣ್ಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ ಕೆ ಜಯರಾಮ ಶೇಖ, ಶಾಲಾ ಕರೆಸ್ಪಾಂಡೆಂಟ್ ಗೋವಿಂದ್ ಶೆಣೈ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾ, ಟೀಮ್ ವೀರಾಂಜನೇಯ ಅಧ್ಯಕ್ಷ ಪ್ರಮೋದ್ ಕರ್ಕೇರ, ಕಾರ್ಯದರ್ಶಿ ಮನ್ವಿತ್ ಕರ್ಕೇರ ಉಪಸ್ಥಿತರಿದ್ದರು.

ದೇವರ ಸ್ಥುತಿ ಮೂಲಕ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಸುಮಾರು ೨೦೦ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಟೀಮ್ ವೀರಾಂಜನೇಯದ ಮನ್ವಿತ್ ಪ್ರಸ್ತಾವಿಸಿ, ಕೆ ಆರ್ ದೇವದಾಸ್ ನಿರೂಪಿಸಿದರು.


Spread the love