ನಿವೃತ್ತ ಪವನಶಾಸ್ತ್ರಜ್ಞ ಜಿ. ಶ್ರೀನಿವಾಸನ್ ನಿಧನ
ಮಂಗಳೂರು : ಬೆಜೈ-ಕಾಪಿಕಾಡ್ ನಿವಾಸಿ, ಹಿರಿಯ ನಿವೃತ್ತ ಪವನಶಾಸ್ತ್ರಜ್ಞ ಜಿ. ಶ್ರೀನಿವಾಸನ್ (78) ಅವರು ಸ್ವಗೃಹದಲ್ಲಿ ನಿಧನರಾದರು. ಅವರು ಸ್ವಲ್ಪ ಸಮಯದಿಂದ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿದ್ದರು. ಇವರ ಪತ್ನಿ ರುಕ್ಮಿಣಿ, ಇಬ್ಬರು ಪುತ್ರರು, ಸೊಸೆಯಂದಿರು, ಮತ್ತು ಮೂವರು ಪುಟ್ಟ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಅವರ ಹಿರಿಯ ಮಗ ಪತ್ರಕರ್ತ ನಂದಗೋಪಾಲ್ ಅವರು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾದ ವರದಿಗಾರರಾಗಿದ್ದರು. ಅವರು ಪ್ರಸ್ತುತ ನಗರದಲ್ಲಿ ಎನ್ಜಿಒ, ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ನಡೆಸುತ್ತಿದ್ದಾರೆ. ಅವರ ಕಿರಿಯ ಮಗ ಕಾರ್ತಿಕೇಯನ್ ಹುಬ್ಬಳ್ಳಿಯಲ್ಲಿ ವಾಣಿಜ್ಯೋದ್ಯಮಿ.
ಜಿ.ಶ್ರೀನಿವಾಸನ್ ಲಕ್ಷದ್ವೀಪ ಮತ್ತು ಕೊಲ್ಕತ್ತಾ ಸೇರಿದಂತೆ ದೇಶಾದ್ಯಂತ ಮೂರು ದಶಕಗಳಿಂದ ಭಾರತೀಯ ಮೆಟರೊಲಾಜಿಕಲ್ ಇಲಾಖೆಯಲ್ಲಿ ವಿವಿಧ ಸಾಮರ್ಥ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ರೊಟೇರಿಯನ್‍ರಾಗಿದ್ದ ಅವರು ಐದು ದಶಕಕ್ಕೂ ಹೆಚ್ಚು ಕಾಲ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ಮಿಕ ವಲಯಗಳಲ್ಲಿ ಸಕ್ರಿಯರಾಗಿದ್ದರು. ಅವರು ಪ್ರತಿಭಾನ್ವಿತ ರಂಗಕಲೆ ಕಲಾವಿದರಾಗಿದ್ದರು; 60ರ ದಶಕದಲ್ಲಿ ಮುಂಬೈಯಲ್ಲಿ ಮತ್ತು ಬೆಂಗಳೂರಿನಲ್ಲಿ ಕನ್ನಡ ಕಲಾ ಕೇಂದ್ರವನ್ನು ಸ್ಥಾಪಿಸಲು ಶ್ರಮಿಸ್ತಿದ್ದರು.