ನೀರು ಸರಬರಾಜಿನ ಅವ್ಯವಸ್ಥೆ ಬಿಜೆಪಿ ಪ್ರತಿಭಟನೆ ನಿರ್ಧಾರ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವನ್ನುಂಟು ಮಾಡಿ ವಾರದಲ್ಲಿ ಮೂರು ದಿನ ನೀರು ಪೂರೈಕೆ ಮಾಡದೆ ಎರಡು ದಿನ ನೀರು ಸರಬರಾಜು ಮಾಡಿ ಮೇಯರ್ ನವರು ಮ.ನ. ಪಾಲಿಕೆಯ ಸಧಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕುಂಟು ನೆಪ ಮಾಡಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡು ಸರ್ವಾಧಿಕಾರಿ ದೋರಣೆಯನ್ನು ಮಾಡಿದ್ದಾರೆ. ಮಹಾನಗರ ಪಾಲಿಕೆಯ ಅಧಿಕಾರಿಗಳ ಹೇಳಿಕೆಯ ಪ್ರಕಾರ ತುಂಬೆ ವೆಂಟೆಂಡ್ ಡ್ಯಾಂ ನಲ್ಲಿ 15 1/2 ಅಡಿ ನೀರು, ಎಅರ್ಅರ್ ನಲ್ಲಿ 18 ಮೀಟರ್ ನೀರು ಹಾಗೂ ನೆಕ್ಕಿಲಾಡಿ ಡ್ಯಾಂ ನಲ್ಲಿ ನೀರು ತುಂಬಿದ್ದರೂ ಕೂಡ ಮೇಯರ್ ರವರು ಮ.ನ.ಪಾ ಸಧಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತೆಗೆದುಕೊಂಡ ನಿರ್ಣಯವು ಜನವಿರೋಧಿ ಹಾಗೂ ಜನನೀತಿವಿರೋದಿಯಾಗಿರುತ್ತದೆ. ಮತ್ತು ಕೈಗಾರಿಕಾ ಲಾಬಿಗೆ ಬೋರ್ವೆಲ್ ಮತ್ತು ಖಾಸಗಿ ನೀರು ಸರಬರಾಜು ಮಾಡುವವರ ಲಾಭಿಗೆ ಮಣಿದು ಈ ನಿರ್ದಾರವನ್ನು ತೆಗೆದುಕೊಳ್ಳಲಾಯಿತೋ ಎಂಬ ಸಂಶಯಕ್ಕೆ ಕಾರಣವಾಗಿದೆ.
ಉದ್ದಿಮೆ ಪರವಾನಿಗೆಯೊಂದಿಗೆ ಘನತ್ಯಾಜ ವಿಲೇವಾರಿ ಶುಲ್ಕವನ್ನು ನಿಗಧಿ ಮಾಡಿರುವುದು ಕೂಡಾ ಏಕ ಪಕ್ಷೀಯ ಮತ್ತು ಅವೈಜ್ಣಾನಿಕವೂ ಆಗಿರುತ್ತದೆ. ಇದರಿಂದ ಚಿಕ್ಕ ಪುಟ್ಟ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುವಂತಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳ ಅಬ್ಬರ, ಸೆಲ್ ಮಾರ್ಕೆಟಿಂಗ್ , ಬೃಹತ್ ಮಾಲ್ ಗಳ ವಿವಿಧ ಬಂಡವಾಳಶಾಹಿಗಳಿಂದ ತೀವ್ರ ಸ್ಪರ್ದೆಯನ್ನು ಎದುರಿಸುತ್ತಿರುವುದು ಬಂದುದಾದರೆ ವರ್ಷದಿಂದ ವರ್ಷಕ್ಕೆ ಏರುತ್ತಿರುವ ಬಾಡಿಗೆ, ವಿದ್ಯುಚಕ್ತಿ ಬಿಲ್ ಮತ್ತು ಕುಸಿಯುತ್ತಿರುವ ವ್ಯಾಪಾರ ಇದರಿಂದ ಕಂಗೆಟ್ಟ ವ್ಯಾಪಾರಸ್ಥರನ್ನು ಮ.ನ.ಪಾದ ಘನ ತ್ಯಾಜ ಶುಲ್ಕ ಮತ್ತು ಉದ್ದ್ದಿಮೆ ಪರವಾನಿಗೆ ಏರಿಕೆ ಇತ್ಯಾದಿಯಿಂದ ವ್ಯಾಪಾರಸ್ಥರು ಬೀದಿಪಾಲಾಗುವಂತೆ ಮಾಡಲು ಹೊರಟಿದೆ.
ಸಾಂಪ್ರಾದಾಯಿಕ ವ್ಯಾಪಾರಸ್ಥರು ಜೀವನ ನಿರ್ವಹಿಸಲು ಕಷ್ಟ ಪಡುತ್ತ್ತಿರುವ ಈ ಸಂದರ್ಭದಲ್ಲಿ ಪಾಲಿಕೆಯ ಆಡಳಿತ ಉದ್ದಿಮೆ ಪರವಾನಿಗೆ ಶುಲ್ಕದೊಂದಿಗೆ ದೊಡ್ಡ ಪ್ರಮಾಣದಲ್ಲಿ ಘನತ್ಯಾಜ ವಿಲೇವಾರಿ ಶುಲ್ಕವನ್ನು ನಿಗದಿ ಮಾಡಿರುವುದರಿಂದ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಮ.ನ.ಪಾಲಿಕೆಯ ಸಾರ್ವಜನಿಕ ಮತ್ತು ಬಡಜನ ವಿರೋದಿ ನೀತಿಯನ್ನು ವಿರೋಧಿಸಿ ಬಾ.ಜ.ಪ ಮಂಗಳೂರು ನಗದ ದಕ್ಷಿಣ ಮತ್ತು ನಗರ ಉತ್ತರ ವಿಧಾನಸಭಾ ಸಮಿತಿಗಳ ನೇತ್ರತ್ವದಲ್ಲಿ ಈ ಕೆಳಗಿನಂತೆ ಮಹಾನಗರ ಪಾಲಿಕೆಯಾದಿಯಂತೆ ಪ್ರತಿಭಟನೆಯನ್ನು ನಡೆಸಲು ನಿರ್ದರಿಸಿದೆ.
ಮಂಗಳೂರು ಉತ್ತರದ ವತಿಯಿಂದ ದಿನಾಂಕ 05.04.17 ಸುರತ್ಕಲ್ ಜಂಕ್ಷನ್ನಲ್ಲಿ ಬೆಳಿಗ್ಗೆ 10 ಗಂಟೆ ಮತ್ತು 07.04.17 ರಂದು ಶುಕ್ರವಾರ ಕಾವೂರು ಜಂಕ್ಷನ್ ನಲ್ಲಿ ಬೆಳಿಗ್ಗೆ 10 ಗಂಟೆಗೆ, ಮ.ನ.ದಕ್ಷಿಣದ ಪಶ್ಚಿಮ ಮತ್ತು ಉತ್ತರ ಶಕ್ತಿಕೇಂದ್ರದ ವತಿಯಿಂದ ದಿನಾಂಕ 06.04.17ರಂದು ಅರ್.ಟಿ.ಓ ಜಂಕ್ಷನ್ ಬಳಿಬೆಳಿಗ್ಗೆ 10 ಗಂಟೆ ಹಾಗೂ ಮ.ನ ದಕ್ಷಿಣದ ಪೂರ್ವ ಮತ್ತು ದಕ್ಷಿಣ ಶಕ್ತಿಕೇಂದ್ರದ ವತಿಯಿಂದ 07.04.17 ರಂದು ಶುಕ್ರವಾರ ಕದ್ರಿ ಮಲ್ಲಿಕಟ್ಟೆ ಜಂಕ್ಷನ್ ಬೆಳಿಗ್ಗೆ 10 ಗಂಟೆಬುಧವಾರ ಮ.ನ.ಪಾಲಿಕೆಯ ಎದುರು ಬೆಳಿಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಾಜಿ ವಿಧಾನ ಪರಿಷತ್ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಧಸ್ಯರಾದ ಮೋನಪ್ಪ ಭಂಡಾರಿ ವಿನಂತಿಸಿದ್ದಾರೆ.