Spread the love
ನೇಜಾರು ಹತ್ಯಾಕಾಂಡ ಭೇದಿಸಿದ ಪೊಲೀಸರು ಅಭಿನಂದನಾರ್ಹರು: ಮಂಜುನಾಥ ಭಂಡಾರಿ
ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಉಡುಪಿ ಜಿಲ್ಲೆಯ ನೇಜಾರುವಿನ ತಾಯಿ ಮಕ್ಕಳ ಸಮೇತ ನಾಲ್ಕು ಜನರ ಹತ್ಯಾ ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ಅತ್ಯಂತ ಚಾಣಾಕ್ಷತನದಿಂದ ಭೇದಿಸಿ ಆರೋಪಿಯನ್ನು ಬಂಧಿಸಿದ ಉಡುಪಿ ಜಿಲ್ಲಾ ಪೋಲಿಸರು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ಅಭಿನಂದಿಸಿದ್ದಾರೆ.
ಕುಟುಂಬದ ನಾಲ್ಕು ಜನರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರುವ ನೇಜಾರು ಕುಟುಂಬದ ಸದಸ್ಯರನ್ನು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ಭೇಟಿಯಾಗಿ ಸಾಂತ್ವಾನ ಹೇಳಿದ್ದರು ಹಾಗೂ ಸ್ಥಳದಿಂದಲೆ ದೂರವಾಣಿ ಮೂಲಕ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಸಂಪರ್ಕಿಸಿ ದುಃಖತಪ್ತ ಕುಟುಂಬ ಸದಸ್ಯರೊಂದಿಗೆ ಮಾತನಾಡಿಸಿ ಕುಟುಂಬ ಸದಸ್ಯರಿಗೆ ದೈರ್ಯ ತುಂಬಿದ್ದರು.
Spread the love