ನೇಣು ಬಿಗಿದು ನೇತಾಡುತ್ತಿದ್ದ ತಂಗಿ, ತಮಾಷೆ ಅಂತ ಎಣಿಸಿ ಫೋಟೊ ತೆಗೆದ ಅಕ್ಕ!
ಮೈಸೂರು: ಎಂಟೆಕ್ ಪದವೀಧರೆಯೋರ್ವಳು ತಾಯಿ ಹಾಗೂ ಅಕ್ಕನನ್ನು ಹೊರಗಡೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ನಗರದ ಎನ್. ಆರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಮೈಸೂರಿನ ಮಹಾನಗರ ಪಾಲಿಕೆಯ ಆಶ್ರಯ ಯೋಜನೆಯ ಯೋಜನಾಧಿಕಾರಿ ಕುಮಾರಸ್ವಾಮಿ ಎಂಬುವರ ಮಗಳಾದ ರಮ್ಯ (25) ಎಂದು ಗುರುತಿಸಲಾಗಿದೆ.
ರಮ್ಯಾ, ಎಂಟೆಕ್ ಪದವೀಧರೆಯಾಗಿದ್ದು, ಕೆಲಸ ಹುಡುಕುತ್ತಿದ್ದ ಈಕೆ ಮೊನ್ನೆ ನಡೆದ ಪಿಡಿಒ ಪರೀಕ್ಷೆ ಸಹ ಬರೆದಿದ್ದಳು. ಪರೀಕ್ಷೆ ಚೆನ್ನಾಗಿ ಮಾಡಿರುವುದಾಗಿ ತಂದೆಯ ಮುಂದೆ ಹೇಳಿಕೊಂಡಿದ್ದಳು. ಆದರೆ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಇಲ್ಲಿಯ ಗಾಂಧಿ ನಗರದಲ್ಲಿರುವ ಮನೆಯಲ್ಲಿ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿದ್ದ ಅಕ್ಕ ಹಾಗೂ ತಂಗಿಯನ್ನು ಹೊರ ಕಳುಹಿಸಿ, ಅವರು ಹೊರ ಹೋಗುವ ಮುನ್ನ ಮನೆಯ ಬಾಗಿಲು ಹಾಕಿಕೊಂಡು ಹೋಗಿ ಎಂದು ತಾಯಿಗೆ ತಿಳಿಸಿದ್ದಳಂತೆ. ಮಾರುಕಟ್ಟೆಯಿಂದ ಮನೆಗೆ ಬಂದ ಅಕ್ಕ ಹಾಗೂ ತಾಯಿ ರಮ್ಯಾಳ ರೂಮ್‌ಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ರಮ್ಯಾಳ ದೇಹ ಪತ್ತೆಯಾಗಿದೆ.
ತಮ್ಮನ್ನು ಕಾಡಿಸಲು ಈ ರೀತಿ ಮಾಡುತ್ತಿದ್ದಾಳೆ ಎಂದು ತಿಳಿದ ಅಕ್ಕ ಈ ರೀತಿ ಚೆನ್ನಾಗಿ ಕಾಣುತ್ತಿಯಾ ಎಂದು ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾಳೆ. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡದ ರಮ್ಯಾ ದೇಹವನ್ನ ಮುಟ್ಟು ನೋಡಿದಾಗ ಆಕೆ ನಿಜವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೊತ್ತಾಗಿದೆ.
ಕೂಡಲೇ ಸುತ್ತಮುತ್ತಲ ಜನರ ಸಹಾಯದೊಂದಿಗೆ ಆಕೆಯನ್ನ ಆಸ್ಪತ್ರೆಗೆ ಸೇರಿಸಿದಾಗ ಆಗಲೇ ವೈದ್ಯರು ರಮ್ಯಾ ಮರಣ ಹೊಂದಿದ್ದಾರೆ ಎಂದು ದೃಢಪಡಿಸಿದ್ದಾರೆ.
ತಾಯಿ ಮತ್ತು ಅಕ್ಕನನ್ನ ಹೆದರಿಸಲು ಹೋಗಿ ಆಪಾಯ ಮಾಡಿಕೊಂಡಳಾ ಅಥವಾ ಪ್ರೀತಿ ವಿಚಾರವನ್ನ ಮುಚ್ಚಿಟ್ಟು ಆತ್ನಹತ್ಯೆ ಮಾಡಿಕೊಂಡಿದ್ದಾಳಾ ಎಂದು ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಸಹಜ ಸಾವು ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.