ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನ; ವ್ಯಕ್ತಿಯ ರಕ್ಷಣೆ
ಮಂಗಳೂರು: ನೇತ್ರಾವತಿ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಪ್ರಯತ್ನಿಸಿ ಮಧ್ಯ ವಯಸ್ಕ ವ್ಯಕ್ತಿಯೋರ್ವರನ್ನು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪಡೀಲು ನಿವಾಸಿ ದಯಾನಂದ ಎಂದು ಗುರುತಿಸಲಾಗಿದೆ. ಜೆಪ್ಪುವಿನ ಬಶೀರ್ ಎಂಬ ವ್ಯಕ್ತಿ ದಯಾನಂದರನ್ನು ರಕ್ಷಿಸಿದ್ದಾರೆ.
ಬಶೀರ್ ಅವರು ತನ್ನ ದ್ವಿಚಕ್ರ ವಾಹನದಲ್ಲಿ ಉಳ್ಳಾಲ ಕಡೆ ತೆರಳುತ್ತಿದ್ದ ವೇಳೆ ನೇತ್ರಾವತಿ ಸೇತುವೆಯ ಮೇಲೆ ವ್ಯಕ್ತಿಯೋರ್ವರು ಸೇತುವೆಯಿಂದ ಹಾರಿ ಆತ್ಮಹತ್ಯಗೆ ಯತ್ನಿಸುತ್ತಿರುವುದನ್ನು ಕಂಡು ಕೂಡಲೇ ಹೋಗಿ ಆತನ್ನನ್ನು ತಡೆದು ರಕ್ಷಿಸಲಾಗಿದೆ.
ಬಳಿಕ ಪೋಲಿಸರಿಗೆ ಮಾಹಿತಿ ನೀಡಿದ್ದು, ತನ್ನ ಮಕ್ಕಳು ಮುಂಬೈನಲ್ಲಿ ವಾಸವಾಗಿದ್ದು, ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿರಲು ಸಾಧ್ಯವಿಲ್ಲದೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ಪೋಲಿಸರಲ್ಲಿ ಹೇಳಿಕೊಂಡಿದ್ದಾರೆ.
ದಯಾನಂದರವರನ್ನು ಬಳಿಕ ಉಳ್ಳಾಲ ಪೋಲಿಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.