ನೋವು, ನಲಿವು ಕಾವ್ಯಕ್ಕೆ ಪ್ರೇರಣೆ:ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು
ಉಡುಪಿ: ಜಗತ್ತು, ಸೌಂದರ್ಯಕ್ಕೆ ಸ್ಪಂದಿಸುವ ಮನಸ್ಸು, ಬದುಕಿನ ನೋವು, ನಲಿವು, ಹಂಬಲ ಇವೆಲ್ಲವೂ ಕಾವ್ಯಕ್ಕೆ ಪ್ರೇರಣೆ ಎಂದು ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ‘ಕಾವ್ಯದ ಒಂದು ಮುಖ ಚೆಂದವಾಗಿದ್ದರೆ, ಮತ್ತೊಂದು ಮುಖ ನೊಂದು ಬೆಂದಿರುವಂಥದ್ದು. ಮನುಷ್ಯತ್ವ, ಸೌಂದರ್ಯ ಹಾಗೂ ಅಮೂರ್ತದ ಶೋಧನೆ ಕಾವ್ಯದಲ್ಲಿ ಅಡಗಿರುತ್ತದೆ’ ಎಂದು ಹೇಳಿದರು.
ಭಾರತೀಯ ಸಂಸ್ಕೃತಿ ಬಹುತ್ವದ ಮೇಲೆ ನಿಂತಿದೆ. ಕವಿಗಳು ವೈವಿಧ್ಯ ಮಯ ಅನುಭವಗಳನ್ನು ವಸ್ತುವ ನ್ನಾಗಿಟ್ಟುಕೊಂಡು ಸುಂದರ ಕವನ ಗಳನ್ನು ರಚಿಸಿದ್ದಾರೆ. ಅವರ ಪ್ರಯತ್ನ ನಿರಂತರವಾಗಿರಲಿ. ಹೆಚ್ಚೆಚ್ಚು ಕಾವ್ಯಗಳು ಮೂಡಿಬರಲಿ ಎಂದು ಆಶಿಸಿದರು.
ಕವಿಗೋಷ್ಠಿಯಲ್ಲಿ ರಾಜೇಶ್ ಭಟ್ ಪಣಿಯಾಡಿ, ಶಿಲ್ಪಾ ಜೋಷಿ, ಸುಹಾನ್ ಸಾಸ್ತಾನ, ರತ್ನಾವತಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಪ್ರೇಮಾ, ವಿಷ್ಣು ಭಟ್ ಹೊಸಮನೆ, ಸಂಗೀತ ಜಾನ್ಸನ್ ಅವರು ಕವನ ವಾಚಿಸಿದರು.
ಪತ್ರಕರ್ತ ದೀಪ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕುರುವತ್ತಿಗೌಡ ನಿರ್ವಹಿಸಿದರು. ಡಾ.ಸುಚರಿತಾ ರಾಜೇಂದ್ರ ವಂದಿಸಿದರು.