ನ್ಯಾಯ ಬೆಲೆ ಅಂಗಡಿಗೆ ಶಾಸಕ ಐವನ್ ಡಿ ಸೋಜಾ ದಿಢೀರ್ ಭೇಟಿ
ಮಂಗಳೂರು: ದ. ಕ ಜಿಲ್ಲೆಯ ಬಿಜಾರೊ ನ್ಯಾಯ ಬೆಲೆ ಅಂಗಡಿಗೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ದಿಢೀರನೆ ಭೇಟಿ ನೀಡಿ ಪಡಿತರ ಸಾಮಾಗ್ರಿಗಳ ಬಗ್ಗೆ ಚರ್ಚೆ ನಡೆಸಿದರು.
ಪ್ರತಿ ಕಾಡ್೯ದಾರರಿಗೆ ಕುಟುಂಬಯೊಂದಕ್ಕೆ 1 ಕೆ. ಜಿ ಬೆಳೆ, 4 ಕೆ. ಜಿ. ಗೋಧಿ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ 10 ಕೆ. ಜಿ ಅಕ್ಕಿಯಂತೆ ವಿತರಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ಕಾಡ್೯ದಾರರು ಮಾಸ್ಕ್ ಧರಸಿ ಸಾಮಾಜಿಕ ಅಂತರ ಕಾಯ್ದು ಪಡಿತರ ಸಾಮಗ್ರಿಗಳನ್ನು ಪಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪರಿಶೀಲಿಸಿದ ನ್ಯಾಯ ಬೆಲೆ ಅಂಗಡಿಗಳಲ್ಲಿ ವ್ಯಕ್ತಿಯೊವ೯ನಿಗೆ ಒಂದು ಕುಟುಂಬಕ್ಕೆ 135 ಕೆ.ಜಿ ಅಕ್ಕಿ ಮತ್ತು ಇತರ ಸೌವಲತ್ತು ಸಿಗುವುದರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. .
ಅದೇ ರೀತಿ ತೊಡುರಿನಲ್ಲಿರುವ ಕಲ್ಲಮಣಪುರ ವ್ಯವಸಾಯ ಸಹಕಾರಿ ಸಂಘದ ನ್ಯಾಯ ಬೆಲೆ ಅಂಗಡಿಗೆ ಭೇಟಿ ಕೊಟ್ಟಾಗ ಅಂಗಡಿ ಮುಚ್ಚಿರುವುದು ಗಮನಕ್ಕೆ ಬಂದು ಈ ಬಗ್ಗೆ ಜಿಲ್ಲಾ ಆಹಾರ ಕೇಂದ್ರಕ್ಕೆ ಆದೇಶಿಸಲಾಯಿತು.
ಪಡಿತರ ವ್ಯವಸ್ಥೆಯನ್ನು ಎಲ್ಲಾ ಜನಗಳಿಗೆ ನೀಡಬೇಕೆಂದು ಮತ್ತು ಅದಕ್ಕೆ ಲಾಕ್ ಡೌನ್ ನಿಯಮದ ಸಮಯವನ್ನು ಪರಿಗಣಿಸಬಾರದೆಂದು ತಿಳಿಸಲಾಯಿತು. ಆದರೆ ಕೆಲವು ನ್ಯಾಯ ಬೆಲೆ ಅಂಗಡಿ ಮುಚ್ಚಿರುವುದರಿಂದ ಅಕ್ಕಿ ಇಲ್ಲದೆ ಗ್ರಾಹಕರಿಗೆ ತೊಂದರೆ ಆಗಿರುವುದು ಅಧಿಕಾರಗಳ ಗಮನಕ್ಕೆ ಬಂದು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು
Chadma veshadalli Ivan.