ನ್ಯಾಯದ ಮೇಲೆ ನಂಬಿಕೆಯಿದೆ, ರಾಜಕೀಯ ಒತ್ತಡಕ್ಕೆ ಮಣಿಯಲ್ಲ: ಡಿ.ಕೆ. ಶಿವಕುಮಾರ್

Spread the love

ನ್ಯಾಯದ ಮೇಲೆ ನಂಬಿಕೆಯಿದೆ, ರಾಜಕೀಯ ಒತ್ತಡಕ್ಕೆಕ್ಕೆ ಮಣಿಯಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಯಡಿಯೂರಪ್ಪ ನವರೆ ನಾನು ಓಡಿಹೋಗಲ್ಲ. ನಾನಗೆ ಯಾರ ಮೇಲೂ ಭಯ ಅಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನ ಕ್ರಸೆಂಟ್ ರಸ್ತೆಯ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನನ್ನ ವಿರುದ್ಧ ಯಾವುದೇ ಅರೆಸ್ಟ್ ವಾರಂಟ್ ಬಂದಿಲ್ಲ, ಇಡಿ ನೋಟಿಸ್ ಕೂಡ ಬಂದಿಲ್ಲ. ನನ್ನ ಸೋದರ ಡಿ.ಕೆ. ಸುರೇಶ್ ವಿರುದ್ಧ ನೋಟಿಸ್ ಬಂದಿತ್ತು, ಅದಕ್ಕೆ ಉತ್ತರ ನೀಡಿದ್ದೇವೆ. ಎಲ್ಲದರಲ್ಲೂ ರಾಜಕೀಯ ನಡೆಯುತ್ತಿದೆ. ಸರ್ಕಾರ ಬೀಳಿಸಲು ಸಾಕಷ್ಟು ಯತ್ನ ನಡೆಯುತ್ತಿದೆ. ಅದಕ್ಕೆ ಅವಕಾಶ ಇಲ್ಲ. ನಾನು ಏನೇ ಇದ್ದರೂ ಎದುರಿಸುತ್ತೇನೆ, ಹೆದರಲ್ಲ. ಗುಜರಾತ್ ಚುನಾವಣೆ ನಂತರ ನನ್ನ ವಿರುದ್ಧ ನಡೆಯುತ್ತಿರುವ ಬೆಳವಣಿಗೆ ಬೇಸರ ತಂದಿದೆ. ನನ್ನನ್ನು ಹಣಿಯಲು ಯತ್ನ ನಡೆಯುತ್ತಿದೆ ಎಂದರು.

ಬಿಜೆಪಿ ರಾಷ್ಟ್ರೀಯ ನಾಯಕ ಸಂಬಿತ್ ಪಾತ್ರಾ ಮಾಡಿದ ಆರೋಪಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕಿಲ್ಲ. ಡಿ.ಕೆ. ಶಿವಕುಮಾರ್ ಉತ್ತರ ನೀಡುತ್ತೇನೆ. ಶೇ. 100 ರಷ್ಟು ಸರ್ಕಾರ ಸುಭದ್ರವಾಗಿದೆ. ಮುಂದಿನ ಲೋಕಸಭೆ ಚುನಾವಣೆ ಕೂಡ ಒಟ್ಟಾಗಿ ಎದುರಿಸಿ ಗೆಲ್ಲುತ್ತೇವೆ ಎಂದರು.

ನಾನು ಹೆದರಲ್ಲ: ನನ್ನನ್ನು ಜೈಲಿಗೆ ಕಳಿಸುತ್ತೀರಾ, ಅದಕ್ಕೆ ನಾನು ಹೆದರಲ್ಲ. ಡೈರಿಗಳನ್ನು ಬಿಜೆಪಿಯವರೇ ಸೃಷ್ಟಿಸಿದ್ದಾರೆ. ಬರುತ್ತಿರುವ ಮಾಹಿತಿ, ಹೇಳಿಕೆಗಳು ಬಲವಂತವಾಗಿ ಹೇಳಿಕೆ ಕೊಡಿಸಲಾಗುತ್ತಿದೆ. ನೀವು ಬೇಕಾದರೆ ನನ್ನನ್ನು ನೇಣಿಗೇರಿಸಿ. ನಾನು ಎಲ್ಲಿಗೂ ಓಡಿಹೋಗಲ್ಲ. ನಿಮ್ಮ ಹಗಲುಗನಸು ನನಸಾಗುವುದಿಲ್ಲ. ನಮ್ಮ ಶಾಸಕರಿಗೆ ನೀವು ನೀಡಿದ ಆಮಿಷ, ಕೊಡಲಿದ್ದ ಮೊತ್ತ, ಸ್ಥಾನಮಾನದ ವಿವರವನ್ನು ಮುಂದಿನ ದಿನದಲ್ಲಿ ನೀಡುತ್ತೇನೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಬಿಡಲ್ಲ. ಇಲ್ಲೇ ಬರುತ್ತೇನೆ, ಇದ್ದು ನಮ್ಮ ಸಾಮರ್ಥ್ಯ ತೋರಿಸುತ್ತೇನೆ ಎಂದರು.

ಭಯಗೊಂಡು ನಾನು ಆಸ್ಪತ್ರೆಗೆ ಸೇರಿಲ್ಲ. ಯಾವುದೇ ಡೈರಿ ಸಕ್ರಮ ಅಲ್ಲ. ಬಿಜೆಪಿಯವರು ತಮ್ಮ ವಿರುದ್ಧ ಬಿಡುಗಡೆಯಾದ ಡೈರಿ ಬಗ್ಗೆ ವಿವರಿಸಲಿ. ನನಗೆ ಸಂಬಂಧಿಸಿದ 82 ತಾಣ, ವ್ಯಕ್ತಿಗಳ ಮೇಲೆ ಈಡಿ ದಾಳಿ ನಡೆದಿದೆ. ಒಂದೂವರೆ ವರ್ಷವಾಗಿದೆ, ಈಗ ನನ್ನನ್ನು ಬಂಧಿಸಲಾಗುತ್ತದೆ ಎಂದು ಹೆದರಿ ಆಸ್ಪತ್ರೆ ಸೇರಿಲ್ಲ. ನಾನು ಬೆದರಿಲ್ಲ. ನನಗೆ ಹೆದರಿಕೆ ಇಲ್ಲ. ಇದು ಕೇವಲ ರಾಜಕೀಯ ನಾಟಕ. ಬಿಜೆಪಿ ನಾಯಕರು ತಪ್ಪು ಮಾಡಿಲ್ಲವೇ? ನನ್ನ ಬಳಿ ಕೂಡ ಸಾಕಷ್ಟು ಮಾಹಿತಿ ಇದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ.

ಬಿಜೆಪಿ ಸೇರಲ್ಲ: ನಾನಾಗಲಿ, ನನ್ನ ಯಾವೊಬ್ಬ ಸ್ನೇಹಿತರಾಗಲಿ ಬಿಜೆಪಿ ಸೇರಲ್ಲ. ಬಿಜೆಪಿಗೆ ಸರ್ಕಾರ ರಚಿಸಲು ಬಿಡಲ್ಲ. ರಾಜ್ಯದಲ್ಲಿ ಸರ್ಕಾರ ರಚಿಸುವುದು ಯಡಿಯೂರಪ್ಪ ಹಗಲುಗನಸು.

41 ಲಕ್ಷ ರೂ ನನ್ನ ಮನೆಯಲ್ಲಿ ಸಿಕ್ಕಿದೆ. ಅದಕ್ಕೆ ದಾಖಲೆ ನೀಡಿದ್ದಾರೆ. ನನ್ನ ಸ್ನೇಹಿತನ ಬಳಿ 1 ಕೋಟಿರೂ. ಸಿಕ್ಕಿತ್ತು.ನನ್ನ ಪ್ರತಿ ರೂಪಾಯಿಗೂ ದಾಖಲೆ ಇದೆ. ನಾನು ನೆಲದ ಕಾನೂನನ್ನು ಗೌರವಿಸುತ್ತೇನೆ. ಯಾವುದೇ ವಿಧದ ತನಿಖೆಗೆ ಸಿದ್ಧ. ಬಂಧಿಸಿದರೂ ಚಿಂತೆ ಇಲ್ಲ. ನಾನು ತಪ್ಪು, ಭ್ರಷ್ಟಾಚಾರ ಮಾಡಿಲ್ಲ. ನಾನು ತಪ್ಪು ಮಾಡಿದ್ದರೆ ಸಾಬೀತುಪಡಿಸಲಿ, ಶಿಕ್ಷೆ ಎದುರಿಸಲು ಸಿದ್ಧ ಎಂದರು.

ಗುಜರಾತ್ ಶಾಸಕರನ್ನು ಕರೆದುಕೊಂಡು ಬಂದು ರಕ್ಷಿಸಿದ್ದೇ ನನ್ನ ಮೇಲೆ ಬಿಜೆಪಿ ನಾಯಕರ ಕಣ್ಣು ಬಿತ್ತು. ಒಂದು ಕೆಲ ಶಾಸಕರನ್ನು ನಾನು ಬಿಟ್ಟುಕೊಟ್ಟಿದ್ದರೆ ನನಗೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ನಾನು ಪಕ್ಷಕ್ಕೆ ದ್ರೋಹ ಮಾಡುವವನಲ್ಲ. ಈಗಲೂ ನಾನು ಕೆಲ ವಿಚಾರಗಳಿಗೆ ರಾಜಿ ಯಾದರೆ ನನ್ನೆಲ್ಲಾ ಸಮಸ್ಯೆಗಳು ತೀರಿ ಹೋಗಲಿವೆ. ಆದರೆ ನಾನು ಆ ಪ್ರಾಮಾಣಿಕನಲ್ಲ ಪಕ್ಷ ನಿಷ್ಠೆಯನ್ನು ಎಂದಿಗೂ ಬಿಡುವುದಿಲ್ಲ ಎಂದು ವಿವರಿಸಿದರು.

ಆರೋಗ್ಯ ಸುಧಾರಿಸಿಲ್ಲ: ಆರೋಗ್ಯ ಚೆನ್ನಾಗಿಲ್ಲ. 40 ಸಾರಿ ಮೋಷನ್, 15 ಸಾರಿ ವಾಂತಿ ಮಾಡಿಕೊಂಡಿದ್ದೇನೆ. ದುರ್ಬಲವಾಗಿದ್ದೇನೆ. ಮತ್ತೆ ಆಸ್ಪತ್ರೆಗೆ ಹೋಗಬೇಕು. ಮಾಹಿತಿ ನೀಡುವ ಉದ್ದೇಶದಿಂದ ಬಂದಿದ್ದೇನೆ ಎಂದರು.

ಯಡಿಯೂರಪ್ಪನವರೇ ನಾನು ಹೇಡಿಯಲ್ಲ: ಯಡಿಯೂರಪ್ಪನವರೇ ನಿಮ್ಮ ಬೆದರಿಕೆ ತಂತ್ರಕ್ಕೆ ಹೆದರಿ ಓಡಿ ಹೋಗಲು ನಾನು ಹೇಡಿಯಲ್ಲ. ನಮ್ಮ ಶಾಸಕರು ನ ಸೆಳೆಯುವ ಯತ್ನ ನೀವು ಮಾಡಬಹುದು ಆದರೆ ಅವರ್ಯಾರೂ ನಿಮ್ಮ ಹಿಡಿತಕ್ಕೆ ಸಿಗಲು ಬಿಡುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಹೆದರಿಲ್ಲ. ಹೆದರಿ ಆಸ್ಪತ್ರೆ ಸೇರುವ ಜಾಯಮಾನ ನನ್ನದಲ್ಲ ಎಂದು ತಿಳಿಸಿದರು.


Spread the love