ಪತ್ನಿ ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣ: ಸೂಕ್ತ ತನಿಖೆಗೆ ಪತ್ನಿ ಪ್ರಿಯಾಂಕ ಕುಟುಂಬಿಕರ ಆಗ್ರಹ
ಮಂಗಳೂರಿನಲ್ಲಿ ಪತ್ನಿ ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಪತ್ನಿ ಪ್ರಿಯಾಂಕ ಕುಟುಂಬಿಕರು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪ್ರಿಯಾಂಕಾ ತಾಯಿ ಸಾವಿತ್ರಿ ಮಾಧ್ಯಮಗಳೊಂದಿಗೆ ಮಾತನಾಡಿ ಅಳಿಯ ಕಾರ್ತಿಕ್ ಗೆ ವಿದೇಶಕ್ಕೆ ಹೋಗುವಂತೆ ಅವರ ತಾಯಿ ತುಂಬಾ ಒತ್ತಾಯ ಮಾಡುತ್ತಿದ್ದು ಬೇರೆ ಮನೆ ಮಾಡಿ ಎಂದು ಮೂರು ನಾಲ್ಕು ಸಲ ಹೇಳಿದ್ದಾರೆ
ಗಂಡನ ಜೊತೆ ಅತ್ತೆ ಮಾವ ಮಾತು ಬಿಟ್ಟ ಮೇಲೆ ಇವಳು ಮಾತನಾಡ್ತ ಇರಲಿಲ್ಲ ನನ್ನ ಮಗಳು ಕೆಲಸಕ್ಕೆ ಹೋಗಲಿ ಎಂದು ಅವಳ ಅತ್ತೆ ಒತ್ತಾಯ ಮಾಡ್ತಿದ್ರು ಕಾರ್ತಿಕ್ ಅಕ್ಕ ಮತ್ತು ತಾಯಿ ನಮ್ಮ ಮುಖ ನೋಡಬಾರದು ಎಂದು ಕಾರ್ತಿಕ್ ಡೆತ್ ನೋಟ್ ಬರೆದಿದ್ದಾರೆ
ಮನೆಯಲ್ಲಿ ಅವರು ಜಗಳ ಮಾಡೋದಕ್ಕೆ ಸಾಧ್ಯವಿಲ್ಲ. ಮಗಳು ಗುರುವಾರ ಫೋನ್ ಮಾಡಿ ಮತನಾಡಿದ್ದಳು. ಡಿಸೆಂಬರ್ ನಲ್ಲಿ ಶಿವಮೊಗ್ಗಕ್ಕೆ ಬರೋದಾಗಿ ಹೇಳಿದ್ರು ಮಗು ನಾನು ಪಕ್ಷಿಕೆರೆಗೆ ಹೋಗಲ್ಲ ಎಂದು ಅಳುತ್ತಿತ್ತು ಎಂದು ಅವರು ಹೇಳಿದರು.
ಇದೇ ವೇಳೆ ಪ್ರಿಯಾಂಕ ಅವರ ದೊಡ್ಡಪ್ಪ ಉಮಾಶಂಕರ್ ಉಪಾಧ್ಯಯ ಮಾತನಾಡಿ ಕಾರ್ತಿಕ್ ಈ ರೀತಿಯ ಕೃತ್ಯ ಮಾಡುವಂತ ಕಟುಕ ಅಲ್ಲ ಯಾಕೆಂದರೆ ಮಗು ಮತ್ತು ಹೆಂಡತಿಯ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದ. ಆರ್ಥಿಕ ಸಂಕಷ್ಟ ಇದೆ ಎಂದು ಯಾರ ಬಳಿಯು ಹೇಳಿರಲಿಲ್ಲ ಅವರಿಗೆಆರ್ಥಿಕ ಸಂಕಷ್ಟ ಇತ್ತು ಎಂದು ಅನಿಸುತ್ತಿಲ್ಲ. ತಂದೆ ತಾಯಿ ಜೊತೆ ಕಾರ್ತಿಕ್ ತುಂಬಾ ವರ್ಷದಿಂದ ಮಾತನಾಡ್ತ ಇರಲಿಲ್ಲ. ಕಾರ್ತಿಕ್ ತುಂಬಾ ಒಳ್ಳೆ ಹುಡುಗನಾಗಿದ್ದು ಮನೆಯಲ್ಲಿ ಏನಾಗಿದೆ ಎಂದು ಗೊತ್ತಿಲ್ಲ. ಇವನೇ ಆತ್ಮಹತ್ಯೆ ಮಾಡಿಕೊಂಡ್ನಾ ಅಥವಾ ಬೇರೆಯವರು ರೈಲು ಹಳಿಗೆ ಹೊತ್ತು ಹಾಕಿದ್ರಾ ಎಂದು ಗೊತ್ತಿಲ್ಲ ಎಂದರು.
100% ಹೆಂಡ್ತಿ ಮಗುನಾ ಕಾರ್ತಿಕ್ ಕೊಲ್ಲೋದಕ್ಕೆ ಸಾಧ್ಯವಿಲ್ಲ ಇದರ ಹಿಂದೆ ಇನ್ನು ಯಾರೋ ಇದ್ದಾರೆ ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ಮಾಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಈ ಬಗ್ಗೆ ಕುಟುಂಬ ಹೋರಾಟ ಮಾಡಲಿದೆ ಎಂದರು.