ಪರಿಸರ ಜಾಗೃತಿಗಾಗಿ ಸಹ್ಯಾದ್ರಿ 10ಕೆ ರನ್ ಮಂಗಳೂರು
ಮಂಗಳೂರು: ಸ್ವಚ್ಛ – ಪರಿಸರ – ಹಸಿರು – ಉಸಿರು ಮತ್ತು ಆರೋಗ್ಯಕರ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಅಥ್ಲೆಟಿಕ್ ಅಸೋಸಿಯೇಷನ್ ಇವರು ಫಿಟ್ ಇಂಡಿಯಾ ಥೀಮ್ ಗೆ ಅನುಗುಣವಾಗಿ ‘ಸಹ್ಯಾದ್ರಿ 10ಕೆ ರನ್ ಮಂಗಳೂರು’ ಮೆಗಾ ಈವೆಂಟ್ 02-02-2020, ಬೆಳಿಗ್ಗೆ 6:00 ರಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಭಂಡಾರಿ ಫೌಂಡೇಶನ್ ಇವರು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ವಿಶ್ವವಿದ್ಯಾಲಯ, ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು
ಹಾಫ್ ಮ್ಯಾರಥಾನ್(21 ಕಿ.ಮೀ) ಹಾಗೂ 10 ಕೆ ರನ್(10 ಕಿ.ಮೀ) 16ರಿಂದ 45ವರ್ಷದವರಿಗಾಗಿ ಮುಕ್ತ ವಿಭಾಗದಲ್ಲಿ ಹಾಗೂ 46ರಿಂದ ಮೇಲಿನ ಹಿರಿಯ ವಿಭಾಗದಲ್ಲಿ ನಡೆಯಲಿದೆ. ಎರಡರಲ್ಲೂ ಮಹಿಳೆ-ಪುರುಷರಿಗೆ ಪ್ರತ್ಯೇಕ ವಿಭಾಗವಿದೆ. ಕಾಲೇಜು, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 5 ಕಿ.ಮೀ, ಹೈಸ್ಕೂಲ್ ಹುಡುಗರಿಗೆ 5 ಕಿ.ಮೀ, ಹುಡುಗಿಯರಿಗೆ 3 ಕಿ.ಮೀ, ಪ್ರಾಥಮಿಕ ಶಾಲಾ ಹುಡುಗರಿಗೆ 3 ಕಿ.ಮೀ, ಹುಡುಗಿಯರಿಗೆ 2 ಕಿ.ಮೀ ಓಟವಿದೆ. ಮುಕ್ತ ಮತ್ತು ಸ್ಪರ್ಧೇತರ ವಿಭಾಗದಲ್ಲಿ ‘ನಮ ಬಲಿಪುಗ’ ನಡೆಯಿತು.